ಕೇಂದ್ರಾಡಳಿತದಲ್ಲಿರುವ ‘ದಿಯು’ ಶೇ.100 ಸೋಲಾರ್ ಶಕ್ತಿ ಹೊಂದಿದ ದೇಶದ ಏಕೈಕ ಪ್ರದೇಶ

ಸುರತ್: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ದೂರದೃಷ್ಟಿಯ ಯೋಜನೆಗಳು ಇದೀಗ ಒಂದೋಂದೆ ಸಾಕಾರವಾಗುತ್ತಿವೆ. ಕೇಂದ್ರಾಡಳಿತ ಪ್ರದೇಶವಾಗಿರುವ ದಿಯು ಇದೀಗ ಶೇ.100 ರಷ್ಟು ಸೋಲಾರ್ ಶಕ್ತಿಯ ಇಂದನವನ್ನು ಬಳಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಪ್ರದೇಶವಾಗಿ ಹೊರ ಹೊಮ್ಮಿದೆ.
ದೇಶದ ಪ್ರಮುಖ ಪ್ರವಾಸೋಧ್ಯಮ ತಾಣಗಳಲ್ಲಿ ಒಂದಾಗಿರುವ ದಿಯು ಪ್ರದೇಶದಲ್ಲಿ ನವೀಕರಿಸಬಹುದಾದ ಇಂಧನ ಬಳಸುವ ಸಾಮರ್ಥವ್ಯನ್ನು ಹೆಚ್ಚಿಸಲಾಗಿದೆ. ಕಳೆದ ಮೂರು ವರ್ಷದಿಂದ ದಿಯು ಪ್ರದೇಶದಲ್ಲಿ ಅತಿ ಹೆಚ್ಚಿನ ಸೋಲಾರ್ ಪ್ಲಾಂಟ್ ಗಳನ್ನು ಸ್ಥಾಪಿಸಿದ್ದು, ನವೀಕರಿಸಬಹುದಾದ ಇಂಧನವನ್ನು ಸಮಪರ್ಕವಾಗಿ ಬಳಸಿಕೊಳ್ಳುವಲ್ಲಿ ಭಾರಿ ಪ್ರಗತಿಯನ್ನು ಕಂಡಿದೆ.
ಕೇವಲ 42 ಚದರ ಕಿಲೋ ಮಿಟರ್ ಇರುವ ದಿಯು ಪ್ರದೇಶವಿದ್ದರೂ, ಇರುವ ಪ್ರದೇಶದಲ್ಲೇ ಸುಮಾರು 50 ಎಕರೆ ಪ್ರದೇಶದಲ್ಲಿ ಸೋಲಾರ್ ಪ್ಲಾಂಟ್ ಗಳನ್ನು ಸ್ಥಾಪಿಸಿ, ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಪ್ರಸ್ತುತ ಸ್ಥಾಪಿಸಲಾಗಿರುವ ಸೋಲಾರ್ ಪ್ಲಾಂಟ್ ಗಳಿಂದ 13 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ದಿಯು ಪ್ರದೇಶದಲ್ಲಿ ಮುಂಚೆ ವಿದ್ಯುತ್ ಗಾಗಿ ಗುಜರಾತ್ ಸರ್ಕಾರದ ಗ್ರಿಡ್ ನಿಂದ ವಿದ್ಯುತ್ ಪಡೆಯುತ್ತಿತ್ತು. ಇದೀಗ ಸ್ವಾವಲಂಭಿಯಾಗಿದ್ದು, ಶೇ.100 ರಷ್ಟು ವಿದ್ಯುತ್ ಸೋಲಾರ್ ಮೂಲಕ ಉತ್ಪಾದಿಸುತ್ತಿದೆ. ಗುಜರಾತ್ ನಿಂದ ವಿದ್ಯುತ್ ಪಡೆಯುವಾಗ ದಿಯು ಪ್ರದೇಶ ತೀವ್ರ ಸಮಸ್ಯೆಯನ್ನು ಎದುರಿಸಿತು. ಅಲ್ಲದೇ ಹೆಚ್ಚಿನ ಹಣವನ್ನು ಖರ್ಚು ಮಾಡಿತ್ತು. ಇದೀಗ ಆ ಸಮಸ್ಯೆ ದೂರವಾಗಿದೆ. ಮೂರು ವರ್ಷದಲ್ಲಿ ದಿಯು ಪ್ರದೇಶದ ವಿದ್ಯುತ್ ಸಮಸ್ಯೆಗೆ ಮುಕ್ತಿ ಹಾಡಲಾಗಿದೆ.
56,000 ಜನಸಂಖ್ಯೆಯಿರುವ ದಿಯು ಪ್ರದೇಶದಲ್ಲಿ ವಿದ್ಯುತ್, ನೀರಿಗಾಗಿ ಗುಜರಾತ್ ಸರ್ಕಾರವನ್ನೇ ಅವಲಂಭಿಸಿದೆ.. ಗುಜರಾತ್ ಸರ್ಕಾರದ ಮೇಲಿನ ಅವಲಂಭನೆ ಕಡಿಮೆ ಮಾಡಲು ಸೋಲಾರ್ ಯೋಜನೆ ಜಾರಿಗೆ ತರಲಾಗಿದೆ ಎಂದು ದಿಯು ಮತ್ತು ದಮನ್ ಪ್ರದೇಶದ ವಿದ್ಯುತ್ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್ ಮಿಲಿಂದ್ ತಿಳಿಸಿದ್ದಾರೆ. ದಿಯು ಸ್ಥಳೀಯರಿಗೆ ಕೇವಲ 7 ಮೇಗಾ ವ್ಯಾಟ್ ವಿದ್ಯುತ್ ಬಳಕೆಯಾಗುತ್ತಿದ್ದು, ಉಳಿದ ವಿದ್ಯುತ್ ಮಾರಾಟ ಮಾಡುವ ಮೂಲಕ ಆರ್ಥಿಕ ಬಲವನ್ನು ಹೊಂದಲಾಗುತ್ತಿದೆ.
Leave A Reply