ನಾನು ಹಿಂದೂ ಈದ್ ಆಚರಿಸುವುದಿಲ್ಲ ಎಂದು ವಿಧಾನಸೌಧದಲ್ಲೇ ಘರ್ಜಿಸಿದ ಯೋಗಿ ಆದಿತ್ಯನಾಥ್
ಲಖನೌ: ಹೋಳಿ ಹಬ್ಬದ ಸಂಭ್ರಮದ ವೇಳೆ ಪತ್ರಕರ್ತರೊಬ್ಬರು ‘ನೀವು ಕೇವಲ ಹಿಂದೂ ಹಬ್ಬಗಳನ್ನು ಮಾತ್ರ ಆಚರಿಸುತ್ತೀರಿ. ಈದ್ ಎಲ್ಲಿ ಆಚರಿಸುತ್ತೀರಿ ಎಂಬ ಪ್ರಶ್ನೆಗೆ ‘ನಾನು ಹಿಂದೂ ಈದ್ ಆಚರಿಸುವುದಿಲ್ಲ ಎಂದು ಖಡಕ್ ಉತ್ತರ ನೀಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದೀಗ ಮತ್ತೊಮ್ಮೆ ವಿಧಾನಸೌಧದಲ್ಲೇ ಆ ಮಾತುಗಳನ್ನು ಪುನರ್ ಉಚ್ಚರಿಸುವ ಮೂಲಕ ತಮ್ಮ ನೇರ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಯೋಗಿ ಆದಿತ್ಯನಾಥ್ ಹೇಳಿಕೆಯನ್ನು ವಿರೋಧಿಸಿ ಪ್ರತಿಪಕ್ಷಗಳು ವಿಧಾನಸೌಧದಲ್ಲಿ ಪ್ರಶ್ನಿಸಿದಾಗ ‘ಅದೇ ದಾಟಿಯಲ್ಲಿ ಉತ್ತರ ನೀಡುವ ಮೂಲಕ ತಮ್ಮ ಧರ್ಮನಿಷ್ಠೆಯನ್ನು ಮೆರೆದಿದ್ದಾರೆ. ಅಲ್ಲದೇ ಭವ್ಯ ಸಂಸ್ಕೃತಿ ಹೊಂದಿರುವ ಹಿಂದೂ ಧರ್ಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಚುನಾವಣೆಗಾಗಿ ಜನಿವಾರ ಧರಿಸುವ ಹಿಂದೂ ನಾನಲ್ಲ. ನಾನು ಧರ್ಮನಿಷ್ಠ ಹಿಂದೂ. ನನಗೆ ಡೋಂಗಿ ಮಾಡಲು ಬರುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಗೂ ಟಾಂಗ್ ನೀಡಿದ್ದಾರೆ. ನಾನು ಅವಕಾಶವಾದಿಯಲ್ಲ. ಒಮ್ಮೆ ಟೋಪಿ ಧರಿಸಿ, ಮತ್ತೊಮ್ಮೆ ಜನಿವಾರ ಧರಿಸಿ ನಾಟಕವಾಡುವುದು ನನಗೆ ತಿಳಿದಿಲ್ಲ. ನನ್ನ ಧರ್ಮ ಹಿಂದೂ, ನಾನು ಅದರ ಹಬ್ಬಗಳನ್ನು ಮಾತ್ರ ಆಚರಿಸುತ್ತೇನೆ ಎಂಬ ಸ್ಪಷ್ಟ ಮಾತುಗಳನ್ನಾಡುವ ಮೂಲಕ ಪ್ರತಿಪಕ್ಷಗಳ ಬಾಯಿ ಮುಚ್ಚಿಸಿದ್ದಾರೆ.
ನಾನು ಧರ್ಮದ ರೀತಿ ರಿವಾಜುಗಳನ್ನು ಹೆಮ್ಮೆಯಿಂದ ಆಚರಿಸುತ್ತೇನೆ. ಅಲ್ಲದೇ ಇತರೆ ಧರ್ಮಗಳವರ ಆಚರಣೆಗಳನ್ನು ಗೌರವಿಸುತ್ತೇನೆ. ಆದರೆ ನಾನು ಇತರೆ ಧರ್ಮಗಳ ಹಬ್ಬಗಳನ್ನು ಆಚರಿಸುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ಸ್ಪಷ್ಟ ನಿಲುವನ್ನು ಜಗತ್ತಿಗೆ ಸಾರಿದ್ದಾರೆ.
ವಿಧಾನಸೌಧದಲ್ಲಿ ಮಾತಾಡುತ್ತಾ ‘ಹೋಳಿ ಹಬ್ಬದ ವೇಳೆ ನಮಾಜ್ ಮಾಡುವ ವೇಳೆಯನ್ನು ಬದಲಾಯಿಸಿ ಹೋಳಿ ಆಚರಿಸಲು ಅನುಕೂಲ ಕಲ್ಪಿಸಿದ ಮುಸ್ಲಿಂ ಧರ್ಮಗುರುಗಳು, ಕೋಮು ಸೌಹಾರ್ದತೆಯ ಸಂದೇಶ ಸಾರಿದಕ್ಕೆ ಧನ್ಯವಾದಗಳನ್ನು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
Leave A Reply