ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ರಾಜಸ್ಥಾನ ಬಿಜೆಪಿ ಸರ್ಕಾರದ ನಡೆ ಎಲ್ಲರೂ ಅನುಸರಿಸಲಿ!
ಜೈಪುರ: ದೇಶದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಸುದ್ದಿಯಾದಾಗಲೆಲ್ಲ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬ ಕೂಗು ಕೇಳಿಬರುತ್ತದೆ. ಆದರೆ ಯಾವ ಸರ್ಕಾರಗಳೂ ಈ ಕುರಿತು ಮನಸ್ಸು ಮಾಡುವುದಿಲ್ಲ, ಕಾನೂನು ರೂಪಿಸುವುದಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.
ಆದರೆ ಈ ಆರೋಪವನ್ನು ರಾಜಸ್ಥಾನದಲ್ಲಿ ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರ ಸುಳ್ಳು ಮಾಡಿದ್ದು, 12 ವರ್ಷದೊಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವ ದುರುಳರಿಗೆ ಗಲ್ಲು ಶಿಕ್ಷೆ ವಿಧಿಸುವ ಮಹತ್ವದ ನಿರ್ಧಾರಕ್ಕೆ ಬಂದಿದೆ.
ಈ ಕುರಿತ ಮಸೂದೆಗೆ ರಾಜಸ್ಥಾನ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದ್ದು, ರಾಜ್ಯದ ಅತ್ಯಾಚಾರಿಗಳಿಗೆ ಇನ್ನು ಗಲ್ಲು ಶಿಕ್ಷೆಯೇ ಗತಿಯಾಗಲಿದೆ. ಆದಾಗ್ಯೂ, ಸರ್ಕಾರದ ಈ ನಿರ್ಧಾನ ಅತ್ಯಾಚಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಅದಕ್ಕಾಗಿ ಅಪರಾಧ ಕಾನೂನು (ರಾಜಸ್ಥಾನ ತಿದ್ದುಪಡಿ ಕಾಯಿದೆ) ಎಂಬ ಮಸೂದೆ ರಚಿಸಿದ್ದು, ವಿಧಾನಸಭೆಯಲ್ಲಿ ರಾಜ್ಯ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ಮಸೂದೆ ಪರಿಚಯಿಸಿದ್ದಾರೆ.
12 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲುಶಿಕ್ಷೆ ಅಥವಾ 14 ವರ್ಷಕ್ಕಿಂತ ಕಡಿಮೆ ಇಲ್ಲದ ಜೀವಾವಧಿ ಶಿಕ್ಷೆ ವಿಧಿಸಬಹುದು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ಈಗಾಗಲೇ ಬಿಜೆಪಿ ಆಡಳಿತ ನಡೆಸುತ್ತಿರುವ ಮಧ್ಯಪ್ರದೇಶದಲ್ಲಿ 2017ರ ಡಿಸೆಂಬರ್ ನಲ್ಲಿ ಹಾಗೂ ಹರಿಯಾಣದಲ್ಲಿ ಕಳೆದ ಫೆಬ್ರವರಿಯಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ರಚಿಸಿವೆ. ಇದೇ ನಡೆ ಎಲ್ಲ ರಾಜ್ಯಗಳಲ್ಲೂ ಜಾರಿಗೆ ಬಂದರೆ ಅತ್ಯಾಚಾರ ಕಡಿಮೆಯಾಗುತ್ತದೆ ಎಂಬುದು ಜನರ ಒತ್ತಾಸೆಯಾಗಿದೆ.
Leave A Reply