ಮುಗ್ದ ಮಕ್ಕಳನ್ನೂ ಹಿಂದೂ-ಮುಸ್ಲಿಂ ಧರ್ಮದ ಆಧಾರದಲ್ಲಿ ಒಡೆದ ಕಾಂಗ್ರೆಸ್! ಚುನಾವಣೆ ಬಳಿಕ ಭಿಕ್ಷಾಂ ದೇಹಿ ಎನ್ನುತ್ತಾ?
ಕಳೆದ ವರ್ಷ ಕರಾವಳಿ ಭಾಗದ RSS ಮುಖಂಡ ಪ್ರಭಾಕರ ಭಟ್ಟರ ಕಲ್ಲಡ್ಕ ಶಾಲೆಗೆ ಸರಕಾರದ ವತಿಯಿಂದ ಬರುತ್ತಿದ್ದ ಅನುದಾನವನ್ನು ನೀತಿ ನಿಯಮಗಳ ನೆಪ ಒಡ್ಡಿ ಸಿಧ್ಧರಾಮಯ್ಯ ಸರಕಾರ ರದ್ದು ಮಾಡಿತ್ತು.ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ “ಭಿಕ್ಷಾಂ ದೇಹಿ” ಅಭಿಯಾನದ ಮೂಲಕ ಹಾಗೂ ರಾಜ್ಯ ಬಿಜೆಪಿ ನಾಯಕರು ಮನೆ ಮನೆಗೆ ತೆರಳಿ ಅಕ್ಕಿ ಸಂಗ್ರಹಿಸುವ ಮೂಲಕ ಮಕ್ಕಳಿಗೆ ಅನ್ನ ದೊರಕಿಸುವಲ್ಲಿ ಶ್ರಮವಹಿಸಿದ್ದರು.
ಆದರೆ ಇದೀಗ ಬೆಂಗಳೂರಿನಲ್ಲಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಶಿಕ್ಷಣ ಸಂಸ್ಥೆಗೆ ಕೋಟಿಗಟ್ಟಲೆ ಹಣ ನೀಡಲು ಸಿಧ್ದರಾಮಯ್ಯ ಸರಕಾರ ಮುಂದಾಗಿದೆ.ಇದರಲ್ಲಿ ಸಚಿವ ಕೆ.ಜೆ.ಜಾರ್ಜ್ ರವರ ರಾಜಕೀಯ ಹಿತಾಸಕ್ತಿ ಅಡಗಿರುವ ಬಗ್ಗೆ ಅನುಮಾನ ಮೂಡುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಬಿಬಿಎಂಪಿಯಲ್ಲಿ ಹಣವಿಲ್ಲದ ಕಾರಣ ಆದಾಯದ ಮೂಲವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿ ಪಾಲಿಕೆ ಇದೆ.ಇಂತಹ ಸಂದರ್ಭದಲ್ಲಿ ಬೆಂಗಳೂರು ನಗರ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರ ಕ್ಷೇತ್ರವಾದ ಸರ್ವಜ್ಞನಗರ ವಿಧಾನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅರೆಬಿಕ್ ಕಾಲೇಜಿನ ಅಭಿವೃದ್ಧಿಗೆ 10 ಕೋಟಿ ಹಾಗೂ ಜಾಮಿಯ ಮಸೀದಿ ಮತ್ತು ಮುಸ್ಲಿಂ ಚಾರಿಟೇಬಲ್ ಫಂಡ್ ಟ್ರಸ್ಟ್ ಸ್ಕೂಲ್ ಜಾಮಿಯ ಉಲ್ ಉಲಾಮು ಗ್ರೂಪ್ ಶಾಲಾ ಕಟ್ಟಡ ನಿರ್ಮಾಣಕ್ಕೆ 10 ಕೋಟಿ ಹಣವನ್ನು ಬಿಬಿಎಂಪಿ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.
ಇದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಕಲ್ಲಡ್ಕ ಪ್ರಭಾಕರ ಭಟ್ ರ ಮುಂದಾಳತ್ವದಲ್ಲಿ ನಡೆಯುತ್ತಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ನೀಡಲಾಗುತ್ತಿದ್ದ ಅನುದಾನಕ್ಕೆ ಕತ್ತರಿ ಹಾಕಿರುವ ಸರ್ಕಾರ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಶಿಕ್ಷಣ ಸಂಸ್ಥೆ ಮೇಲೆ ಏಕೆ ಪ್ರೀತಿ ಎಂಬ ಪ್ರಶ್ನೆ ಮೂಡುತ್ತಿದೆ. ಫೆ.28 ರಂದು ಮಂಡನೆಯಾದ ಬಿಬಿಎಂಪಿ ಆಯವ್ಯಯದಲ್ಲಿ ಬರೋಬ್ಬರಿ 20 ಕೋಟಿ. ಖಾಸಗಿ ಶಿಕ್ಷಣ ಸಂಸ್ಥೆಗೆ ಘೋಷಿಸಿದ್ದು, ಇಸ್ಲಾಮಿಕ ಧರ್ಮದ ಮತದಾರರ ಓಲೈಕೆಗಾಗಿಯೇ ಕೋಟಿ ಕೋಟಿ ಅನುಧಾನ ಘೋಷಣೆ ಮಾಡಲಾಗಿದೆ ಎಂಬ ಅನುಮಾನ ಮೂಡಿದ್ದು, ಸಚಿವ ಜಾರ್ಜ್ ಮಾಸ್ಟರ್ ಪ್ಲ್ಯಾನ್ ಗೆ ಸಿದ್ಧರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿಯೇ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
Leave A Reply