• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಆಸ್ಪತ್ರೆ ಯಲ್ಲಿ ಕುಡುಕ ಡಾಕ್ಟರ್  ರಂಪಾಟ : ರೋಗಿಗಳು ಕಂಗಾಲ.

TNN Correspondent Posted On July 18, 2017
1


0
Shares
  • Share On Facebook
  • Tweet It

ಪುತ್ತೂರಿನ ಪ್ರಸಿದ್ದ  ಮಾಹಾವೀರ ಆಸ್ಪತ್ರೆ ಯಲ್ಲಿ ಶನಿವಾರ ಸಾಯಂಕಾಲ ಕುಡುಕ ಡಾಕ್ಟರ್ ರೋಗಿಗಳ ಜೊತೆ ರಂಪಾಟ ಮಾಡಿ ಸೂಕ್ತ ಚಿಕಿತ್ಸೆಯೂ ನೀಡದೆ ಇರುವ ಸುದ್ದಿ ವರದಿಯಾಗಿದೆ.

ಘಟನೆಯ ವಿವರ: ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯ ಕೃಷ್ಣ ಎಲೆಕ್ಟ್ರಿಕ್ ಗುತ್ತಿಗೆದಾರ ಅಭಿಲಾಷ್ ಎನ್ನುವವರು ತನ್ನ ತಾಯಿ ತಾಯಿ ಅನಿತಾರವರನು ಕಾಲುನೊವಿನ ಕಾರಣಕ್ಕಾಗಿ ಮಧ್ಯಾಹ್ನ 2.30ಕ್ಕೆ  ಮಹಾವೀರ ಆಸ್ಪತ್ರೆಗೆ ಕರೆಕೊಂಡು ಹೋಗಿದ್ದರು. ಆಸ್ಪತ್ರೆ ಯವರು ಮಧ್ಯಾನ 2:30 ರಿಂದ ಸಾಯಂಕಾಲ 5:30ರ ತನಕ ಕಾಯಿಸಿ ಡಾ.ಪ್ರದೀಪ್ಇ ರುವ ಕಡೆ ಕಳುಹಿಸಿದರು. ಈ ಡಾಕ್ಟರ್  ಕಂಠಪೂರ್ತಿ ಕುಡಿದು ತೂಕಡಿಸುತ್ತಾ  ಬಂದಿರುವುದನ್ನು ಗಮನಿಸಿದ ಅಭಿಲಾಷ್ ಆಶ್ಚರ್ಯ ಗೊಂಡರು. ಅದೇ ಸಮಯದಲ್ಲಿ ಆಸ್ಪತ್ರೆಯ ಡೈರೆಕ್ಟರ್ ನಂಬರ್ ಕೇಳಿದರೆ ಅಲ್ಲಿಯ ದಾದಿಯರು ನಂಬರ್ ಕೊಡಲು ಹಿಂಜರಿದಿದ್ದಾರೆ. ಜನಸಾಮಾನ್ಯರ ಜೀವ ರಕ್ಷಣೆಯನ್ನು ಮಾಡಬೇಕಾದ ಡಾ.ಪದೀಪ್ ವಿವೇಚನೆ ಇಲ್ಲದೆ ಬಾಯಿಗೆ ಬಂದಂತೆ ಮಾತನಾಡಿದ್ದರು. ಆಸ್ಪತ್ರೆಯ ಅವ್ಯವಸ್ಥೆಯನ್ನು ನೋಡಿ ಅಭಿಲಾಷ್ ತನ್ನ ತಾಯಿಯನ್ನು ಮತ್ತೆ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ವಲಯದ ಆಸ್ಪತ್ರೆಗಳು ಹೆಚ್ಚು ಸೇವೆ ನೀಡುವುದನ್ನು ಸುಳ್ಳು ಮಾಡಿದೆ ಈ ಡಾಕ್ಟರ್ ವರ್ತನೆ.

