ಅನಾಥ ಬಾಲಕಿಯರ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದ ಕ್ರೈಸ್ತ ಪಾದ್ರಿ ಕೊನೆಗೂ ಅಪರಾಧಿ ಎಂದು ಸಾಬೀತು

ಹೈದರಾಬಾದ್: ಭಾರತದಲ್ಲಿ ಕ್ರೈಸ್ತ ಪಾದ್ರಿಗಳಿಗೆ ಪೂಜ್ಯ ಭಾವನೆಯಿತ್ತು. ಮದರ್ ಥೆರೇಸಾ ಅವರಂತೆಯೇ ಇವರು ಸಹ ಭಾರತೀಯರ ಸೇವೆ ಮಾಡಲು ಬಂದಿದ್ದಾರೆ ಎಂದೇ ಭಾವಿಸಲಾಗುತ್ತಿತ್ತು. ಆದರೆ ಯಾವಾಗ ಈ ಕ್ರೈಸ್ತ ಪಾದ್ರಿಗಳು ಹಿಂದೂಗಳ ಮತಾಂತರಕ್ಕೆ ನಿಂತರೋ, ಅಲ್ಲಿಂದ ಇವರ ಮೇಲಿದ್ದ ನಂಬಿಕೆಯೇ ಹೊರಟುಹೋಯಿತು.
ಇಂತಹ ನೀಚ ಕ್ರೈಸ್ತ ಪಾದ್ರಿಗಳ ಸಾಲಿಗೆ ಸೇರಿದ್ದವನೊಬ್ಬ ಅಪರಾಧಿ ಎಂದು ಸಾಬೀತಾಗಿದ್ದು, ಕ್ರೈಸ್ತ ಪಾದ್ರಿಗಳನ್ನು ನಂಬಲೇಬಾರದು ಎಂಬ ಮಾತಿಗೆ ಪುಷ್ಟಿ ಬಂದಿದೆ.
ಹೌದು, ಆಸ್ಟ್ರೇಲಿಯಾದಿಂದ ಭಾರತದ ಆಂಧ್ರಪ್ರದೇಶಕ್ಕೆ ಬಂದ ಈತ ವಿಶಾಖಪಟ್ಟಣದಲ್ಲಿ ವೈದ್ಯ, ಕ್ರೈಸ್ತ ಪಾದ್ರಿ, ಚಾರಿಟಿಯವನಾಗಿ ಕಾರ್ಯನಿರ್ವಹಿಸುತ್ತಿದ್ದ ಪೌಲ್ ಡೀನ್ ಅದಷ್ಟನ್ನೇ ಮಾಡಿದ್ದರೆ ಯಾವುದೇ ಸಂಕಷ್ಟಕ್ಕೆ ಸಿಲುಕುತ್ತಿರಲಿಲ್ಲ.
ಆದರೆ, ತನ್ನೊಳಗಿನ ರಾಕ್ಷಸನನ್ನು ಹೊರಹಾಕಿದ್ದ ಪೌಲ್, ಅನಾಥ ಬಾಲಕಿಯರ ಮೇಲೆ ಅತ್ಯಾಚಾರ, ಹಿಂದೂಗಳ ಮತಾಂತರ ಕೃತ್ಯದಲ್ಲಿ ತೊಡಗಿದ. ಯಾವಾಗ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣ ಹೊರಬೀಳುತ್ತಲೇ ಪೊಲೀಸರು ಈತನನ್ನು ಬಂಧಿಸಿದ್ದರು.
ಈಗ ಈತನ ವಿರುದ್ಧದ ವಿಚಾರಣೆ ಎಲ್ಲ ಮುಗಿದಿದ್ದು, ಪೌಲ್ ಅಪರಾಧಿ ಎಂದು ವಿಶಾಖಪಟ್ಟಣಂ ರೈಲ್ವೇ ನ್ಯಾಯಾಲಯ ತೀರ್ಪು ನೀಡಿದೆ. ಭಾರತೀಯ ದಂಡ ಸಂಹಿತೆ 377 (ಅನೈಸರ್ಗಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು), 292 (2) (ಎ) (ಅಶ್ಲೀಲ ವರ್ತನೆ) ಹಾಗೂ ಪಾಸ್ ಪೋರ್ಟ್ ಆ್ಯಕ್ಟ್ ಅನ್ವಯ ಅಪರಾಧಿ ಎಂದು ತೀರ್ಪು ನೀಡಿದ್ದಲ್ಲದೆ, 32 ಸಾವಿರ ರೂ. ದಂಡ ವಿಧಿಸಲಾಗಿದೆ. ಪೌಲ್ 30 ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದಾನೆ.
ಚಿತ್ರ ಕೃಪೆ: ದಿ ನ್ಯೂಸ್ ಮಿನಿಟ್