ಸ್ವಚ್ಛ ಭಾರತ ನಿಧಿಗೆ ವಿಚ್ಛೇಧನದ ವೇಳೆ ಪಡೆದ ಜೀವನಾಂಶದ 45 ಲಕ್ಷ ದೇಣಿಗೆ ನೀಡಿದ ಮಹಿಳೆ
ಜಮ್ಮು: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಕಲ್ಪನೆಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿದಲ್ಲದೇ, ವಿಶ್ವದ ಶ್ಲಾಘನೆಗೆ ಕಾರಣವಾಗಿದೆ. ಭಾರತದ ಪ್ರಧಾನಿಯಿಂದ ಸಾಮಾನ್ಯ ನಾಗರೀಕನೂ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿದ. ದೇಶದಲ್ಲಿ ಶೌಚಗೃಹ ನಿರ್ಮಾಣ, ಚರಂಡಿ, ರಸ್ತೆ ಸ್ವಚ್ಛತೆಗೆ ಹೊಸ ಕ್ರಾಂತಿಯೇ ಆಗುತ್ತಿದೆ. ಇತ್ತ ಜನರು ಮೋದಿ ಅವರ ಕನಸಿನ ಸ್ವಚ್ಛ ಭಾರತ ಯೋಜನೆಗೆ ಸಾಥ್ ನೀಡುತ್ತಿದ್ದಾರೆ. ಜಮ್ಮುವಿನ ಮಹಿಳೆಯೊಬ್ಬರು ಗಂಡನಿಂದ ವಿಚ್ಛೇಧನದ ವೇಳೆ ಜೀವನಾಂಶಕ್ಕಾಗಿ ಪಡೆದ 45 ಲಕ್ಷ ರೂಪಾಯಿಯನ್ನು ಸ್ವಚ್ಛ ಭಾರತ ನಿಧಿಗೆ ನೀಡುವ ಮೂಲಕ ಮಾದರಿಯಾಗಿ ನಿಂತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿ ಡಾ.ಮೇಘಾ ಮಹಾಜನ್ ಸ್ವಚ್ಛ ಭಾರತ ನಿಧಿಗೆ 45 ಲಕ್ಷ ಧಾನ ನೀಡಿದ ಮಹಾನ್ ತ್ಯಾಗಮಯಿ. ನವೆಂಬರ್ 2017ರಲ್ಲಿ ಪತಿಯಿಂದ ವಿಚ್ಛೇಧನ ಪಡೆದಿರುವ ಡಾ.ಮೇಘಾ ಮಹಾಜನ್ ಪತಿಯಿಂದ ಜೀವನಾಂಶಕ್ಕಾಗಿ ಪಡೆದ 45 ಲಕ್ಷ ರೂಪಾಯಿಯನ್ನು ಸ್ವಚ್ಛ ಭಾರತ ನಿಧಿಗೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಮತ್ತು ಸ್ವಸ್ಥ ಭಾರತ ಕಲ್ಪನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ನಾನು ಪ್ರಧಾನಿ ನರೇಂದ್ರ ಮೋದಿ ಅವರ ದೊಡ್ಡ ಅಭಿಮಾನಿ. ಮೋದಿ ಅವರು ಭಾರತಕ್ಕೆ ಮಹತ್ವದ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸ್ವಚ್ಛ ಭಾರತಕ್ಕೆ ಹಣ ದೇಣಿಗೆ ನೀಡಿರುವ ಹಣಕ್ಕೆ ಸ್ವಚ್ಛ ಭಾರತಕ್ಕಿಂತ ಉತ್ತಮ ಕಾರ್ಯ ಮತ್ತೊಂದಿಲ್ಲ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಡಾ.ಮೇಘಾ ಮಹಾಜನ್ ಸ್ವಚ್ಛ ಭಾರತದ ಕಲ್ಪನೆಗೆ ಹೊಸ ಕೊಡುಗೆ ನೀಡಲು ಬಯಸಿದ್ದು, ಸ್ವಚ್ಛ ಭಾರತ ಯೋಜನೆಗೆ ನೀರು ಮತ್ತು ಗಾಳಿ ಶುದ್ಧಿಕರಣ ಕುರಿತು ಸಂಶೋಧನಾ ಪ್ರಬಂಧವನ್ನು ಬರೆದಿದ್ದು, ಅದನ್ನು ಸ್ವಚ್ಛ ಭಾರತ ಮಿಷನ್ ಗೆ ನೀಡಿದ್ದಾರೆ.
Leave A Reply