ಜನ ಸಾಮಾನ್ಯರ ಜೀವನದ ಬಗ್ಗೆ ಕಾಳಜಿ ವಹಿಸದ ಮಹಾವೀರ್ ಆಸ್ಪತ್ರೆ ಮತ್ತು ಡಾಕ್ಟರ ವಿರುದ್ಧ ಆರೋಗ್ಯ ಇಲಾಖೆ  ತಕ್ಷಣವೇ ಸೂಕ್ತ ಕ್ರಮಕೈಗೊಳ್ಳಬೇಕು. ಇದ್ದಲ್ಲಿ ಮುಂದೆ ಕಾನೂನು ರೀತಿಯಲ್ಲಿ ಹೋರಾಟ ನಡೆಸಲು ಸಿದ್ದತೆ ಮಾಡಲಾಗುವುದು -ಅಭಿಲಾಷ್ (ಅನಿತಾ ಅವರ ಮಗ)

ನಮ್ಮ ಮಹಾ ವೀರ ಮೆಡಿಕಲ್ ಸೆಂಟರ್ ನಲ್ಲಿ ಡಾ.ಪ್ರದೀಪ್ ಸಲಹೆಗಾರರಾಗಿ ಬರುತ್ತಿದ್ದಾರೆ .ಅವರು ಪುತ್ತೂರಿನ ಪ್ರಸಿದ್ದ ಡಾಕ್ಟರ್ ನಲ್ಲಿ ಒಬ್ಬರು. ಜನ ಅವ್ರನ್ನು ಕೇಳಿಕೊಂಡು ಬರುತ್ತಾರೆ. ಅವರು ನಮ್ಮ ಸಂಸ್ಥೆಯ ಉದ್ಯೋಗಿಯಲ್ಲ. ಕುಡಿದು ಬಂದಿರುವ ವಿಷಯ ನನಗೆ ತಡವಾಗಿ ಗೊತ್ತಿದೆ ಈ ಬಗ್ಗೆ ಗಮನ ಹರಿಸಲಾಗುವುದು.

  -ಡಾ ಅಶೋಕ್ ಪಡಿವಾಳ್ ಮಹಾವೀರ ಮೆಡಿಕಲ್ ಸೆಂಟರ್ ಮುಖ್ಯಸ್ಥರು

ಡಾ.ಪ್ರದೀಪ್ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ತಡ ರಾತ್ರಿ ಕುಡಿದು ಬಂದು ರೋಗಿ ಮೇಲೆ ಕೈ ಮಾಡಿದ್ದರು. ಇದು ಪೊಲೀಸ್ ಇಲಾಖೆಗೂ ಗೊತ್ತಿದೆ. ಆದರೆ ಅದು ಪತ್ರಿಕೆಯಲ್ಲಿ ಬರಲೇ ಇಲ್ಲ. ಜನಸಾಮಾನ್ಯರಿಗೆ ಒಂದು ಕಾನೂನು ಸಿರಿವಂತರಿಗೆ ಇನ್ನೊಂದು ಕಾನೂನು ಆಗಿದೆ.

ಧರ್ಮಪಾಲ ಓರ್ವ ನಾಗರೀಕ.

0
Shares
  • Share On Facebook
  • Tweet It




Trending Now
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
Tulunadu News January 20, 2026
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
Tulunadu News January 19, 2026
1 Comment

Varun
July 18, 2017 at 9.48
Reply

I don’t know how to react, he is good Doctor, he treats his patient in gentle manner, believe me we should be in polite way, no one knows what is going on with him. I believe he has some personal problem.

Abhilash might have went in rude way, I will suspect this.


Leave a Reply Cancel reply

Your email address will not be published. Required fields are marked *

  • Recent Posts

    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
  • Popular Posts

    • 1
      ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • 2
      ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • 3
      ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • 4
      ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..

  • Privacy Policy
  • Contact
© Tulunadu Infomedia.

Press enter/return to begin your search