• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

3000ಕ್ಕೂ ಅಧಿಕ ಸಿಖ್ಖರನ್ನು ಕೊಂದ ನಿಜವಾದ ನರಹಂತಕ ಪಕ್ಷ ಯಾವುದೆಂದು ಎಲ್ಲರಿಗೂ ಗೊತ್ತಿದೆ ಸಿದ್ದರಾಮಯ್ಯನವರೇ!

ವಿಶಾಲ್ ಗೌಡ ಕುಶಾಲನಗರ Posted On March 9, 2018
0


0
Shares
  • Share On Facebook
  • Tweet It

ಕೆಲವೊಂದು ಸಲ ಅಲ್ಲ, ಬಹುತೇಕ ಸಂದರ್ಭಗಳಲ್ಲಿ ಅನಿಸುತ್ತದೆ, ಈ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾಕೆ ಹೀಗೆ ಎಂದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ದಿನಕ್ಕೊಬ್ಬರ ಮೇಲೆ ದಾಳಿಯಾಗುತ್ತಿದೆ, ಕಾಂಗ್ರೆಸ್ಸಿನ ಗೂಂಡಾಗಳನ್ನೇ ನಿಭಾಯಿಸಲು ಮುಖ್ಯಮಂತ್ರಿಗೆ ಸಾಧ್ಯವಾಗುತ್ತಿಲ್ಲ.

ಹೀಗಿದ್ದರೂ ಸಿದ್ದರಾಮಯ್ಯನವರು ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸುಖಾಸುಮ್ಮನೆ ಟೀಕಿಸುವುದರಲ್ಲೇ ಕಾಲಕಳೆಯುತ್ತಾರೆ. ಸೂರ್ಯನ ಕಡೆ ಮುಖಮಾಡಿ ಉಗಿದು ರಾಡಿ ಮಾಡಿಕೊಳ್ಳುವ ಬದಲು ಸಿದ್ದರಾಮಯ್ಯನವರು, ಇದೇ ಸಮಯವನ್ನು ರಾಜ್ಯದ ಜನರ ಹಿತ ಕಾಪಾಡಲು ವ್ಯಯಿಸಿದ್ದರೆ, ಕನಿಷ್ಠ ನೈತಿಕತೆಯನ್ನಾದರೂ ಉಳಿಸಿಕೊಳ್ಳುತ್ತಿದ್ದರೇನೋ.

ಇರಲಿ, ಈಗ ವಿಷಯಕ್ಕೆ ಬರೋಣ. ಮೊನ್ನೆ ಟ್ವಿಟರ್ ಖಾತೆ ಕೈಗೆತ್ತಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು, “ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮಾತನಾಡುವ ಸ್ಥಿತಿಯಲ್ಲಿ ಇದ್ದಿದ್ದರೆ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಆಡ್ವಾಣಿ ಅವರಿಗೆ ಮಾತನಾಡಲು ಅವಕಾಶ ನೀಡಿದರೆ “ನರಹಂತಕರು” ಯಾರು ಎಂದು ಅವರೇ ಹೇಳುತ್ತಿದ್ದರು. ಅವರಿಬ್ಬರ ಮೌನ ಬಿಜೆಪಿಯ ಮಾನ” ಉಳಿಸಿದೆ ಎಂದು ದೊಡ್ಡದಾಗಿ ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯನವರು ಇಷ್ಟೆಲ್ಲ ವಿಷ ಕಾರಲು, ಅಲ್ಲೆಲ್ಲೋ ತ್ರಿಪುರದಲ್ಲಿ ಕೆಲವರು ಲೆನಿನ್ ಮೂರ್ತಿ ಕೆಡವಿದ್ದಕ್ಕೆ ಇಲ್ಲಿ ಕುಳಿತ ಸಿಎಂ, ಪ್ರಧಾನಿಯವರ ಬಗ್ಗೆ ಪರೋಕ್ಷವಾಗಿ ಟೀಕಿಸಿದ್ದಾರೆ.

ಅಲ್ಲ ಸ್ವಾಮಿ ಸಿದ್ದರಾಮಯ್ಯನವರೇ, ನಿಮಗೆ ಕಾಮನ್ ಸೆನ್ಸ್ ಎಂಬುದಾದರೂ ಇದೆಯಾ? ಯಾವ ಅರ್ಥದಲ್ಲಿ ನೀವು ಮಾತನಾಡಿದ್ದೀರಿ ಎಂಬ ಕನಿಷ್ಠ ಅರಿವಾದರೂ ನಿಮಗಿದೆಯಾ? ಟೀಕಿಸುವ ಮುನ್ನ ಯೋಚಿಸುವುದಾದರೂ ಬೇಡವೇ?

ಅಷ್ಟಕ್ಕೂ, ವಾಜಪೇಯಿ, ಆಡ್ವಾಣಿ ಬಿಡಿ, ನಿಜವಾದ ಹಂತಕರು ಯಾರು ಎಂದು ಹೇಳುವ ತಾಕತ್ತು, ನೈತಿಕತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಿದೆಯಾ? ಅದೇ ಮುಗಿದು ಹೋದ, ನ್ಯಾಯಾಲಯದಲ್ಲಿ ಮೋದಿ ಅವರಿಗೆ ಕ್ಲೀನ್ ಚಿಟ್ ಸಿಕ್ಕ ಗೋಧ್ರಾ ಹತ್ಯಾಕಾಂಡದ ಬಗ್ಗೆಯಲ್ಲವೇ ಸಿಎಂ ರಾಡಿ ಸಾರಿಸೋದು. ನೇರವಾಗಿ ಹೇಳಿದರೆ ಜನ ತಮ್ಮ ಮುಖಕ್ಕೇ ಉಗಿಯುತ್ತಾರೆ ಎಂದು ತಾನೆ ಪರೋಕ್ಷವಾಗಿ ಹೇಳಿದ್ದು.

