ಮೋಸದಿಂದ ತ್ರಿವಳಿ ತಲಾಖ್ ನೀಡಿ, ಮಹಿಳೆಯನ್ನು ಸಂಕಷ್ಟಕ್ಕೆ ದೂಡಿದ ಭೂಪ
ಹೈದರಾಬಾದ್: ದೇಶಾದ್ಯಂತ ತ್ರಿವಳಿ ತಲಾಖ್ ನಿಷೇಧಕ್ಕೆ ಕಾಯಿದೆ ಜಾರಿಯಾಗಿದೆ, ಸುಪ್ರೀ ಕೋರ್ಟ್ ಕೂಡ ತ್ರಿವಳಿ ತಲಾಖ್ ನಿಷೇಧಿಸುವ ಬಗ್ಗೆ ಒಲವು ವ್ಯಕ್ತಪಡಿಸಿದೆ. ಆದರೂ ಕೆಲವು ಮುಸ್ಲಿಂ ಮೂಲಭೂತವಾದಿಗಳು ಅಡ್ಡದಾರಿಗಳನ್ನು ಹಿಡಿದು ಮಹಿಳೆಯರನ್ನು ಸಂಕಷ್ಟಕ್ಕೆ ದೂಡುವ ಪ್ರಯತ್ನವನ್ನು ಮುಂದುವರಿಸಿವೆ. ತ್ರಿವಳಿ ತಲಾಖ್ ನಿಷೇಧ ಕಾಯಿದೆ ಜಾರಿಯಾದರೂ ಇತ್ತೀಚೆಗೆ ಹೈದರಾಬಾದ್ ನಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಅನುಮತಿ ಪಡೆಯದೇ ತ್ರಿವಳಿ ತಲಾಖ್ ನೀಡಿ, ಮಹಿಳೆಯನ್ನು ಸಂಕಷ್ಟಕ್ಕೆ ದೂಡಿರುವ ಘಟನೆ ಮರುಕಳಿಸಿದೆ.
ಇರ್ಫಾನಾ ಬೇಗಂ ತ್ರಿವಳಿ ತಲಾಖ್ ನಿಂದ ಅನ್ಯಾಯವಾಗಿರುವ ಮಹಿಳೆ. ಅನಕ್ಷರಸ್ಥ ಮಹಿಳೆಯ ಪಾಲಕರ ಸಹಿಯನ್ನು ಮೋಸದಿಂದ ದಾಖಲೆಗಳ ಮೇಲೆ ಪಡೆದುಕೊಂಡು, ಮಹಿಳೆಯ ಅಭಿಪ್ರಾಯ ಪಡೆಯದೇ ತ್ರಿವಳಿ ತಲಾಖ್ ನೀಡಿ, ಮಹಿಳೆಯನ್ನು ಅನಾಥಳಾಗಿ ಮಾಡಿದ್ದಾನೆ. ಈ ಕುರಿತು ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಫೆ.22ರಂದು ಪತಿಯಿಂದ ತಲಾಖ್ ನೋಟಿಸ್ ಬಂದಿದೆ ಎಂದು ಮಹಿಳೆ ತಿಳಿಸಿದ್ದಾಳೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರೀಯಾನ್ ಬಜಾರ್ ಪೊಲೀಸ್ ಠಾಣೆ ಸರ್ಕಲ್ ಇನ್ಸಫೆಕ್ಟರ್ ‘ಮಹಮ್ಮದ ಅಬ್ದುಲ್ ಖಾದೀರ್ ಮತ್ತು ಇರ್ಫಾನಾ ಬೇಗಂ ಮಧ್ಯೆ 2017 ಡಿಸೆಂಬರ್ 11 ರಂದು ಮದುವೆಯಾಗಿತ್ತು. ಮಹಿಳೆ ತ್ರಿವಳಿ ತಲಾಖ್ ನೀಡಿರುವ ಕುರಿತು ದೂರು ನೀಡಿದ್ದಾರೆ. ಅಲ್ಲದೇ ಪತಿ ನನಗೆ ನಿತ್ಯ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇಂಡಿಯನ್ ಪೆನಲ್ ಕೋಡ್ ಸೆಕ್ಷನ್ 420, 417, 498 ಪ್ರಕಾರ ಮಹಮ್ಮದ್ ಅಬ್ದುಲ್ ಖಾದೀರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Leave A Reply