ಹಿಂದೂ ಸಂಪ್ರದಾಯದ ಮೇಲೂ ಮೂಲಭೂತವಾದಿಗಳ ಕಣ್ಣು, ಶಿವನ ಮೆರವಣಿಗೆ ಮಾಡುವವರ ಮೇಲೆ ಮುಸ್ಲಿಮರ ದಾಳಿ!
ಲಖನೌ: ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಆಚರಣೆಗೆ ಹೇಗೆ ಮುಸ್ಲಿಮರು ಅಡ್ಡಬರುತ್ತಿದ್ದಾರೋ, ಅದೇ ರೀತಿ ದೇಶದ ಹಲವೆಡೆ ಸಹ ಹಿಂದೂಗಳ ಸಂಪ್ರದಾಯ, ಹಬ್ಬಗಳ ಆಚರಣೆಗೆ ಅಡ್ಡಬರುತ್ತಿರುವ ಪ್ರಕರಣಗಳು ಜಾಸ್ತಿಯಾಗಿವೆ.
ಹೌದು, ಇದಕ್ಕೆ ನಿದರ್ಶನವಾಗಿ ಉತ್ತರ ಪ್ರದೇಶದಲ್ಲಿ ಇಂಥಾದ್ದೇ ಘಟನೆ ನಡೆದಿದ್ದು, ಬಾರಾಬಂಕಿ ಎಂಬಲ್ಲಿ ಶಿವನ ಮೂರ್ತಿ ಮೆರವಣಿಗೆ ಮಾಡುವ “ಶಿವ ಬಾರಾತ್’’ ಆಚರಣೆ ಮಾಡುವಾಗ ಕೆಲವು ಮುಸ್ಲಿಂ ಮೂಲಭೂತವಾದಿಗಳು ದಾಳಿ ಮಾಡಿ, ಹಲ್ಲೆ ನಡೆಸಿದ್ದಾರೆ.
ಬಾರಾಬಂಕಿಯ ಇತಿಹಾಸ ಪ್ರಸಿದ್ಧ ಲೋಧೇಶ್ವರ ಮಹಾದೇವ ದೇವಾಲಯದಿಂದ ಮೆರವಣಿಗೆ ನಡೆಯುತ್ತಿದ್ದ ವೇಳೆ ಸುಮಾರು 45ಕ್ಕೂ ಹೆಚ್ಚು ಮುಸ್ಲಿಮರು ಬಿದಿರು, ದೊಣ್ಣೆ ಸೇರಿ ಹಲವು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ಮೂವರು ಮಹಿಳೆಯರು ಸೇರಿ 10 ಜನರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಸುಮಾರು 20 ನಿಮಿಷ ಮುಸ್ಲಿಮರು ದಾಳಿ ಮಾಡಿದ್ದು, ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರ ಸೇರಿ ಹಲವು ಆಭರಣಗಳನ್ನು ಕಸಿದುಕೊಂಡು ಹೋಗಿದ್ದಾರೆಎಂದು ಮೂಲಗಳು ತಿಳಿಸಿವೆ. ಆದಾಗ್ಯೂ ಸ್ಥಳಕ್ಕಾಗಮಿಸಿದ ಪೊಲೀಸರು ಆರು ಜನ ಮುಸ್ಲಿಮರನ್ನು ಬಂಧಿಸಿದ್ದಾರೆ.
Leave A Reply