ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ನಿಲ್ಲುವುದೆಂದು? ದೌರ್ಜನ್ಯ ಖಂಡಿಸಲು ಬುದ್ಧಿಜೀವಿಗಳು ಎಲ್ಲಿದ್ದಾರೆ?

ರಾಂಚಿ: ದೇಶದ್ರೋಹಿಗಳ ವಿರುದ್ಧ ಪ್ರಕರಣ ದಾಖಲಿಸಿದರೆ ಸರ್ಕಾರದ ದೌರ್ಜನ್ಯ ಎನ್ನುತ್ತಾರೆ, ಗೌರಿ ಲಂಕೇಶ್ ಹತ್ಯೆಯಾದರೆ ಇದು ಸಿದ್ಧಾಂತದ ಭಿನ್ನಾಭಿಪ್ರಾಯದ ಹಿನ್ನೆಲೆ ಮಾಡಿದ ಕೊಲೆ ಎನ್ನುತ್ತಾರೆ. ಆದರೆ ಅದೇ, ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಹಲ್ಲೆಯಾದರೆ, ಅವರನ್ನು ಹಾಡಹಗಲೇ ಹತ್ಯೆ ಮಾಡಿದರೆ? ದೇಶದ, ರಾಜ್ಯದ ಬುದ್ಧಿಜೀವಿಗಳು ಬಾಯಿಗೆ ಫೆವಿಕಾಲ್ ಹಾಕಿಕೊಂಡವರಂತೆ ಮಗುಮ್ಮಾಗಿಬಿಡುತ್ತಾರೆ.
ಇದಕ್ಕೆ ಸಾಕ್ಷಿಯಾಗಿ, ಜಾರ್ಖಂಡಿನ ರಾಂಚಿಯಲ್ಲಿ ಬಿಜೆಪಿ ಮುಖಂಡ ಪಂಕಜ್ ಗುಪ್ತಾರನ್ನು ಹಾಡಹಗಲೇ ಗುಂಡಿಕ್ಕಿ ಕೊಲ್ಲಲಾಗಿದೆ. ಗುಂಡಿನ ದಾಳಿಗೆ ನಲುಗಿದ ಅವರು ಅಲ್ಲೇ ಕುಸಿದು ಬಿದ್ದರೂ ಸುಮ್ಮನಿರದ ದುಷ್ಕರ್ಮಿಗಳು ಮತ್ತೂ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಆದರೆ ಬಂದೂಕಿನ ನಳಿಕೆಗೂ ಪಕ್ಷಿಯ ಗೂಡು ಕಟ್ಟುವಂತಾಗಬೇಕು, ಎಲ್ಲರ ಜೀವವೂ ಒಂದೇ, ಎಲ್ಲರ ರಕ್ತವೂ ಒಂದೇ ಎಂದೆಲ್ಲ ಪುಸ್ತಕದ ಬದನೆಕಾಯಿ ಮಾತನಾಡುವ ಬುದ್ಧಿಜೀವಿಗಳಾಗಲಿ, ಪ್ರಶಸ್ತಿ ವಾಪಸ್ ನೀಡುವವರಾಗಲಿ, ಪ್ರಕಾಶ್ ರೈ ಆಗಲಿ ಒಂದೇ ಒಂದು ಖಂಡನೆಯನ್ನೂ ವ್ಯಕ್ತಪಡಿಸಿಲ್ಲ. ಇದೆಂಥಾ ಬೌದ್ಧಿಕ ದಾರಿದ್ರ್ಯ ಇರಬೇಕು?
ರಾಂಚಿಯ ಹೋಟೆಲ್ ಎದುರು ಟೀ ಕುಡಿಯುತ್ತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿ ಬಿಜೆಪಿ ಮುಖಂಡರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕೇರಳ ಹಾಗೂ ಕರ್ನಾಟಕದಲ್ಲೂ ಇದೇ ಮಾದರಿಯಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಹತ್ಯೆಗಳಾಗುತ್ತಲೇ ಇವೆ. ಇವುಗಳನ್ನು ಖಂಡಿಸುವ ಮೂಲಕ ಬುದ್ಧಿಜೀವಿಗಳು ವಿಚಾರಶೀಲತೆ ತೋರಿಸಲಿ. ಇಲ್ಲ, ವಿಚಾರದದ್ದಾರೂ ಏನೂ, ಶೀಲ ಕಳೆದುಕೊಂಡವರಿಗೆ ಏನೆನ್ನುತ್ತಾರೆ ಎಂಬುದು ಗೊತ್ತಲ್ಲವೇ?
Leave A Reply