ರಾಹುಲ್ ಗಾಂಧಿ ದೇವಾಲಯ ಭೇಟಿಯನ್ನು ಅಸಾದುದ್ದೀನ್ ಓವೈಸಿ ಹೇಗೆ ಟೀಕಿಸಿದ್ದಾರೆ ಗೊತ್ತಾ?
ದೆಹಲಿ: ಗುಜರಾತ್ ನಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಲೇ ಹಿಂದುತ್ವದ ನಕಲಿ ವೇಷ ತೊಟ್ಟ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಾಲು ಸಾಲು ದೇವಾಲಯಗಳಿಗೆ ಭೇಟಿ ನೀಡಿದರಾದರೂ , ಮತದಾರರು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ಸನ್ನು ಸೋಲಿಸಿದರು.
ಈಗ ರಾಹುಲ್ ಗಾಂಧಿ ಅವರ ದೇವಾಲಯ ಭೇಟಿಯನ್ನು ಎಐಎಂಐಎಂ ಅಧ್ಯಕ್ಷರೂ ಆಗಿರುವ ಸಂಸದ ಅಸಾದುದ್ದೀನ್ ಓವೈಸಿ ಟೀಕಿಸಿದ್ದು, “ರಾಹುಲ್ ಗಾಂಧಿ ದೇವಾಲಯಕ್ಕೆ ಹೋಗುವುದು ಅಸ್ತ್ರವಾದರೆ, ಮಸೀದಿಗೆ ತೆರಳುವುದು ಒಂದು ರೋಗ” ಎಂದು ಛೇಡಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಮುಖಂಡ ಸಂಜಯ್ ನಿಪುರಮ್ ಅವರು ರಾಹುಲ್ ಗಾಂಧಿಯವರ ದೇವಾಲಯ ಭೇಟಿಯನ್ನು ಸಮರ್ಥಿಸಿಕೊಂಡಿದ್ದು, ಬಿಜೆಪಿಯಂತೆಯೇ ರಾಹುಲ್ ಗಾಂಧಿ ಸಹ ಹಿಂದೂ ಅಸ್ತ್ರ ಬಳಸಿದ್ದಾರೆ. ನಾವೂ ಹಿಂದೂಗಳೇ ಎಂಬ ಹೇಳಿಕೆಗೆ ಅಸಾದುದ್ದೀನ್ ಓವೈಸಿ ಹೀಗೆ ಪ್ರತ್ಯುತ್ತರ ನೀಡಿದ್ದಾರೆ.
ಅಸಾದುದ್ದೀನ್ ಓವೈಸಿಯ ಈ ತೀಕ್ಷ್ಣ ಟೀಕೆಯಿಂದ ವಿಚಲಿತರಾದ ಸಂಜಯ್ ನಿಪುರಮ್, ಇಲ್ಲ ರಾಹುಲ್ ಗಾಂಧಿ ಅವರು ದೇವಾಲಯದಂತೆಯೇ ಮಸೀದಿಗೂ ತೆರಳುತ್ತಾರೆ. ಬಿಜೆಪಿ ನಮ್ಮನ್ನು ಹಿಂದೂ ವಿರೋಧಿ ಎಂದು ಟೀಕಿಸುವುದು ನಮಗೆ ಕಿರಿಕಿರಿ ಎನಿಸುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬರೀ ಗುಜರಾತ್ ಒಂದೇ ಅಲ್ಲ, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ರಾಹುಲ್ ಗಾಂಧಿ ಹಲವು ದೇವಾಲಯ, ಮಠಗಳಿಗೂ ಭೇಟಿ ನೀಡಿ “ಹಿಂದೂ ಕಾರ್ಡ್” ಬಳಸಿದ್ದಾರೆ.
Leave A Reply