ಬಾಂಗ್ಲಾದಲ್ಲಿ ಕೀರ್ತನೆ ಮಾಡುತ್ತಿದ್ದ ಹಿಂದೂಗಳ ಮೇಲೆ ದಾಳಿ, ದೇಶ ತೊರೆಯುವಂತೆ ಕಿರುಕುಳ
ಢಾಕಾ: ಭಾರತದ ಸಹಾಯದಿಂದ ಸ್ವಾತಂತ್ರ್ಯ ಪಡೆದಿರುವ ಬಾಂಗ್ಲಾದಲ್ಲೂ ಹಿಂದೂಗಳಿಗೆ ನೆಮ್ಮದಿ ಇಲ್ಲದಂತಾಗಿದ್ದು, ಹಿಂದೂಗಳ ಮೇಲೆ ನಿರಂತರವಾಗಿ ಹಲ್ಲೆ, ದಾಳಿ, ದರೋಡೆ, ಅತ್ಯಾಚಾರ ಅನಾಚಾರಗಳು ಅನಾಯಾಸವಾಗಿ ನಡೆದಿವೆ. ಇದೀಗ ಹಿಂದೂಗಳ ಮೇಲೆ ಹಲ್ಲೆ ನಡೆಸಿ, ದೇಶ ಬಿಟ್ಟು ತೊಲಗಿ ಎಂದು ಒತ್ತಾಯಿಸಿದ, ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.
ಬಾಂಗ್ಲಾದೇಶದ ಖಜೂರಿಯಾ ಗ್ರಾಮದಲ್ಲಿ ಹಿಂದೂಗಳು ವಾರ್ಷಿಕ ಸಾಮೂಹಿಕ ಕೀರ್ತನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನೂರಾರು ಹಿಂದೂಗಳು ಸಾಮೂಹಿಕವಾಗಿ ಕೀರ್ತನೆ ಹಮ್ಮಿಕೊಂಡಿದ್ದರು. ಈ ವೇಳೆ ಪ್ರವೇಶಿಸಿದ ಶಾಹಿನ್ ಮತ್ತು ನೂರುಲ್ ಹಕ್ ಎಂಬ ಮುಸ್ಲಿಂ ಯುವಕರು ಹಿಂದೂಗಳ ಮೇಲೆ ದಾಳಿ ಮಾಡಿದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. ಅಲ್ಲದೇ ಕೀರ್ತನೆ ಮಾಡುವಂತಿದ್ದರೇ, ಭಾರತಕ್ಕೆ ಹೋಗಿ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಬಾಂಗ್ಲಾದ eibela.com ವರದಿ ಮಾಡಿದೆ.
ಗ್ರಾಮದಲ್ಲಿ ಸಾಮಾನ್ಯ ಹಿಂದೂಗಳು ಜೀವನ ನಡೆಸುವುದೇ ದುಸ್ತರವಾಗಿದೆ. ಜನರು ಆತಂಕದಲ್ಲೇ ಜೀವನ ನಡೆಸುವಂತಾಗಿದೆ. ಸ್ಥಳೀಯ ಗುಂಡಾಗಳು ಹಿಂದೂಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಕಿರುಕುಳ ನೀಡುವ ಪ್ರಕ್ರಿಯೆ ನಿರಂತರವಾಗಿವೆ ಎಂದು ಗ್ರಾಮದ ಪುಲಿನ್ ಘರಾಮಿ, ಮಣಿಂದ್ರ ಬಿಸ್ವಾಸ್, ಮಹಾರಾಜ್ ಬಿಸ್ವಾಸ್, ಹರಿದಾಸ್ ಘರಾಮಿ ತಿಳಿಸಿದ್ದಾರೆ.
ಸ್ಥಳೀಯ ಆಡಳಿತ ಹಿಂದೂಗಳನ್ನು ರಕ್ಷಿಸಬೇಕು. ಇಲ್ಲದಿದ್ದರೇ ಜೀವನ ಮತ್ತಷ್ಟು ದುರಸ್ತರವಾಗಲಿದೆ ಎಂದು ಹಿಂದೂಗಳು ಆಗ್ರಹಿಸಿದ್ದಾರೆ. ಇನ್ನು ಘಟನೆ ನಡೆದ ಸ್ಥಳಕ್ಕೆ ಜನಪ್ರತಿನಿಧಿಗಳು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ತನಿಖೆ ನಡೆಸಲಾಗುತ್ತಿದೆ.
Leave A Reply