ಭಾಷೆ ಉಳಿಗೆ ಆರೆಸ್ಸೆಸ್ ಕೈಗೊಂಡಿರುವ ಪ್ರಮುಖ ನಿರ್ಣಯ ಯಾವವು ಗೊತ್ತಾ?
Posted On March 10, 2018
ದೆಹಲಿ: ದೇಶದಲ್ಲಿ ಇಂಗ್ಲಿಷ್, ಹಿಂದಿ ಭಾಷೆಗಳ ಪ್ರಭಾವದಿಂದ ಪ್ರಾದೇಶಿಕ ಭಾಷೆಗಳು ನಶಿಸುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಮಹತ್ತರ ನಿರ್ಣಯಗಳನ್ನು ತೆಗೆದುಕೊಂಡು, ಯಾವುದೇ ಸರ್ಕಾರಕ್ಕೂ ಈ ನಿರ್ಣಯಗಳು ಮಾದರಿಯಾಗುವಂತಿವೆ.
ಹೌದು, ನಾಗ್ಪುರದಲ್ಲಿ ನಡೆಯುತ್ತಿರುವ ಆರೆಸ್ಸೆಸ್ ಅಖಲಿ ಭಾರತೀಯ ಪ್ರತಿನಿಧಿಗಳ ಸಭೆಯಲ್ಲಿ ಈ ಭಾಷೆಗಳ ಪ್ರಾಮುಖ್ಯತೆ, ವೈವಿಧ್ಯತೆ, ಅವುಗಳ ಉಳಿವಿಗೆ ಏನು ಮಾಡಬೇಕು ಸೇರಿ ಹಲವು ಅಂಶಗಳನ್ನೊಳಗೊಂಡ ನಿರ್ಣಯ ಕೈಗೊಳ್ಳಲಾಗಿದೆ.
ಹಾಗಾದರೆ ಭಾಷೆಗಾಗಿ ಆರೆಸ್ಸೆಸ್ ತೆಗೆದುಕೊಂಡಿರುವ ನಿರ್ಣಯಗಳೇನು? ಅವುಗಳ ಪ್ರಾಮುಖ್ಯತೆಯೇನು? ನಿರ್ಣಯಗಳಾದರೂ ಯಾವವು? ಇಲ್ಲಿವೆ ನೋಡಿ.
-
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾರತೀಯ ಭಾಷೆಗಳ ಉಳಿವಿಗೆ ಶ್ರಮ ಹಾಗೂ ಉತ್ತೇಜನ ನೀಡಬೇಕು.
-
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಂತೆಯೇ ಎಲ್ಲ ಭಾಷೆಗಳಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು.
-
ಭಾರತದ ಎಲ್ಲ ರಾಜ್ಯಗಳಲ್ಲೂ ಮಕ್ಕಳು ಅವರ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯಲು ಸರ್ಕಾರ ಸಹಕಾರ ನೀಡಬೇಕು.
-
ಆರೆಸ್ಸಿನ ಸ್ವಯಂ ಸೇವಕರೂ ಸೇರಿ ಎಲ್ಲರೂ ಮಾತೃಭಾಷೆಯಲ್ಲಿಯೇ ಮಾತನಾಡಬೇಕು. ಮನೆಯಲ್ಲಾಗಲಿ, ವ್ಯವಹಾರಿಕವಾಗಲಿ, ಮಾತೃಭಾಷೆಯೇ ಬಳಸಬೇಕು.
-
ಭಾರತೀಯ ಭಾಷೆಗಳು ದೇಶದ ಸಮಗ್ರತೆ ಬಿಂಬಿಸುತ್ತುವೆ. ಹಾಗಾಗಿ ಭಾಷೆಯ ಉಳಿವಿಗೆ ಎಲ್ಲರೂ ಶ್ರಮಿಸಬೇಕು.
-
ಸರ್ಕಾರಿ ನೌಕರಿ ಅಥವಾ ಖಾಸಗಿ ನೌಕರಿಗೆ ನೇಮಕ, ಮುಂಬಡ್ತಿ ಸೇರಿ ಎಲ್ಲ ವಿಭಾಗದಲ್ಲೂ ಮಾತೃಭಾಷೆಯನ್ನೇ ಬಳಸಬೇಕು.
-
ಬರೀ ಮಾತಷ್ಟೇ ಅಲ್ಲ, ಸಾಹಿತ್ಯ, ಸಂಗೀತ, ಬರವಣಿಗೆಯೆಲ್ಲವೂ ಮಾತೃಭಾಷೆಯಲ್ಲೇ ನಡೆಯಬೇಕು.
- Advertisement -
Trending Now
ದೇಶದ್ರೋಹಿ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ.
August 30, 2024
Leave A Reply