ಗೌರವ ನೀಡದ್ದಕ್ಕೆ ಸೈನಿಕನಿಗೆ ದಂಡ ವಿಧಿಸಿದ್ದರಿಂದ ಅಸಮಾಧಾನಗೊಂಡ ಮೋದಿ ಏನು ಮಾಡಿದರು ಗೊತ್ತೇ?
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೆಂದರೇನೇ ಹಾಗೆ. ಅವರು ದೇಶವನ್ನುಎಷ್ಟು ಪ್ರೀತಿಸುತ್ತಾರೋ, ಅಷ್ಟೇ ಪ್ರೀತಿಯನ್ನು ಗಡಿ ಕಾಯುವ ಸೈನಿಕರ ಮೇಲೆ ಇಟ್ಟಿದ್ದಾರೆ. ಇದೇ ಕಾರಣಕ್ಕೆ ಮೋದಿ ಅವರು ದೀಪಾವಳಿಯನ್ನು ಸೈನಿಕರ ಜತೆ ಆಚರಿಸುತ್ತಾರೆ. ಕಳೆದ ವರ್ಷ ಆಚರಿಸಿದ್ದಾರೆ ಸಹ.
ಇಂತಹ ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರ ಮೇಲೆ ತಮಗೆಷ್ಟು ಗೌರವ ಇದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಶ್ರೀ (ಹಾನರೇಬಲ್) ಎಂದು ಸಂಬೋಧಿಸದ ಬಿಎಸ್ಎಫ್ ಯೋಧರೊಬ್ಬರಿಗೆ ಸೈನ್ಯ ವಿಧಿಸಿದ ದಂಡದ ಆದೇಶವನ್ನು ತೆರವುಗೊಳಿಸಿ ಎಂದು ಮೋದಿ ಅವರು ನಿರ್ದೇಶನ ನೀಡಿದ್ದಾರೆ.
ಹೌದು, ಫೆ.21ರಂದು ಪಶ್ಚಿಮ ಬಂಗಾಳದ ಮಹಾತ್ಪುರ ಎಂಬಲ್ಲಿ ನಡೆದ 15ನೇ ಬೆಟಾಲಿಯನ್ನಿನ ಪರೇಡ್ ವೇಳೆ ಬಿಎಸ್ಎಫ್ ಯೋಧ ಸಂಜೀವ್ ಕುಮಾರ್ ಅವರು ಪ್ರಧಾನಿಗೆ ಶ್ರೀ ಎಂದು ಹೇಳದ ಕಾರಣ, ಮೋದಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಯೋಧರಿಗೆ 7 ದಿನದ ಸಂಬಳವನ್ನು ದಂಡದ ರೂಪದಲ್ಲಿ ನೀಡುವಂತೆ ಸೂಚಿಸಲಾಗಿತ್ತು.
ಇದನ್ನು ತಿಳಿದ ಪ್ರಧಾನಿ ಮೋದಿ ಅವರು ಅಸಮಾಧಾನಗೊಂಡಿದ್ದು, ಯೋಧನಿಗೆ ವಿಧಿಸಿರುವ ದಂಡ ಅಥವಾ ಶಿಕ್ಷೆಯನ್ನು ತೆರವುಗೊಳಿಸಬೇಕು ಎಂದು ನಿರ್ದೇಶಿಸಿದ್ದಾರೆ. ಕೆಲವು ಸೂಕ್ಷ್ಮ ವಿಚಾರಗಳಲ್ಲೂ ಮೋದಿ ಅವರು ಎಷ್ಟೊಂದು ದೊಡ್ಡ ಮಟ್ಟದಲ್ಲಿ ಯೋಚಿಸುತ್ತಾರೆ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಸಿಗಲಿಕ್ಕಿಲ್ಲ.
Leave A Reply