ಎಬಿವಿಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಎಸ್ ಎಫ್ ಐ ಕಾರ್ಯಕರ್ತರು
ಕೊಲ್ಲಮ್: ಕೇರಳದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲಿನ ದಾಳಿಗಳು ಮುಂದುವರಿದಿದೆ. ತ್ರಿಪುರಾದಲ್ಲಿ ಸೋತರು ಬುದ್ದಿ ಕಲಿಯದ ಕಮ್ಯುನಿಸ್ಟರು ಕೇರಳದಲ್ಲಿ ಉತ್ತಮ ಆಡಳಿತ ನೀಡದೇ, ಜನರ ವಿರೋಧವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಅಲ್ಲದೇ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ದೌರ್ಜನ್ಯ ಮಿತಿ ಮೀರುತ್ತಿದ್ದು, ಕೇರಳದ ಕೊಲ್ಲಮ ನ ಪೂರ್ವವಲಯದ ಪೊಲೀಸ್ ಠಾಣೆ ಎದುರೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದ ಕಾರ್ಯಕರ್ತ ಅಜೀತ್ ಎಂಬುವವರ ಮೇಲೆ ಎಸ್ ಎಫ್ ಐ ಸಂಘಟನೆಯ ಪದಾಧಿಕಾರಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸುತ್ತಿರುವಾಗ ಕಾನೂನು ವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪೊಲೀಸರು ಅಸಹಾಯಕರಾಗಿ ನಿಂತಿದ್ದರು ಎನ್ನಲಾಗಿದೆ. ಎಸ್ ಎನ್ ಕಾನೂನು ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕವನ್ನು ಆರಂಭಿಸಲು ಮುಂದಾಗಿದ್ದರಿಂದ ಈ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ನಂತರ ಕೊಲ್ಲಮ್ ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸುವ ವೇಳೆ ಇನ್ಸಪೆಕ್ಟರ್ ಗಾಯಗಳಾಗಿದ್ದು, ಎಬಿವಿಪಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ ಎಸ್ ಎಫ್ ಐ ಸಂಘಟನೆಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನ ಖಂಡಿಸಿ ಎಸ್ ಎಫ್ ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಎಬಿವಿಪಿ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.
ಎದುರೇ ಘಟನೆ ಸಂಭವಿಸಿದರೂ ಕ್ರಮ ಕೈಗೊಳ್ಳದ ಪೊಲೀಸರು
ಅಜಿತ್ ಮೇಲೆ ದಾಳಿ ನಡೆದಿರುವುದು ಪೊಲೀಸರ ಎದುರೇ ಎನ್ನಲಾಗುತ್ತಿದೆ. ಆದರೆ ಪೊಲೀಸರ ಎದುರೆ ಅಜಿತ್ ಮೇಲೆ ದಾಳಿ ನಡೆಯುತ್ತಿರುವಾಗ ಪೊಲೀಸರು ತಡೆಯದೇ ಮೌನಕ್ಕೆ ಜಾರಿದ್ದರು. ಅಲ್ಲದೇ ತೀವ್ರವಾಗಿ ಗಾಯಗೊಂಡಿದ್ದ ಅಜಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕೂಡ ಪೊಲೀಸರು ಮುಂದಾಗಿಲ್ಲ. ಈ ವೇಳೆ ಬೈಕ್ ಮೇಲೆ ಅಜಿತ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇರಳ ಪೊಲೀಸರ ಈ ನಡೆ ಹಲವು ಅನುಮಾನಗಳಿಗೆ ಪುಷ್ಠಿ ನೀಡಿದೆ.
Leave A Reply