ಉತ್ತರಾಖಂಡದಲ್ಲಿ ಮತಾಂತರಗೊಳಿಸಿದರೆ ಇನ್ನು ಐದು ವರ್ಷ ಜೈಲು ಶಿಕ್ಷೆ, ಧರ್ಮಾಂಧರಿಗೆ ಬಿಜೆಪಿ ಸರ್ಕಾರ ಗುನ್ನ!
ಡೆಹ್ರಾಡೂನ್: ಕೇರಳ, ಕರ್ನಾಟಕ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳ ಇಸ್ಲಾಂ ಧರ್ಮಗುರುಗಳು ಹಾಗೂ ಕ್ರೈಸ್ತ ಮಿಷನರಿಗಳು ಹಿಂದೂಗಳ ಮತಾಂತರದಲ್ಲಿ ತೊಡಗಿರುವ ಪ್ರಕರಣಗಳು ಸುದ್ದಿಯಾಗುತ್ತಿರುವ ಬೆನ್ನಲ್ಲೇ, ಉತ್ತರಾಖಂಡದಲ್ಲಿ ಮತಾಂತರ ವಿರುದ್ಧ ಬಿಜೆಪಿ ಸರ್ಕಾರ ಮಹತ್ತರ ಹೆಜ್ಜೆಯೊಂದನ್ನು ಇಟ್ಟಿದೆ.
ಹಣ, ಮನೆ, ಕಾರು, ಉದ್ಯೋಗ ಸೇರಿ ಹಲವು ಆಮಿಷವೊಡ್ಡಿ ಅಕ್ರಮವಾಗಿ ಮತಾಂತರ ಮಾಡುವುದನ್ನು ನಿಷೇಧಿಸಲು ಉತ್ತರಾಖಂಡ ರಾಜ್ಯ ಸರ್ಕಾರ “ಧರ್ಮ ಸ್ವತಂತ್ರತಾ ಅಧಿನಿಯಮ” ಎಂಬ ಕರಡು ಮಸೂದೆಯನ್ನು ಅಂಗೀಕರಿಸಿದೆ.
ಯಾವುದೇ ವ್ಯಕ್ತಿಗೆ ಹಣ, ಕಾರು ಸೇರಿ ಯಾವುದೇ ಆಮಿಷ ಒಡ್ಡಿ ಮತಾಂತರ ಮಾಡುವಂತಿಲ್ಲ. ಒಂದು ವೇಳೆ ಹೀಗೆ ಅಕ್ರಮವಾಗಿ ಮತಾಂತರ ಮಾಡುವುದು ಕಂಡು ಬಂದರೆ, ಅಂತಹವರಿಗೆ ಒಂದರಿಂದ ಐದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ಆದಾಗ್ಯೂ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬಡವರೇ ಇವರ ಗುರಿಯಾಗಿರುವುದರಿಂದ ಮಸೂದೆ ರಚನೆ ವೇಳೆ ಜಾಣತನ ಮೆರೆದಿರುವ ರಾಜ್ಯ ಸರ್ಕಾರ, ಎಸ್ಸಿ, ಎಸ್ಟಿಯವರನ್ನು ಮತಾಂತರಗೊಳಿಸಿದರೆ ಕನಿಷ್ಠ 2 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ತಿಳಿಸಿದೆ.
ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ನೇತೃತ್ವದ ರಾಜ್ಯ ಸರ್ಕಾರ ಈ ಕರಡು ಮಸೂದೆಗೆ ಅಂಗೀಕಾರ ನೀಡಿದ್ದು, ಈ ಮಸೂದೆ ಕಾಯಿದೆಯಾಗಿ ಜಾರಿಯಾದರೆ ಮತಾಂತರಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ.
ಒಟ್ಟಿನಲ್ಲಿ ದೇಶಾದ್ಯಂತ ಲವ್ ಜಿಹಾದ್, ಕ್ರಿಶ್ಚಿಯನ್ ಮಿಷನರಿಗಳ ಮತಾಂತರ, ಇಸ್ಲಾಂ ಮೂಲಭೂತವಾದಿಗಳ ಉಪಟಳದಿಂದ ಹಲವು ಹಿಂದೂಗಳು ಮತಾಂತರದ ಪಿಡುಗಿಗೆ ಬಲಿಯಾಗುತ್ತಿದ್ದು, ರಾಜ್ಯ ಸರ್ಕಾರದ ಈ ಕರಡು ಮಸೂದೆ ಮತಾಂತರಿಗಳಿಗೆ ಗುನ್ನ ನೀಡಿದಂತಾಗಿದೆ. ಎಲ್ಲ ರಾಜ್ಯಗಳಲ್ಲೂ ಇಂಥದ್ದೊಂದು ಕಾನೂನು ಜಾರಿಗೊಳಿಸುವುದು ಧರ್ಮ ರಕ್ಷಣೆ ದೃಷ್ಟಿಯಿಂದ ಒಳಿತು.
Leave A Reply