ಇದೇ ಅಲ್ಲವೇ ಬದಲಾವಣೆ, ಆರ್ ಎಸ್ ಎಸ್ ಕಾರ್ಯಕ್ಕೆ ಎಡಪಕ್ಷದ ನಾಯಕ ಪ್ರಕಾಶ್ ಕಾರಟ್ ಶ್ಲಾಘನೆ
ದೆಹಲಿ: ಸದಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಬೊಗಳೆ ಬಿಡುತ್ತಿದ್ದ ಎಡಚರರ ಪಕ್ಷಗಳು, ಇದೀಗ ಸಂಘದ ಕಾರ್ಯವೈಖರಿಯನ್ನು ಮೆಚ್ಚುತ್ತಿವೆ. ಶ್ಲಾಘನೆ ವ್ಯಕ್ತಪಡಿಸುತ್ತಿವೆ. ಇದಕ್ಕೆ ಮೂಲ ಕಾರಣ ತ್ರಿಪುರಾದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜನಪರ ಕಾರ್ಯಗಳು, ಅದರ ಪ್ರತಿಫಲವಾಗಿ ತ್ರಿಪುರಾದಲ್ಲಿ ಅಧಿಕಾರಕ್ಕೇರಿರುವ ಬಿಜೆಪಿ ಎಂದು ಎಡಪಕ್ಷದ ಪ್ರಮುಖ ನಾಯಕ ಪ್ರಕಾಶ್ ಕಾರಟ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ತ್ರಿಪುರಾದಲ್ಲಿ ಬಿಜೆಪಿ ಗೆಲುವಿಗೆ ಮುಖ್ಯಕಾರಣ ಆರ್ ಎಸ್ ಎಸ್. ಗುಡ್ಡಗಾಡು ಪ್ರದೇಶದಲ್ಲಿ ತಳಮಟ್ಟದಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸಿತು. ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ಆರಂಭಿಸಿ, ಜನರ ಹೃದಯ ಮಂದಿರದಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು. ಆದ್ದರಿಂದ ತ್ರಿಪುರಾದಲ್ಲಿ ಎರಡು ದಶಕದಿಂದ ಆಡಳಿತ ನಡೆಸಿದ ಕಮ್ಯುನಿಸ್ಟ್ ಆಡಳಿತವನ್ನು ಜನರು ತಿರಸ್ಕರಿದ್ದರು. ಬಿಜೆಪಿ ಅಧಿಕಾರಕ್ಕೇರಿತು ಎಂದು ಹೇಳಿದ್ದಾರೆ.
ನಮ್ಮ ಪಕ್ಷಗಳು ಗ್ರಾಮೀಣ ಭಾಗವನ್ನು ನಿರ್ಲಕ್ಷಿಸಿದೇವು. ನಾವು ನಿರ್ಲಕ್ಷಿಸಿದ ತಾಣಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಮಾಜ ಸೇವೆಗಳನ್ನು ಮಾಡುತ್ತ ಜನರ ಮನಸ್ಸು ಗೆದಿದೆ. ಎಂದು ಕಾರಟ್ ಹೇಳಿದ್ದಾರೆ.
ಆರ್ ಎಸ್ ಎಸ್ ಮಾದರಿ ಸಮಾಜ ಸೇವೆ ಮಾಡಬೇಕು: ಈ ಗ್ರಾಮೀಣ ಭಾಗಗಳಲ್ಲಿ ಬಿಜೆಪಿಗೆ ಹೆಚ್ಚಿನ ಮತದಾನವಾಗಿದೆ. ಇಡೀ ತ್ರಿಪುರಾದಲ್ಲಿ ಕಮಲ ಅರಳಿತು. ನಾವು ಚುನಾವಣೆಯನ್ನು ಗೆಲ್ಲಬೇಕಾದರೆ ಕಾರ್ಯಾಚರಣೆ ಅಥವಾ ಪ್ರಚಾರ ನಡೆಸುವುದು ಬೇಕಿಲ್ಲ. ಆರ್‌ಎಸ್‌ಎಸ್ ಮಾದರಿಯಲ್ಲಿ ಸಮಾಜ ಸೇವೆ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಪ್ರಕಾಶ್ ಕಾರಟ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯ ವೈಖರಿಗೆ ಶರಣಾಗಿದ್ದಾರೆ.
Leave A Reply