ಸ್ಲಂ ಜನರಿಗೆ ಮತ್ತೇರಿಸುವ ಸಮೋಸಾ ನೀಡಿ, ಕ್ರಿಶ್ಚಿಯನ್ ಗೆ ಮತಾಂತರಕ್ಕೆ ಒತ್ತಾಯಿಸಿ ಸಿಕ್ಕಿಬಿದ್ದ ಮಿಷಿನರಿಗಳು

ಆಗ್ರಾ: ದೇಶದಲ್ಲಿ ಬಡವರು, ಆದಿವಾಸಿಗಳು, ಮುಗ್ದರನ್ನು ಗುರಿಯಾಗಿಟ್ಟುಕೊಂಡು ತಮ್ಮ ಸ್ವಾರ್ಥ ಸಾಧಿಸಿ, ಮತಾಂತರ ಮಾಡುವ ಕ್ರಿಶ್ಚಿಯನ್ ಮಿಷಿನರಿಗಳ ಯತ್ನ ಮುಂದುವರಿದಿದೆ. ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಜಗದೀಶ್ ಪುರದ ವಿಕಾಸ್ ಕಾಲೋನಿಯ ಸ್ಲಂ ಪ್ರದೇಶವೊಂದರಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಸಮೋಸ ನೀಡಿ ತಮ್ಮ ಮೋಹ ಪಾಶಕ್ಕೆ ಸಿಲುಕಿಸಿ, ಮತಾಂತರಕ್ಕೆ ಯತ್ನಿಸಿ, ವಿಫಲರಾಗಿದ್ದಾರೆ.
ವಿಕಾಸ್ ಕಾಲೋನಿಯಲ್ಲಿರುವ ಸ್ಲಂ ಪ್ರದೇಶಕ್ಕೆ ಪ್ರವೇಶಿಸಿದ ಮಿಷಿನರಿಗಳು ಮುಗ್ದ ಮಕ್ಕಳು, ಮಹಿಳೆಯರಿಗೆ ಮೊದಲು ಸಮೋಸಾ ನೀಡಿ ಸಂವಹನ ನಡೆಸಿದ್ದಾರೆ. ನಂತರ ನಿಧಾನವಾಗಿ ತಮ್ಮ ಆಮಿಷವನ್ನು ಮುಂದುವರಿಸಿದ್ದು, ನಿಮ್ಮ ಮಕ್ಕಳಿಗೆ ಶಾಲೆ ಕಲಿಸುತ್ತೇವೆ, ಬಟ್ಟೆ ನೀಡುತ್ತೇವೆ, ಮನೆ ನೀಡುತ್ತೇವೆ ಎಂದು ಮಹಿಳೆಯರಿಗೆ ಆಮಿಷ ಒಡ್ಡಿದ್ದಾರೆ. ಈ ವಿಷಯ ತಿಳಿದ ಪೊಲೀಸರು ಈ ಕುರಿತು ಮಾಹಿತಿ ಸಂಗ್ರಹಿಸಿ ಮತಾಂತರವಾಗುವುದನ್ನು ತಡೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸ್ಲಂ ನಿವಾಸಿ ಮಾಯಾ ಎಂಬುವವರು ‘ಕ್ರಿಶ್ಚಿಯನ್ ಫಾದರ್ ಗಳು ಕಾಲೋನಿಗೆ ಬಂದು ನಮಗೆ ಸಮೋಸ ನೀಡಿದರು. ನಂತರ ನಿಮ್ಮ ಮಕ್ಕಳಿಗೆ ಶಾಲೆ ಕಲಿಸುತ್ತೇವೆ, ಬಟ್ಟೆ ನೀಡುತ್ತೇವೆ. ಸಮೋಸ ನೀಡುತ್ತೇವೆ. ಮತಾಂತರವಾಗಿ ಎಂದು ಹೇಳಿದ್ರು. ಇದನ್ನು ನೋಡಿದ ನಿವಾಸಿಯೊಬ್ಬರು ಖಂಡಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಕ್ರಿಶ್ಚಿಯನ್ ಪಾದ್ರಿಗಳು ನೀಡಿದ ಸಮೋಸಾ ತಿಂದ ನಂತರ ನನ್ನ ಮಗಳಿಗೆ ತಲೆ ಸುತ್ತು ಬಂದಿತ್ತು ಎಂದು ಸ್ಲಂ ನಿವಾಸಿ ಮಾಯಾ ತಿಳಿಸಿದ್ದಾರೆ. ಈ ಕುರಿತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಗ್ರಾ ನಗರ ಎಸ್ ಪಿ ‘ಸ್ಲಂ ಗೆ ಭೇಟಿ ನೀಡಿದ ಸಂಘಟನೆಯವರ ವಿಚಾರಣೆ ನಡೆಸಿದ್ದು, ಮಹಿಳಾ ದಿನಾಚರಣೆ ನಿಮಿತ್ತ ಜಾಗೃತಿ ಮೂಡಿಸಲು ಹೋಗಿದ್ದಾಗಿ ಹೇಳಿದ್ದಾರೆ. ಆದರೆ ಸ್ಲಂ ಮಹಿಳೆ ಹೇಳುವ ಮಾತುಗಳಿಗೆ ಸಂಘಟನೆಗಳವರ ಮಾತುಗಳ ಮಧ್ಯೆ ಅನುಮಾನ ಮೂಡಿಸುತ್ತಿದ್ದು, ಈ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
Leave A Reply