ವಿಧಿ ಎಷ್ಟು ಕ್ರೂರ, ಮಗುವನ್ನು ಮುದ್ದಾಡಬೇಕಿದ್ದ ಯೋಧ ದೇಶಕ್ಕಾಗಿ ಹುತಾತ್ಮನಾದ
ಹಾಸನ: ಆ ಯೋಧ ತನ್ನ ವಂಶದ ಕುಡಿಯನ್ನು ಮುದ್ದಾಡಬೇಕಿತ್ತು. ಆದರೆ ಪತ್ನಿಯ ಸೀಮಂತ ಮುಗಿಸಿ, ‘ಭಯ ಪಡಬೇಡ ಕೆಲವೇ ದಿನಗಳಲ್ಲಿ ಬರುವೆ’ ಎಂದು ಹೋದವ ಯೋಧ ಮರಳಿ ಬಂದಿದ್ದು ಮಾತ್ರ ಹುತಾತ್ಮ ಪಟ್ಟ ಧರಿಸಿ. ಮಗುವನ್ನು ಮುದ್ದಾಡುವ ಭಾಗ್ಯ ಆತನಿಗೆ ಇಲ್ಲದಾಗಿದೆ. ಛತ್ತಿಸಗಢ್ ದಲ್ಲಿ ಮಾವೋವಾದಿಗಳ ಅಟ್ಟಹಾಸಕ್ಕೆ ಬಲಿಯಾದ ಒಂಬತ್ತು ಸೈನಿಕರಲ್ಲಿ ಮಗುವನ್ನು ಮುದ್ದಾಡಬೇಕಿದ್ದ ಹಾಸನ ಜಿಲ್ಲೆಯ ಅರಕೂಲಗೂಡಿನ ಹರದೂರಿನ ಯೋಧ ಎಚ್.ಎಸ್. ಚಂದ್ರು ಒಬ್ಬರು. ವಿಧಿ ಮಗುವನ್ನು ಮುದ್ದಾಡಬೇಕಿದ್ದ ಯೋಧನನ್ನು ಬಲಿ ತೆಗೆದುಕೊಂಡು ಬಿಟ್ಟಿದೆ.
ಛತ್ತಿಗಡದ ಅರಣ್ಯದಲ್ಲಿ ಮಾವೋವಾಧಿಗಳ ವಿರುದ್ಧ ಕಾರ್ಯಾಚರಣೆಗೆ ತೆರಳುವ ವೇಳೆಯಲ್ಲಿ ನಕ್ಸಲರು ಸ್ಫೋಟಿಸಿದ ನೆಲಬಾಂಬ್ ನಿಂದ ಯೋಧ ಚಂದ್ರು ಸೇರಿ 9 ಯೋಧರು ಹುತಾತ್ಮರಾಗಿದ್ದರು. ಮನೆಗೆ ಆಶ್ರಯವಾಗಿದ್ದ, ದೇಶಕ್ಕೆ ರಕ್ಷಕನಾಗಿದ್ದ, ಗ್ರಾಮಕ್ಕೆ ಮಾದರಿಯಾಗಿದ್ದ 26 ವಯಸ್ಸಿನ ಚಂದ್ರು ನಕ್ಸಲರ ಅಟ್ಟಹಾಸಕ್ಕೆ ಬಲಿಯಾಗಿದಕ್ಕೆ ಇಡೀ ಗ್ರಾಮ, ಕುಟುಂಬದಲ್ಲಿ ಶೋಕ ಮಡುಗಟ್ಟುವಂತೆ ಮಾಡಿದೆ.
2015 ಮದುವೆಯಾಗಿದ್ದ ಚಂದ್ರು ಛತ್ತೀಸಗಢ್ ದಲ್ಲಿ ಪತ್ನಿಯೊಂದಿಗೆ ವಾಸಿಸಿದ್ದರು. ಫೆ.17ರಂದು ಹರದೂರಿಗೆ ಬಂದಿದ್ದರು. ಪತ್ನಿಯ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪತ್ನಿಗೆ ಮತ್ತೆ ಬರುವೇ ಭಯ ಪಡಬೇಡ. ಹೊಸ ಮನೆಗೆ ಮಗುವಿನೊಂದಿಗೆ ಪ್ರವೇಶ ಮಾಡೋಣ ಎಂದು ಹೇಳಿ ಹೋಗಿದ್ದರು. ಆದರೆ ನಕ್ಸಲರ ಅಟ್ಟಹಾಸಕ್ಕೆ ಚಂದ್ರು ಬಲಿಯಾಗಿದ್ದು, ಇಡೀ ಹರದೂರು ಶೋಕದಲ್ಲಿ ಮುಳುಗುವಂತೆ ಮಾಡಿದೆ. ಆತ್ಮೀಯ ಗೆಳೆಯನನ್ನು ಕಳೆದುಕೊಂಡ ಚಂದ್ರು ಸ್ನೇಹಿತರ ಕಣ್ಣಾಲಿಗಳು ತೇವಗೊಂಡಿವೆ. ಚಂದ್ರು ಇನ್ನಿಲ್ಲ ಎಂಬ ಸುದ್ದಿ ಉಹಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ.
ಭಾರತದ ಸೈನ್ಯದ ಹೆಮ್ಮೆಯೇ ಅಂಥಾದ್ದು, ಆದರೆ ಕುಟುಂಬದ ಸೌಖ್ಯಗಳನ್ನು ಮರೆತು ನಮ್ಮ ಸೈನಿಕರು ಜೀವ ಪಣಕ್ಕಿಟ್ಟು ಹೋರಾಡುತ್ತಾರೆ. ಇತ್ತ ಅವರ ಕುಟುಂಬ ಸೈನ್ಯದಲ್ಲಿ ಕೆಲಸ ಮಾಡುವ ಯೋಧನನ್ನು ನೆನಪಿಸಿಕೊಳ್ಳುತ್ತ, ಗೌರವಾಧರಗಳಿಂದ ಜೀವನ ಸಾಗಿಸುತ್ತೇ. ಆದರೆ ಆತ ಇನ್ನಿಲ್ಲ ಎಂದಾಗ ಮಾತ್ರ ದುಖಃ ತಡೆದುಕೊಳ್ಳಲಾದೀತೆ. ಚಂದ್ರು ನಂತ ಯೋಧನ ಕುಟುಂಬಕ್ಕೊಂದು ಸಲಾಮ್ ಹೇಳಲೇಬೇಕು.
Leave A Reply