ಅತ್ಯಚಾರ ಆರೋಪಿಗಳಿಗೆ ಮರಣದಂಡನೆ, ಹರ್ಯಾಣ ಬಿಜೆಪಿ ಸರ್ಕಾರದಿಂದ ನೂತನ ಕಾಯ್ದೆ

ಚಂಡಿಗಡ್: ಯುವತಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಹರ್ಯಾಣದ ಬಿಜೆಪಿಯ ಖಟರ್ ಲಾಲ್ ಸರ್ಕಾರ ಕೈಗೊಂಡಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಎಸಗಿದವರಿಗೆ ಮರಣದಂಡನೆ ವಿಧಿಸುವ ಕಾಯಿದೆಗೆ ಅನುಮತಿ ನೀಡುವ ಮೂಲಕ ಗಮನ ಸೆಳೆದಿದೆ.
ಮಹಿಳಾ ರಕ್ಷಣೆಯಲ್ಲಿ ಈ ಕಾಯ್ದೆ ವಿಶೇಷ ಪಾತ್ರ ವಹಿಸಲಿದೆ. ಈ ನಿರ್ಧಾರ ಐತಿಹಾಸಿಕವಾದದ್ದು ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟರ್ ಹೇಳಿದ್ದಾರೆ. ರಾಜ್ಯ ಸಚಿವ ಸಂಪುಟ ಸಭೆ ಫೆಬ್ರವರಿ 27ರಂದು ಅತ್ಯಾಚಾರ ನಿಯಂತ್ರಣ ಕಾಯಿದೆ ಬಗ್ಗೆ ಚರ್ಚೆ ನಡೆಸಿತ್ತು, ಗುರುವಾರ ನಡೆದ ಚಳಿಗಾಲದ ಅಧೀವೇಶನದಲ್ಲಿ ಸರ್ವ ಸದಸ್ಯರ ಅನುಮೋದನೆಯೊಂದಿಗೆ ಮಸೂದೆಗೆ ಅಸ್ತು ಎನ್ನಲಾಯಿತು.
ಜನವರಿಯಲ್ಲಿ ಹರ್ಯಾಣದಲ್ಲಿ ನಡೆದ ಐದು ಅತ್ಯಾಚಾರ ಸರಣಿಗಳಿಂದ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿತ್ತು. ಅಲ್ಲದೇ ಸರ್ಕಾರ ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರಿಸುವಲ್ಲಿ ವಿಫಲವಾಗಿತ್ತು. ಆದ್ದರಿಂದ ಇದೀಗ ಅತ್ಯಾಚಾರ ತಡೆಯುವ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಂಡಿರುವ ಹರ್ಯಾಣ ಸರ್ಕಾರ. ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಿದೆ. ಮಸೂದೆಗೆ ಸರ್ವಸಮ್ಮತ ನೀಡಿದ ಎಲ್ಲ ಪಕ್ಷದವರಿಗೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟರ್ ಧನ್ಯವಾದ ಅರ್ಪಿಸಿದ್ದಾರೆ.
Leave A Reply