ಪ್ರತಿಭಟನೆ ಮಾಡುತ್ತಿದ್ದ ರೈತರ ಗುಡಿಸಲಿಗೇ ಬೆಂಕಿ, ರೈತರ ಗೋಳು ಕೇಳಲ್ಲವೇ ಅರವಿಂದ್ ಕೇಜ್ರಿವಾಲ್?
ದೆಹಲಿ: ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ಸಾವಿರಾರು ರೈತರು ಪ್ರತಿಭಟನೆ ಮಾಡಿದ್ದು ದೇಶಾದ್ಯಂತ ಸುದ್ದಿಯಾಯಿತು. ಅಲ್ಲಿನ ಸರ್ಕಾರದ ವಿರುದ್ಧ ಎಲ್ಲರೂ ಬಾಯಿಗೆ ಬಂದಹಾಗೆ ಮಾತನಾಡಿದರು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಆರು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಬಗೆಹರಿಸಿತು.
ಆದರೆ, ಇದೇ ಬೇರೆ ರಾಜ್ಯಗಳಲ್ಲಿ, ಅದರಲ್ಲೂ ಬಿಜೆಪಿಯೇತರ ಸರ್ಕಾರಗಳಲ್ಲಿ ರೈತರನ್ನು ಕೆಟ್ಟದಾಗಿ ನಡೆಸಿಕೊಂಡರೂ ಯಾರೂ ಸುದ್ದಿ ಮಾಡುತ್ತಿಲ್ಲ. ಕೆಲವು ದಿನಗಳ ಹಿಂದೆ ಕೇರಳದಲ್ಲಿ ಗುಡಿಸಲು ಹಾಕಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ರೈತರ ಗುಡಿಸಲು ಸುಟ್ಟು ಹಾಕಿದ್ದು ಸಹ ಸುದ್ದಿಯಾಗಲಿಲ್ಲ. ಯಾವ ಮಾಧ್ಯಮಗಳು, ಬುದ್ಧಿಜೀವಿಗಳು, ಪ್ರಗತಿಪರರು ಇದರ ಕುರಿತು ಮಾತನಾಡಲಿಲ್ಲ.
ಈಗ ಇಂಥಾದ್ದೇ ಘಟನೆ ದೆಹಲಿಯಲ್ಲಿ ನಡೆದಿದೆ. ಹೌದು, ದೆಹಲಿಯ ಯಮುನಾ ಖಾದರ್ ನಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದ ರೈತರ ಭೂಮಿ ವಶಪಡಿಸಿಕೊಳ್ಳಲು ದೆಹಲಿ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಇದರ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದಾರೆ.
ಆದರೆ, ಈಗ ರೈತರ ನೂರಕ್ಕೂ ಅಧಿಕ ಗುಡಿಸಲುಗಳನ್ನು ಸುಟ್ಟುಹಾಕಿದ್ದು, ದೆಹಲಿ ಅಭಿವೃದ್ಧಿ ಪ್ರಾಧಿಕಾರದವರೇ ಗುಡಿಸಲು ಸುಟ್ಟುಹಾಕಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ. ದಶಕದಿಂದ ನಾವು ಇದೇ ಗುಡಿಸಲಿನಲ್ಲಿ ಬದುಕುತ್ತಿದ್ದು, ಈಗ ಲಾಭಕ್ಕೋಸ್ಕರ ದೆಹಲಿ ಅಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಳ್ಳಲು ಮುಂದಾಗಿದೆ. ಇದರ ವಿರುದ್ಧ ನಾವು ಪ್ರತಿಭಟನೆ ನಡೆಸಿದ್ದು, ಕೆರಳಿ ಗುಡಿಸಲು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಹೀಗೆ ರೈತರ ಗುಡಿಸಲು ಸುಟ್ಟು ಹಾಕಿದ್ದರೂ, ರೈತರ ಪರವಾಗಿ ಭಾರಿ ಭಾಷಣ ಬಿಗಿಯುವ ಅರವಿಂದ ಕೇಜ್ರಿವಾಲ್, ರೈತರಪರ ಎನ್ನುವ ಸಿದ್ದರಾಮಯ್ಯನವರು, ಬುದ್ಧಿಜೀವಿಗಳು, ಪ್ರಕಾಶ್ ರೈಗಳು ಯಾಕೆ ಇದರ ಕುರಿತು ಮಾತನಾಡುವುದಿಲ್ಲ? ಏಕೆ ಪ್ರಶ್ನಿಸುವುದಿಲ್ಲ?
Leave A Reply