ಇರುವ ಶಸ್ತ್ರಾಸ್ತ್ರದಲ್ಲೇ ನಮ್ಮ ಸೈನಿಕರು ಸಮರ್ಥವಾಗಿ ಹೋರಾಟಬಲ್ಲರು ಎಂದ ರಾವತ್, ಕೇಂದ್ರ ವಿರೋಧಿಗಳಿಗೆ ಉರಿ
ದೆಹಲಿ: ಇತ್ತೀಚೆಗಷ್ಟೇ ಬಿಪಿನ್ ರಾವತ್ ಕೇಂದ್ರ ಸರ್ಕಾರ ಶಸ್ತ್ರಾಸ್ತ್ರ ಖರೀದಿಗೆ ನೀಡುತ್ತಿರುವ ಹಣ ಸಮರ್ಪಕ ಎನಿಸುತ್ತಿಲ್ಲ ಎಂದು ತುಸು ಅಸಮಾಧಾನ ಹೊರಹಾಕುತ್ತಲೇ, ಕೆಲ ಮೋದಿ ವಿರೋಧಿಗಳು, ಎಡಬಿಡಂಗಿಗಳು, ಸ್ವಯಂಘೋಷಿತ ಬುದ್ಧಿಜೀವಿಗಳು ಕೇಂದ್ರ ಸರ್ಕಾರವನ್ನು ತೆಗಳಿದ್ದರು. ಕೇಂದ್ರ ಸರ್ಕಾರ ಸುಮ್ಮನೆ ದೇಶಪ್ರೇಮ, ಸೈನಿಕರ ಗುಣಗಾನ ಮಾಡುತ್ತದೆ. ಆದರೆ ಅವರಿಗೆ ಸರಿಯಾದ ಶಸ್ತ್ರಾಸ್ತ್ರ ನೀಡಿಲ್ಲ ಎಂದು ಬೊಬ್ಬೆ ಹಾಕಿದರು.
ಇದಾದ ಬಳಿಕ ಎಚ್ಚೆತ್ತುಕೊಂಡ ಸಂಸದೀಯ ಸಮಿತಿ, ಶಸ್ತ್ರಾಸ್ತ್ರ ಖರೀದಿಗಾಗಿ ವರದಿಯೊಂದನ್ನು ಸಂಸತ್ತಿಗೆ ನೀಡಿದೆ. ಆದಾಗಲೇ ಶಸ್ತ್ರಾಸ್ತ್ರ ಸಂಗ್ರಹಣೆಗೆ ಏನೇನು ತಯಾರಿ ಬೇಕೋ, ಅದೆಲ್ಲವನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ.
ಇದರಿಂದ ಸಮಾಧಾನಗೊಂಡ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭಾರತೀಯ ಸೈನ್ಯದಲ್ಲಿರುವ ಶಸ್ತ್ರಾಸ್ತ್ರಗಳು ಹಳೆಯದಾಗಿವೆ ನಿಜ. ಈಗ ಅವುಗಳ ಸಂಗ್ರಹಣೆ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ. ಆದರೂ, ಪರಿಸ್ಥಿತಿ ಹೇಗೆಯೇ ಇದ್ದರು. ಎಂತಹ ವಿಷಮ ಪರಿಸ್ಥಿತಿಯೇ ಎದುರಾದರೂ, ಇರುವ ಶಸ್ತ್ರಾಸ್ತ್ರಗಳನ್ನೇ ಬಳಸಿಕೊಂಡು ಹೇಗೆ ಹೋರಾಡಬೇಕು ಎಂಬುದು ಭಾರತೀಯ ಸೈನಿಕರಿಗೆ ಗೊತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಸೈನ್ಯಕ್ಕೆ ಕೇಂದ್ರ ಸರ್ಕಾರ ನೀಡುವ ಎಲ್ಲ ಹಣವೂ ಸೈನಿಕರ ನಿರ್ಹವಣೆಗೆ ಮಾತ್ರ ಖರ್ಚಾಗುತ್ತದೆ ಎಂಬ ಮಾತು ಸುಳ್ಳು. ಸೈನ್ಯಕ್ಕೆ ವಿನಿಯೋಗಿಸುವ ಹಣದಲ್ಲಿ ಶೇ.35ರಷ್ಟನ್ನು ಶಸ್ತ್ರಾಸ್ತ್ರ ಖರೀದಿಗೆ ನೀಡಲಾಗುತ್ತದೆ. ನಮ್ಮ ಸೈನ್ಯ ಎಂದಿಗೂ ಸಮರ್ಥವಾಗಿದ್ದು, ಯಾವುದೇ ವಿಷಮ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ ಎಂದು ತಿಳಿಸಿದ್ದಾರೆ.
ಬಿಪಿನ್ ರಾವತ್ ಅವರ ಈ ಹೇಳಿಕೆಯಿಂದ, ಸಣ್ಣ ಲೋಪವನ್ನೇ ದೊಡ್ಡದು ಮಾಡಿ, ಕೇಂದ್ರ ಸರ್ಕಾರವನ್ನು ತೆಗಳಿದ್ದ ಕೆಲ ಅತೃಪ್ತ ಮನಸ್ಸುಗಳಿಗೆ ಉರಿ ಆರಂಭವಾಗಿದ್ದು ಮಾತ್ರ ಸುಳ್ಳಲ್ಲ.
Leave A Reply