ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವುದಾಗಿ ಒಪ್ಪೊಪ್ಪಿಕೊಂಡ ಮುಸ್ಲಿಂ ಯುವಕ
ದಿಸ್ಪುರ: ಅಸ್ಸಾಂನ ಸಿಲ್ಚಾರ್ ನಲ್ಲಿ ಆರು ವರ್ಷದ ಬಾಲಕಿಯ ಮೇಲೆ ಮುಸ್ಲಿಂ ಯುವಕನೊಬ್ಬ ಅತ್ಯಾಚಾರ ಮಾಡಿದ್ದಲ್ಲದೆ, ಕೊಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ಸಿಲ್ಚಾರ್ ನ ಸಿಲ್ದುಬಿ ಎಂಬ ಗ್ರಾಮದ ಬಾಲಕಿಯನ್ನು ಅಪಹರಿಸಿದ್ದ ತೌಫಿಕ್ ಅಹ್ಮದ್, ಆಕೆಯನ್ನು ಅತ್ಯಾಚಾರ ಎಸಗಿ, ಕೊಲೆ ಮಾಡಿದ ಬಳಿಕ ಸಿಲ್ಚಾರ್ ನ ಕ್ರೀಡಾಂಗಣವೊಂದರಲ್ಲಿ ಬಿಸಾಕಿ ಹೋಗಿದ್ದಾನೆ ಎಂದು ತಿಳಿದುಬಂದಿದೆ.
ಪ್ರಸ್ತುತ ತೌಫಿಕ್ ಅಹ್ಮದ್ ನನ್ನು ಪೊಲೀಸರು ಬಂಧಿಸಿದ್ದು, ತಾನೇ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಈ ಹಿಂದೆಯೂ ಬಾಲಕಿಯನ್ನು ಎರಡು ಬಾರಿ ಅಪಹರಿಸಲು ತೌಫಿಕ್ ಪ್ರಯತ್ನಿಸಿದ್ದ. ನಾವು ಸಹ ಆತನನ್ನು ಎಚ್ಚರಿಸಿದ್ದೆವು. ಪೊಲೀಸ್ ಠಾಣೆಗೆ ದೂರು ನೀಡುವುದಾಗಿಯೂ ತಿಳಿಸಿದ್ದೆವು. ಆದರೂ ಈತ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ದೇಶದ ಹಲವೆಡೆ ಇಸ್ಲಾಂ ಮೂಲಭೂತವಾದಿಗಳ ಲವ್ ಜಿಹಾದ್, ಮತಾಂತರದಿಂದ ಹಿಂದೂ ಯುವತಿಯರು ನರಳುತ್ತಿರುವ ಬೆನ್ನಲ್ಲೇ, ಬಾಲಕಿ ಮೇಲೆ ಮುಸ್ಲಿಂ ಯುವಕನೊಬ್ಬ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ದಾರುಣತೆಯ ಸಂಕೇತವಾಗಿದೆ.
Leave A Reply