ಹೋರಾಟ ಮಾಡುತ್ತಿದ್ದ ರೈತರ ಟೆಂಟ್ ಸುಟ್ಟ ಸಿಪಿಎಂ ಕಾರ್ಯಕರ್ತರ ದುರುದ್ದೇಶ ಎಂಥಾದ್ದು ಗೊತ್ತಾಯಿತಲ್ಲವೇ?

ತಿರುವನಂತಪುರ: ಮೊನ್ನೆ ಮಹಾರಾಷ್ಟ್ರದಲ್ಲಿ ಸಾವಿರಾರು ರೈತರು ಬೃಹತ್ ಪ್ರತಿಭಟನೆ ನಡೆಸಿದರಲ್ಲ, ಆಗ ಕಾಂಗ್ರೆಸ್ ಸೇರಿ ಹಲವು ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದವು. ಆದರೆ ರೈತ ಪರ ದೇವೇಂದ್ರ ಫಡ್ನವೀಸ್ ಅವರು ಆರು ತಿಂಗಳಲ್ಲಿ ರೈತರ ಬೇಡಿಕೆ ಈಡೇರಿಸುವೆ ಎಂದು ಭರವಸೆ ನೀಡಿದರು. ಅದು ಪ್ರಜಾಪ್ರಭುತ್ವದ ಹೆಗ್ಗಳಿಗೆ, ಲಕ್ಷಣ.
ಆದರೆ ಈ ಸಿಪಿಎಂ ಆಡಳಿತವಿರುವ ಕೇರಳದಲ್ಲಿ ಏನಾಗುತ್ತಿದೆ? ಪ್ರಜಾಪ್ರಭುತ್ವದ ಬೇರುಗಳನ್ನೇ ಬಿಸಾಡುತ್ತಿದ್ದಾರಾ ಈ ಕಮ್ಮಿನಿಷ್ಠರು ಎಂಬ ಅನುಮಾನ ಕಾಡುತ್ತಿದೆ. ಇಷ್ಟಾದರೂ ಯಾವುದೇ ಬುದ್ಧಿಜೀವಿಗಳು ಸಹ ಇತ್ತ ಗಮನ ಹರಿಸುತ್ತಿಲ್ಲ, ಬಾಯಿ ಬಿಡುತ್ತಿಲ್ಲ ಎಂಬುದು ಸಹ ಒಳಮರ್ಮ ಬಯಲು ಮಾಡಿದೆ.
ಹೌದು, ಕೇರಳದ ಕಣ್ಣೂರು ಜಿಲ್ಲೆಯ ವಯಲ್ಕಿಲಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಸುಮಾರು 250 ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಆದರೆ, ರೈತರು ಭೂಮಿ ವಶಪಡಿಸಿಕೊಳ್ಳುವುದು ಬೇಡ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ.
ಅಷ್ಟೇ, ಅಲ್ಲ ಭತ್ತ ಬೆಳೆದು ಜೀವನ ಸಾಗಿಸುವ 46 ರೈತರು ವಯಲ್ಕಿಲಿಯಲ್ಲಿ ಭೂಮಿ ವಶಪಡಿಸಿಕೊಳ್ಳುವುದರ ವಿರುದ್ಧ ಟೆಂಟ್ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಭೂಮಿ ವಶಪಡಿಸಿಕೊಳ್ಳುವುದು ಬೇಡ ಎಂದು ಪಟ್ಟುಹಿಡಿದಿದ್ದಾರೆ.
ಆದರೆ ಶತಾಯಗತಾಯ ರೈತರ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿರುವ ಸಿಪಿಎಂ ಸರ್ಕಾರ ಮೊದಲು ರೈತರಿಗೆ ಬೆದರಿಕೆ ಹಾಕಿದೆ. ಅದಕ್ಕೂ ಜಗ್ಗದ ಹಿನ್ನೆಲೆಯಲ್ಲಿ ಸಿಪಿಎಂ ಕಾರ್ಯಕರ್ತರನ್ನು ಬಿಟ್ಟು ರೈತರ ಟೆಂಟು ಸುಟ್ಟುಹಾಕಿದೆ ಎಂದು ತಿಳಿದುಬಂದಿದೆ.
ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಮೊದಲು ಬಂಧಿಸಲಾಯಿತು. ಬಳಿಕ ಸಿಪಿಎಂ ಕಾರ್ಯಕರ್ತರು ಬಂದು ರೈತರು ಹಾಕಿದ್ದ ಟೆಂಟ್ ಗಳನ್ನು ಸುಟ್ಟು ಹಾಕಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರದ ಆಡಳಿತದಲ್ಲಿ ರೈತರು ಪ್ರತಿಭಟನೆ ಮಾಡಿ, ಅದಕ್ಕೆ ಸರ್ಕಾರ ನ್ಯಾಯಯುತವಾಗಿ ಬೇಡಿಕೆ ಈಡೇರಿಸುತ್ತೇನೆ ಎಂದು ಹೇಳಿದ ಬಳಿಕ ಪ್ರತಿಭಟನೆ ಹಿಂಪಡೆದರೆ, ಅದು ಒಳಒಪ್ಪಂದ ಎಂದು ಕಾಂಗ್ರೆಸ್ಸಿಗರು ಆರೋಪ ಮಾಡುತ್ತಾರೆ. ಆದರೆ ಅದೇ ಕೇರಳದಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಟೆಂಟ್ ಸುಟ್ಟು ಹಾಕಿ ದರ್ಪ ಮೆರೆಯುವ ಸಿಪಿಎಂ ಕಾರ್ಯಕರ್ತರ ಬಗ್ಗೆ ಮಾತ್ರ ಕಾಂಗ್ರೆಸ್ ಬಾಯಿಗೆ ಬೀಗ ಹಾಕಿಕೊಂಡು ಕುಳಿತುಕೊಳ್ಳುವುದನ್ನು ನೋಡಿದರೆ ಇವರ ರೈತಪರ ಕಾಳಜಿ ಎಷ್ಟಿದೆ ಎಂಬುದು ಢಾಳಾಗುತ್ತದೆ. ಅದಕ್ಕೇ ಅಲ್ಲವೇ, ಜನ ದೇಶದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ಸನ್ನು, ತ್ರಿಪುರಾದಲ್ಲಿ ಸಿಪಿಎಂ ಅನ್ನು ಮೂಲೆಗೆ ತಳ್ಳಿದ್ದು.
Leave A Reply