ಚಾಯ್ ವಾಲಾ ಒಬ್ಬ ಪ್ರಧಾನಿಯೂ ಆಗಬಹುದೆಂದು ತೋರಿಸಿಕೊಟ್ಟ ಮೋದಿಯವರೇ ನನಗೆ ಆದರ್ಶ ಎಂದಿದ್ದು ಯಾರು ಗೊತ್ತೇ?

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಚಹ ಮಾರುತ್ತಿದ್ದ ವ್ಯಕ್ತಿಯೊಬ್ಬ ದೇಶದ ಜನರ ಮನಗೆದ್ದು ಪ್ರಧಾನಿ ಹುದ್ದೆ ಅಲಂಕರಿಸುತ್ತಾರೆ ಎಂಬ ಒಂದೇ ಸಾಲಿನಲ್ಲಿ ಮೋದಿ ಸ್ಫೂರ್ತಿಯ ಚಿಲುಮೆ ಎನಿಸುತ್ತಾರೆ.
ಅಷ್ಟೇ ಅಲ್ಲ, ಮುಖ್ಯಮಂತ್ರಿಯಾದ ಮೂರು ಅವಧಿ ಹಾಗೂ ಪ್ರಧಾನಿಯಾದ ಈ ನಾಲ್ಕು ವರ್ಷದಲ್ಲೇ ಒಂದೇ ಒಂದು ರಜೆ ತೆಗೆದುಕೊಳ್ಳದೆ, ಒಂದು ದಿನವೂ ವಿರಮಿಸದೆ ಇಡೀ ಜೀವನವನ್ನೇ ದೇಶದ ಸೇವೆಗೆ ಮುಡಿಪಿಟ್ಟ ಅವರು ಸಾರ್ವಕಾಲಿಕ ಸ್ಫೂರ್ತಿ ಎಂದರೆ ಪ್ರಾಯಶಃ ಅದು ಅತಿಶಯೋಕ್ತಿಯಾಗಲಾರದು.
ಇಂತಿಪ್ಪ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಆದರ್ಶ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ ಬಾಲಿವುಡ್ ನಟಿಯೊಬ್ಬರು. ಹೌದು, ಚಾಯ್ ವಾಲಾ ಆಗಿದ್ದ ನರೇಂದ್ರ ಮೋದಿ ಪ್ರಧಾನಿ ಹುದ್ದೆ ತಲುಪುವ ಎತ್ತರಕ್ಕೆ ಬೆಳೆಯುತ್ತಾರೆ ಎಂಬುದೇ ನನಗೆ ಸ್ಫೂರ್ತಿ ಹಾಗೂ ಅವರೇ ನನಗೆ ಆದರ್ಶ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ತಿಳಿಸಿದ್ದಾರೆ.
ನ್ಯೂಸ್ 18 ಸುದ್ದಿಸಂಸ್ಥೆ ಆಯೋಜಿಸಿದ್ದ ರೈಸಿಂಗ್ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಂಗನಾ, ನನಗೆ ನಿತ್ಯವೂ ಪತ್ರಿಕೆ ಓದುವ ಹವ್ಯಾಸವಿಲ್ಲ. ಹಾಗಾಗಿ ನನಗೆ ಜಗತ್ತಿನ ಆಗು-ಹೋಗುಗಳ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ಆದರೆ ಮೋದಿ ಅವರ ಕುರಿತು ಬರಹ ಓದಿದ್ದೇನೆ, ತಿಳಿದುಕೊಂಡಿದ್ದಾರೆ. ಹಾಗಾಗಿ ಚಾಯ್ ವಾಲಾ ಟು ಪ್ರಧಾನಿ ಕತೆ ಇಷ್ಟ. ಅವರೇ ನನಗೆ ಆದರ್ಶ, ನಾನು ಮೋದಿ ಅವರ ದೊಡ್ಡ ಅಭಿಯಾನಿ ಎಂದು ಹೇಳಿದ್ದಾರೆ.
ಹೀಗೆ ಕಂಗನಾ ರಣಾವತ್ ಅವರು ನಾನು ಮೋದಿ ಅಭಿಮಾನಿ ಎನ್ನುತ್ತಲೇ ಕಿಕ್ಕಿರಿದು ತುಂಬಿದ್ದ ಜನ ಚಪ್ಪಾಳೆ ತಟ್ಟಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ, ನೋಡಿ ನನ್ನ ಹಾಗೆಯೇ ಇಲ್ಲೂ ಸಾಕಷ್ಟು ಜನ ನರೇಂದ್ರ ಮೋದಿ ಅವರ ಅಭಿಮಾನಿಗಳಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೆ, ನರೇಂದ್ರ ಮೋದಿ ಅವರನ್ನು ತೆಗಳಲೆಂದೇ ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುವವರ ಕುರಿತು ಸಹ ಬಾಲಿವುಡ್ ಬೆಡಗಿ ಪ್ರತಿಕ್ರಿಯಿಸಿದ್ದು, ಇತ್ತೀಚೆಗೆ ದೇಶದ ಕುರಿತು ಕೆಟ್ಟದಾಗಿ ಮಾತನಾಡುವುದೇ ಒಂದು ಟ್ರೆಂಡ್ ಆಗಿದೆ. ಇದು ಯಾಕೆ ಹೀಗೆ ಎಂದು ನನಗೆ ತಿಳಿಯುತ್ತಿಲ್ಲ. ದೇಶದ ಬಗ್ಗೆ ಹೀಗೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ ಎಂದು ಕಂಗನಾ ಪರೋಕ್ಷವಾಗಿ ಮೋದಿ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
Leave A Reply