ಇನ್ನು ನರಹಂತಕರು ಎಂದು ಸಿಎಂ ಸಂಬೋಧಿಸಿದ್ದಾರಲ್ಲ, ದೇಶದ ಇತಿಹಾಸದಲ್ಲಿ ನರಹಂತಕತನಕ್ಕೆ ಇಳಿದ ಪಕ್ಷ ಕಾಂಗ್ರೆಸ್ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಭಾವಿಸಿದ್ದೀರಾ ಸಿದ್ದರಾಮಯ್ಯನವರೇ?

ಇದೇ ಇಂದಿರಾಗಾಂಧಿಯವರನ್ನು 1984ರಲ್ಲಿ ಅವರ ಅಂಗರಕ್ಷಕರೇ ಹತ್ಯೆ ಮಾಡಿದಾಗ ಏನಾಯಿತು? ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು, ಕೈಗೆ ಸಿಕ್ಕ ಸಿಖ್ಖರನ್ನು ಕೊಚ್ಚಿ ಹಾಕಿದರು. ಈ ನರಮೇಧದಲ್ಲಿ ಹತ್ಯೆಗೀಡಾದ ಸಿಖ್ಖರ ಸಂಖ್ಯೆ ಮೂರು ಸಾವಿರಕ್ಕೂ ಅಧಿಕ.

ಇಂತಹ ನರಮೇಧ ನಡೆದ ಬಳಿಕ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದೇನು ಗೊತ್ತೇ? “ದೊಡ್ಡ ಆಲದ ಮರ ಧರೆಗುರುಳಿದಾಗ, ಭೂಮಿ ನಲುಗುವುದು ಸಹಜ” ಎಂದಿದ್ದರು. ಹೇಳಿ ಸ್ವಾಮಿ ನಿಜವಾದ ನರಹಂತಕ, ರಾಜೀವ್ ಗಾಂಧಿಯೋ, ಮೋದಿಯೋ?

ಅಷ್ಟೇ ಅಲ್ಲ, ದೇಶದಲ್ಲಿ ಎಲ್ಲೆಲ್ಲಿ ಕಾಂಗ್ರೆಸ್ ಆಡಳಿತವಿತ್ತೋ, ಅಲ್ಲೆಲ್ಲ ನರಮೇಧಗಳೇ ನಡೆದಿವೆ. 2013ರಲ್ಲಿ ಉತ್ತರ ಪ್ರದೇಶದ ಮುಜಫರ್ ಗಡದಲ್ಲಿ ನಡೆದ ನರಮೇಧದಲ್ಲಿ 20 ಹಿಂದೂಗಳೂ ಸೇರಿ 61 ಜನ ಸತ್ತರು, 2012ರಲ್ಲಿ ಆಸ್ಸಾಂನಲ್ಲಿ ನಡೆದ ಗಲಭೆಯಲ್ಲಿ 77, 2010ರಲ್ಲಿ ಪಶ್ಚಿಮ ಬಂಗಾಳದ ಉತ್ತರ ಪರಗಣದ ದೆಂಗಾಂಗ ಗಲಭೆಯಲ್ಲಿ ಸತ್ತವರ ಸಂಖ್ಯೆ 24, 2006ರ ಅಲಿಗಡ ಗಲಾಟೆಯಲ್ಲಿ ಐವರು ಮಡಿದರು. ಇಲ್ಲೆಲ್ಲ ಕಾಂಗ್ರೆಸ್ ಸರ್ಕಾರವೇ ಅಸ್ತಿತ್ವದಲ್ಲಿತ್ತು.

ಇಷ್ಟಿದ್ದರೂ ಕಾಂಗ್ರೆಸ್ ಸರ್ಕಾರ ಗಲಭೆ ನಿಯಂತ್ರಿಸುವಲ್ಲಿ, ನಡೆಯದಂತೆ ತಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಯಿತು. ಇಂತಹ ನರಮೇಧವನ್ನು ತಡೆಯಲು ವಿಫಲವಾದ ಕಾಂಗ್ರೆಸ್ಸೇ ಇದರ ಹೊಣೆ ಹೊರಬೇಕಲ್ಲವೇ? ನರಹಂತಕರು ಯಾರು ಸಿದ್ದರಾಮಯ್ಯನವರೇ? ಹೇಳುವ ತಾಕತ್ತಿದೆಯಾ?

ಪ್ರಸ್ತುತ ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ಮೊನ್ನೆ ನಡೆದ 3 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ಕರ್ನಾಟಕದಲ್ಲೂ ಆಡಳಿತ ವಿರೋಧಿ ಅಲೆಯಿದ್ದು, ಇದರಿಂದ ಕಂಗೆಟ್ಟಿರುವ ಸಿದ್ದರಾಮಯ್ಯನವರು ಮೋದಿ, ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂಬುದು ನಿಚ್ಚಳವಾಗಿದೆ. ಆದರೆ ಸಿದ್ದರಾಮಯ್ಯನವರು ಇದನ್ನು ಅರಿತುಕೊಳ್ಳುವುದು ಯಾವಾಗ?

 

0
Shares
  • Share On Facebook
  • Tweet It




Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
ವಿಶಾಲ್ ಗೌಡ ಕುಶಾಲನಗರ December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
ವಿಶಾಲ್ ಗೌಡ ಕುಶಾಲನಗರ December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search