ಉಗ್ರ ಹಫೀಜ್ ಸಯೀದ್ ಬೆಂಬಲಿತ ಪಕ್ಷಕ್ಕೆ ಪಾಕ್ ಕೋರ್ಟ್ ಅಸ್ತು
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಯೋತ್ಪಾದಕ ಪೋಷಣೆಯ ಕಾರ್ಯವನ್ನು ಇಷ್ಟು ದಿನ ಸರ್ಕಾರ ಮಾಡುತ್ತಿರುವಾಗಲೇ, ಇದೀಗ ಆ ಕಾರ್ಯಕ್ಕೆ ಪರೋಕ್ಷವಾಗಿ ಪಾಕಿಸ್ತಾನ ಕೋರ್ಟ್ ವೊಂದು ಮಾಡಿದೆ. 26/9 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಭಯೋತ್ಪಾದಕ ಹಫೀಜ್ ಸಯೀದ್ ನ ಮಿಲ್ಲಿ ಮುಸ್ಲಿಂ ಲೀಗ ರಾಜಕೀಯ ಪಕ್ಷವನ್ನು ನೊಂದಾಯಿಸಿಕೊಳ್ಳುವಂತೆ ಪಾಕಿಸ್ತಾನದ ಕೋರ್ಟ್ ಚುನಾವಣೆ ಆಯೋಗಕ್ಕೆ ಆದೇಶ ನೀಡಿದೆ.
ಪಕ್ಷದ ನೋಂದಾವಣೆ ಕುರಿತು ಚುನಾವಣೆ ಆಯೋಗ ನಿರಾಕರಿಸಿದ್ದು ಅಸಂವಿಧಾನಿಕ ಎಂದು ಮಿಲ್ಲಿ ಮುಸ್ಲಿಂ ಲೀಗ್ ಪಕ್ಷದ ಅಧ್ಯಕ್ಷ ಸೈಫುಲ್ಲಾ ಖಲೀದ್ ಕೋರ್ಟ್ ಮೊರೆ ಹೋಗಿದ್ದ. ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಪಕ್ಷದ ನೋಂದಣಿಗೆ ಪಾಕ್ ಚುನಾವಣಾ ಆಯೋಗ ಹಿಂದೇಟು ಹಾಕಿತ್ತು.
ಏಪ್ರಿಲ್ 4ರ ಒಳಗೆ ಸಯೀದ್‌ನನ್ನು ಬಂಧಿಸುವ ಸಾಧ್ಯತೆಗೆ ಪಾಕಿಸ್ತಾನದ ಕೋರ್ಟ್ ತಡೆಯಾಜ್ಞೆ ತಂದಿರುವ ವೇಳೆಯೇ ಈ ಆದೇಶ ಹೊರ ಬಿದ್ದಿದ್ದೆ. ಆರ್ಥಿಕ ಕ್ರಮ ಟಾಸ್ಕ್ ಫೋರ್ಸ್‌ನ ಕಪ್ಪು ಪಟ್ಟಿಯಲ್ಲಿ ಪಾಕಿಸ್ತಾನವನ್ನು ಸೇರಿಸಬೇಕು ಎಂದು ಅಂತರ್ ಸರ್ಕಾರಿ ಮಟ್ಟದ ಸಭೆಯೊಂದರಲ್ಲಿ ಅಮೆರಿಕ ಹಾಗೂ ಯುರೋಪ್ ನೇತೃತ್ವದ ಪಾಶ್ಚತ್ಯ ಶಕ್ತಿಗಳು ಆಗ್ರಹಿಸಿದ ಬೆನ್ನಲ್ಲೇ ಈ ಆದೇಶ ಹೊರ ಬಿದ್ದಿದ್ದು, ಭಯೋತ್ಪಾದಕ ಹಫೀಜ್ ಸಯೀದ್ ಗೆ ಇದೀಗ ರಾಜಕೀಯ ಬಲವು ಬರುವ ಸಾಧ್ಯತೆ ಇದೆ.
ಫೆಬ್ರವರಿಯಲ್ಲಿ ಪ್ಯಾರಿಸ್‌ನಲ್ಲಿ ನಡೆದ ಎಫ್‌ಎಟಿಎಫ್ ಸಭೆಯಲ್ಲಿ ಸಯೀದ್ ಆರಂಭಿಸಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾಕ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿತ್ತು. ಅಮೆರಿಕ ಸಯೀದ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿತ್ತು.
Leave A Reply