ನಲಪ್ಪಾಡ್ ಮಾದರಿಯಲ್ಲೇ ಹಲ್ಲೇ, ಪ್ರಭಾವ ಬಳಸಿ ಹಲ್ಲೆಗೊಳಗಾದವರ ವಿರುದ್ಧವೇ ಪ್ರಕರಣ
ಬೆಂಗಳೂರು: ರಾಜ್ಯದಲ್ಲಿ ಗುಂಡಾಪೋಷಣೆ, ಮಿತಿ ಮೀರಿದ್ದು, ರಾಜಕೀಯ ಪೋಷಿತ ರೌಡಿಗಳ ಅಟ್ಟಹಾಸ ಮಿತಿ ಮೀರಿದೆ. ಹದಗೆಟ್ಟಿರುವ ಕಾನೂನು ಸುವ್ಯವಸ್ತೆಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ರಾಜ್ಯದ ಜನರು ನಿತ್ಯ ಆತಂಕದಲ್ಲೇ ದಿನದೂಡುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ ಅಧೋಗತಿ ಇಳಿದಿರುವ ಕಾನೂನು ಸುವ್ಯವಸ್ಥೆ ಕೈ ಮೀರಿ ಹೋಗುತ್ತಿದೆ ಎಂಬುದಕ್ಕೆ ಪದೇ ಪದೆ ಹಲವು ಘಟನೆಗಳು ನಡೆಯುತ್ತಿರುವುದು ಸಾಕ್ಷಿ. ಇತ್ತೀಚೆಗೆ ಕಾಂಗ್ರೆಸ್ ಶಾಸಕ ಹ್ಯಾರೀಸ್ ಪುತ್ರ ಗುಂಡಾ ನಲಪ್ಪಾಡ್ ನಡೆಸಿದ ರೀತಿಯ ಮಾರಣಾಂತಿಕ ದಾಳಿ ಮಾಗಡಿಯಲ್ಲಿ ನಡೆದಿದೆ.
ಮಾಗಡಿ ಪುರಸಭೆ ಮಾಜಿ ಅಧ್ಯಕ್ಷ ಪುರುಷೋತ್ತಮ್ ಗೂಂಡಾಗಿರಿ ನಡೆಸಿದ್ದು, ಪುರಸಭೆ ಸದಸ್ಯ ಬಾಲರಘು, ಜೆಡಿಎಸ್ ಮುಖಂಡ ಹೊಸಳ್ಳಿ ಮುನಿರಾಜ್, ಹೊಸಪೇಟೆ ಜವರೇಗೌಡ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ರೌಡಿ ನಲ್ಲಪ್ಪಾಡ್ ವಿದ್ವತ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದ ರೀತಿಯಲ್ಲೇ ದಾಳಿ ನಡೆಸಿದ್ದು, ಘಟನೆ ನಡೆಯುವ ವೇಳೆ ಪುರುಷೋತ್ತಮ್ ಗ್ಯಾಂಗ್ ಹಲ್ಲೆ ನಡೆಸಿದೆ. ಆದರೆ ದುರಂತವೆಂದರೆ ಹಲ್ಲೆಗೊಳಗಾದವರ ವಿರುದ್ಧವೇ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಬಾಲರಘು, ಜೆಡಿಎಸ್ ಮುಖಂಡ ಮುನಿರಾಜ್, ಜವರೇಗೌಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಪುರುಷೋತ್ತಮ್ ಗ್ಯಾಂಗ್ ನಿಂದಲೂ ಪ್ರತಿ ದೂರು ದಾಖಲಾಗಿದೆ. ಹಲ್ಲೆ ಮಾಡಿರುವ ಪುರುಷೋತ್ತಮ ಗ್ಯಾಂಗ್ ತಮ್ಮ ಪ್ರಭಾವ ಬಳಸಿಕೊಂಡು ದಾಳಿ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ ಕಾನೂನು ಸುವ್ಯವಸ್ಥೆ ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
Leave A Reply