ಅಸ್ಸಾಂನಲ್ಲೇ ಭಯೋತ್ಪಾದಕರ ದಾಳಿಗೆ 13 ವರ್ಷದಲ್ಲಿ ಬಲಿಯಾದವರು 2,641 ಜನ
ಡಿಸ್ಪುರ: ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದವರು ಸಾವಿರಾರು ಜನರು ಎಂಬ ಆಘಾತಕಾರಿ ವಿಷಯ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ. ದೇಶದಲ್ಲಿ ವಿಶೇಷವಾಗಿ ಈಶಾನ್ಯ ರಾಜ್ಯದಲ್ಲಿ ಬಾಂಗ್ಲಾ ಅಕ್ರಮ ನುಸುಳುಕೋರರು, ಬುಡಕಟ್ಟು ಸಮುದಾಯದ ಮುಗ್ದರನ್ನು ಗುರಿಯಾಗಿಟ್ಟುಕೊಂಡು ಆರಂಭಿಸಿದ ಮಾವೋವಾದಿ ನಕ್ಸಲರು, ಪ್ರತ್ಯೇಕವಾದಿಗಳ ಉಗ್ರ ಸಂಘಟನೆ ಉಲ್ಫಾ ಸೇರಿ ಹಲವು ಭಯೋತ್ಪಾದಕರ ದಾಳಿಗೆ ಅಸ್ಸಾಂನಲ್ಲಿ 13 ವರ್ಷದಲ್ಲಿ 2,641 ಜನರು ಬಲಿಯಾಗಿದ್ದಾರೆ ಎಂದು ವಿಧಾನಸಭೆಗೆ ಗೃಹ ಸಚಿವರು ಆಗಿರುವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ.
1987 ರಿಂದ 2000 ಮಧ್ಯೆ ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳು ತೀವ್ರವಾಗಿದ್ದವು. ರಾಜ್ಯದಲ್ಲಿ ಅಮಾಯಕರ ಮಾರಣಹೋಮವಾಗಿತ್ತು ಅಲ್ಲದೇ ನಿತ್ಯ ಜನರು ಸಂಕಷ್ಟದಲ್ಲೇ ದಿನದೂಡುವಂತ ಸ್ಥಿತಿ ಇತ್ತು. ಈ ವೇಳೆ ಅಸ್ಸಾಂನಲ್ಲಿ 16 ಭಯೋತ್ಪಾದಕ ಸಂಘಟನೆಗಳು ಸಕ್ರೀಯವಾಗಿದ್ದವು ಎಂದು ತಿಳಿಸಿದ್ದಾರೆ.
ಉಲ್ಫಾ, ಬೊಡೋ ವಾಲಿಯಂಟಿಯರ್ಸ್ ಫೋರ್ಸ್, ಬೊಡೋ ಸೆಕ್ಯೂರೀಟಿ ಪೋರ್ಸ್, ಬೊಡೋ ಲಿಬರೇಷನ್ ಟೈಗರ್ಸ್, ಎನ್ ಡಿಎಫ್ ಸೇರಿ ಹಲವು ಭಯೋತ್ಪಾದಕ ಸಂಘಟನೆಗಳು ಮುಗ್ದರನ್ನು ಬಳಸಿಕೊಂಡು ರಾಜ್ಯದಲ್ಲಿ ದುಷ್ಕೃತ್ಯ ನಡೆಸಿದ್ದವು ಎಂದು ಸೋನೋವಾಲ್ ತಿಳಿಸಿದ್ದಾರೆ.
Leave A Reply