ತ್ರಿಪುರಾದಲ್ಲಿ ಇತಿಹಾಸ ಸೃಷ್ಟಿ, ಪ್ರಥಮ ಬಾರಿಗೆ ಚಕ್ಮಾ ಬುಡಕಟ್ಟು ಸಮುದಾಯದ ಮಹಿಳೆಗೆ ಸಚಿವ ಸ್ಥಾನ ನೀಡಿದ ಬಿಜೆಪಿ
ಅಗರ್ತಲಾ: ಬಿಜೆಪಿ ತನ್ನ ಸರ್ಕಾರದ ಸಚಿವ ಸಂಪುಟ ರಚನೆ ವೇಳೆಯೇ ಇತಿಹಾಸ ಸೃಷ್ಟಿಸಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಚಕ್ಮಾ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರಿಗೆ ಸಚಿವ ಸ್ಥಾನ ನೀಡಿದೆ. 25 ವರ್ಷ ಕಮ್ಯುನಿಸ್ಟರ್ ನಿರ್ಲಕ್ಷಿತ ಆಡಳಿತಕ್ಕೆ ಬೇಸತ್ತಿರುವ ತ್ರಿಪುರಾದ ಜನರು ಬಿಜೆಪಿಗೆ ಅಧಿಕಾರ ನೀಡಿದ್ದಾರೆ. 25 ವರ್ಷದಿಂದ ಒಂದೇ ಪಕ್ಷ ಆಡಳಿತ ನಡೆಸಿದರೂ ಚಕ್ಮಾ ಬುಡಕಟ್ಟಿನವರಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಬುಡಕಟ್ಟು ಸಮುದಾಯದ ಮಹಿಳೆಯ ಸಚಿವ ಸ್ಥಾನ ನೀಡಿರುವುದು ಇತಿಹಾಸ ಸೃಷ್ಟಿಸಿದೆ.
ಪ್ರಥಮ ಬಾರಿಗೆ ಪಚರ್ತಲ ವಿಧಾನಸಭೆ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ಸಂತಾನಾ ಚಕ್ಮಾ ಇದೀಗ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಚಕ್ಮಾ ಬುಡಕಟ್ಟು ಸಮುದಾಯದಲ್ಲಿ ಮಹಿಳೆಯೊಬ್ಬರು ಪ್ರಥಮ ಬಾರಿಗೆ ಸಚಿವರಾಗಿ ಆಯ್ಕೆಯಾದ ಇತಿಹಾಸ ಸೃಷ್ಟಿಸಿದ್ದಾರೆ.
32 ವರ್ಷ ವಯಸ್ಸಿನ ಸಂತನಾ ಸಮಾಜ ಸೇವೆ ಪದವಿ ಪಡೆದಿದ್ದಾರೆ. 2015ರಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿರುವ ಅವರು ತ್ರಿಪುರಾ ಚುನಾವಣೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇವರ ಸಾಮಾಜಿಕ ಕಾಳಜಿ, ಸೇವೆ ಮತ್ತು ಯುವಕರನ್ನು ಬೆಂಬಲಿಸುವ ಪ್ರಧಾನಿ ಮೋದಿ ಅವರು ಸಚಿವ ಸ್ಥಾನ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಶುಕ್ರವಾರ ತ್ರಿಪುರಾ ಮುಖ್ಯಮಂತ್ರಿಯಾಗಿ ಬಿಪ್ಲಬ್ ದೇಬ್ ಸೇರಿ 12 ಜನರು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.
Leave A Reply