ಬೀಡಾ ಜಗಿಯುತ್ತ ನಾಡಗೀತೆಗೆ ಅವಮಾನ ಮಾಡಿದ ಸಿದ್ದರಾಮಯ್ಯ. ಮರೆಯಾದ ಕನ್ನಡ ಹೋರಾಟಗಾರರು
ಹಾವೇರಿ: ರಾಜ್ಯಕ್ಕೆ ಪ್ರತ್ಯೇಕ ಧ್ವಜ, ಕನ್ನಡಿಗರ ಅಸ್ಮಿತೆ ಎಂದು ಬೊಂಬಡಾ ಬಾರಿಸುವ ಸಿದ್ದರಾಮಯ್ಯ, ಕನ್ನಡದ ಭಾಷೆ ಹೆಸರಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರ. ಭಾಷೆಯನ್ನು ತಮ್ಮ ರಾಜಕೀಯಕ್ಕೆ ಅಸ್ತ್ರವಾಗಿಟ್ಟುಕೊಂಡು ದೇಶದ ಏಕತೆಗೆ ಭಂಗ ಉಂಟು ಮಾಡಿದ ಸಿದ್ದರಾಮಯ್ಯಗೆ ವಾಸ್ತವದಲ್ಲಿ ರಾಜ್ಯ, ರಾಜ್ಯದ ಕನ್ನಡ, ನಾಡ ಗೀತೆಯ ಮೇಲೆ ಅಭಿಮಾನವಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ಅದಕ್ಕೆ ಹಾವೇರಿಯಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿಯಾಗಿದೆ.
ರಾಜ್ಯದ ಏಕತೆ, ಕಲೆ, ಸಂಸ್ಕೃತಿಯನ್ನು ಬಿಂಬಿಸುವ ನಾಡಗೀತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಮಾನ ಮಾಡುವ ಮೂಲಕ ರಾಜ್ಯದ ಆರು ಕೋಟಿ ಕನ್ನಡಿಗರ ಭಾವನೆಗಳಿಗೆ ಧಕ್ಕೆತಂದಿದ್ದಾರೆ. ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ನಾಡಗೀತೆ ಹಾಡುವ ವೇಳೆ ಬೀಡ ಜಗಿಯುತ್ತಾ, ಮೋಜು ಮಾಡುತ್ತಾ ನಿಂತಿದ್ದಾರೆ. ಬೀಡಿ ಜಗಿಯುವುವುದು ನಾಡಗೀತೆ ಆರಂಭದ ನಂತರವೂ ಸ್ಥಗಿತವಾಗದೇ, ಇಡೀ ಗೀತೆ ಮುಗಿಯುವವರೆಗೆ ಬೀಡಾ ಜಗಿಯುತ್ತಾ ನಿಂತಿರುವುದು ಸಭೀಕರ ಆಕ್ರೋಶಕ್ಕೆ ಕಾರಣವಾಯಿತು.
ಹಾವೇರಿ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಅಸುಂಡಿ ಕೆರೆ ಸೇರಿ 17 ಕೆರೆಗಳನ್ನು ತುಂಬಿಸುವ 92 ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಿದ ಸಿದ್ದರಾಮಯ್ಯ, ತಮ್ಮ ಹಳೆಯ ಹಳಬಂಡಗಳನ್ನು ತೋರ್ಪಡಿಸಿ ಕುವೆಂಪು ಅವರ ನಾಡಗೀತೆಯ ಸಾಲುಗಳಾದ ಸರ್ವ ಜನಾಂಗದ ಶಾಂತಿಯ ತೋಟ ಸೇರಿ ನಾನಾ ಸಾಲುಗಳನ್ನು ಉಲ್ಲೇಖಿಸಿ, ಇದನ್ನು ಮೋಜಿಗಾಗಿ ಹಾಡುವುದಲ್ಲ. ಹಾಡಿದಂತೆ ನಡೆದುಕೊಳ್ಳಬೇಕು ಎಂದು ಹೇಳಿದ ಮಾತು ಹಾಸ್ಯಸ್ಪದವಾಗಿ ಮಾರ್ಪಟ್ಟಿತ್ತು. ನಾಡಗೀತೆಗೆ ಗೌರವ ನೀಡದ ವ್ಯಕ್ತಿ ಸಿಎಂ ತಮ್ಮ ಬಾಯಿಯಿಂದ ನುಡಿ ಮುತ್ತು ಉದುರಿಸಿರುವುದು ಜನರ ಲೇವಡಿಗೆ ಕಾರಣವಾಯಿತು.
Leave A Reply