ರೈತರು ಹೋರಾಟ ಮಾಡಿದರೆ ಆಕ್ರೋಶವಂತೆ, ವಾಪಸ್ ಪಡೆದರೆ ಫಿಕ್ಸಿಂಗ್ ಅಂತೆ. ಈ ಕಾಂಗಿಗಳಿಗೆ ಬುದ್ಧಿ ಬರುವುದು ಯಾವಾಗ?
ಮುಂಬೈ: ಯಾವುದೇ ಸರ್ಕಾರದ ವಿರುದ್ಧ ಜನ ಅಕ್ರೋಶ ವ್ಯಕ್ತಪಡಿಸುವುದು, ಪ್ರತಿಭಟನೆ ಮಾಡುವುದು ಸಾಮಾನ್ಯ. ಅದರಲ್ಲೂ ರೈತರ ಸಮಸ್ಯೆ ಸಾರ್ವಕಾಲಿಕವಾಗಿರುವುದರಿಂದ ಎಲ್ಲ ಸರ್ಕಾರದ ವಿರುದ್ಧವೂ ರೈತರು ಪ್ರತಿಭಟನೆ ಮಾಡುತ್ತಾರೆ ಹಾಗೂ ಅವರು ಪ್ರತಿಭಟನೆ ಮಾಡುವುದರಲ್ಲಿ ನ್ಯಾಯ ಇರುತ್ತದೆ.
ಆದರೆ ರೈತರ ವಿಷಯದಲ್ಲೂ ರಾಜಕೀಯ ಮಾಡುವ ಈ ಕಾಂಗ್ರೆಸ್ಸಿಗರ ಬುದ್ಧಿಗೆ ಏನಾಗಿದೆ? ರೈತರ ನೋವಿನಲ್ಲೂ ಇವರು ತಮ್ಮ ಬೇಳೆ ಬೇಯಿಸಿಕೊಳ್ಳಾತರಲ್ಲ ಏನೆನ್ನಬೇಕು ಇವರಿಗೆ? ರೈತರೂ ಇವರ ಮತಗಳ ದಾಳವಾದರೆ ಇವರು ಸ್ವಲ್ಪವಾದರೂ ನೈತಿಕತೆ ಉಳಿಸಿಕೊಂಡಿದ್ದಾರೆ ಎಂದು ಅನಿಸುತ್ತಿದೆಯೇ?
ನೀವೇ ಯೋಚಿಸಿ ನೋಡಿ, ಮಹಾರಾಷ್ಟ್ರದಲ್ಲಿ ಕಿಸಾನ್ ಸಭಾ ನೇತೃತ್ವದಲ್ಲಿ ಸಾವಿರಾರು ರೈತರು ಹಲವು ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಅದಕ್ಕೆ ಪ್ರತಿಪಕ್ಷಗಳು ಸೇರಿ ಹಲವು ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದವು. ಎಲ್ಲವೂ ಸರಿಯಾಗಿಯೇ ಇತ್ತು.
ಆದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರೈತರ ಪರವಾಗಿಯೇ ನಿಂತುಬಿಟ್ಟರು. ನನಗೆ ಆರು ತಿಂಗಳು ಸಮಯ ಕೊಡಿ ನಿಮ್ಮ ಎಲ್ಲ ಸಮಸ್ಯೆಗಳನ್ನು ನಾನು ಬಗೆಹರಿಸುತ್ತೇನೆ, ಬೇಡಿಕೆಗಳೆಲ್ಲವನ್ನೂ ಈಡೇರಿಸುತ್ತೇನೆ ಎಂದು ಒಬ್ಬ ಉತ್ತಮ ಆಡಳಿತಗಾರನಾಗಿ ಹೇಳಿಬಿಟ್ಟರು.
ಈ ಕಾಂಗ್ರೆಸ್ಸು, ಎನ್ಸಿಪಿ ಪಕ್ಷಗಳಿಗೆ ಹೊಟ್ಟೆ ಉರಿದಿದ್ದೇ ಆಗ. ಯಾವಾಗ ರೈತರು ಹೋರಾಟ ಮಾಡಲು ಆರಂಭಿಸಿದರೋ, ಈ ಪಕ್ಷಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದವು. ಸರ್ಕಾರದ ವಿರುದ್ಧ ರೈತರ ಆಕ್ರೋಶ ಕಟ್ಟೆಯೊಡೆದಿದೆ ಎಂದೆಲ್ಲ ಬೊಬ್ಬೆ ಹಾಕಿದವು.
ಆದರೆ ಮುಖ್ಯಮಂತ್ರಿ ಭರವಸೆ ಮೇರೆಗೆ ರೈತರು ಪ್ರತಿಭಟನೆ ವಾಪಸ್ ಪಡೆಯುತ್ತಲೇ ಹೊಟ್ಟೆ ಉರಿದುಕೊಂಡ ಇವರು ಈಗ ಇದೊಂದು ಫಿಕ್ಸಿಂಗ್, ಒಳಒಪ್ಪಂದ ಎಂದು ಕಾಂಗ್ರೆಸ್, ಎನ್ಸಿಪಿ ಬೊಬ್ಬೆ ಹಾಕುತ್ತಿದೆ. ಇಂತಹವರಿಂದ ಇಂತಹ ಬೊಬ್ಬೆ ಬಿಟ್ಟರೆ ಇನ್ನೇನು ನಿರೀಕ್ಷಿಸಲು ಸಾಧ್ಯ ಬಿಡಿ.
Leave A Reply