ಮಾವೋವಾದಿಗಳ ದಾಳಿಗೆ ಯೋಧ ಹುತಾತ್ಮ, 5 ತಿಂಗಳ ಅವಳಿ ಮಕ್ಕಳು ಅನಾಥ, ಎಲ್ಲಿದ್ದೀರಿ ಬುದ್ದೀಜೀವಿಗಳೇ
ದೆಹಲಿ: ಇತ್ತೀಚೆಗೆ ತ್ರಿಪುರಾದಲ್ಲಿ ಉದ್ರಿಕ್ತರ ಗುಂಪೊಂದು ಕಮ್ಯುನಿಸ್ಟ್ ಸಿದ್ಧಾಂತವಾದಿ ಲೇನಿನ್ ಪ್ರತಿಮೆಯನ್ನು ಉರುಳಿಸಿದಕ್ಕಾಗಿ ದೇಶದ ಸ್ವಘೋಷಿತ ಬುದ್ಧಿ ಜೀವಿಗಳ ವಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು, ಒಂದೇ ಸಮನೇ ದೇಶದಲ್ಲಿ ಅಸಹಿಷ್ಣುತೆ ಎಂದು ಬೊಬ್ಬೆ ಹಾಕಿದ್ದರು. ಆದರೆ ಶನಿವಾರ ಲೇನಿನ್ ಪ್ರತಿಪಾದಿಸಿದ ಕಮ್ಯುನಿಸಂ ಸಿದ್ಧಾಂತ ಎಡರಂಗದ ಉಗ್ರವಾದಿಗಳ ದಾಳಿಗೆ ಐದು ತಿಂಗಳ ಅವಳಿ ಮಕ್ಕಳಿಬ್ಬರು ಹೆತ್ತ ಅಪ್ಪನನ್ನು ಕಳೆದುಕೊಂಡಿದ್ದಾರೆ. ಆ ಅವಳಿ ಮಕ್ಕಳ ನೋವಿಗೆ ಬುದ್ಧಿ ಜೀವಿಗಳು, ಮಾಧ್ಯಮಗಳು ವರದಿ ಮಾಡದಿರುವುದು, ಸ್ಪಂದಿಸದೇ ಸುಮ್ಮನಾಗಿವೆ.
ಛತ್ತಿಸಗಢ್ ದ ಕಂಕೇರಾ ಬಳಿ ಮಾವೋವಾದಿಗಳ ದಾಳಿಗೆ ಸಿಆರ್ ಪಿಎಫ್ ಯೋಧ ಗಜೇಂದ್ರ ಸಿಂಗ್ ಹುತಾತ್ಮರಾಗಿದ್ದಾರೆ. ಐದು ತಿಂಗಳ ಅವಳಿ ಮಕ್ಕಳನ್ನು ಹೊಂದಿರುವ ಯೋಧ ಗಜೇಂದ್ರ ಸಿಂಗ್ ಹುತಾತ್ಮರಾಗಿದ್ದು, ಇದೀಗ ಮಕ್ಕಳು ಅನಾಥವಾಗಿವೆ.
ಐದು ತಿಂಗಳ ಹಸುಗೂಸುಗಳು ತಂದೆಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಟುಕರ ಮನ ಕರಗಿಸುವಂತಿದೆ. ಆದರೆ ಹುತಾತ್ಮ ಯೋಧನ ಕುರಿತು ಯಾವೋಬ್ಬ ಬುದ್ಧಿ ಜೀವಿಯೂ ತುಟಿ ಬಿಚ್ಚಿಲ್ಲ. ಮಾಧ್ಯಮಗಳು ಐದು ತಿಂಗಳ ಅವಳಿ ಮಕ್ಕಳ ಆಂಕ್ರಂಧನವನ್ನು ಜನರಿಗೆ ತಿಳಿಸುವ ಕಾರ್ಯ ಮಾಡದಿರುವುದು ದುರಂತ. ಲೇನಿನ್ ಪ್ರತಿಮೆ ಉರುಳಿಸಿದಕ್ಕೆ ನೆಲ ಬಿರಿಯುವಂತೆ ಕಿರುಚಾಡಿದ ಎಡವಾದಿಗಳು, ಇದೀಗ ಮುಗ್ಗುಮಾಗಿದ್ದಾರೆ.
Leave A Reply