• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಚುನಾವಣೆ ಹತ್ರ ಬಂತು, ಮದನ್ ಅವರ ನಿಜವಾದ “ಸ್ವಚ್ಛತೆ”ಯ ಕಾಳಜಿಯೂ ಹೊರ ಬಂತು

Tulunadu News Posted On March 19, 2018
0


0
Shares
  • Share On Facebook
  • Tweet It

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಧಾನಿ ಆದ ಕೂಡಲೇ ಮೊದಲು ಕಂಡ ಕನಸೇ ಭಾರತವನ್ನು ಸ್ವಚ್ಚ ಭಾರತ್ ಆಗಿ ಮಾಡುವುದು. ಅದಕ್ಕೆ ಅವರು ಕರೆ ಕೊಟ್ಟ ಬಳಿಕ ನೂರು ಶೇಕಡಾ ಅಲ್ಲವಾದರೂ ಆರವತ್ತು ಶೇಕಡಾ ಭಾರತೀಯರು ಈ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡರು ಎಂದೇ ಹೇಳಬಹುದು. ಕೆಲವರು ವರ್ಷಕ್ಕೆ ಒಂದು ದಿನ ತಮ್ಮ ಏರಿಯಾದಲ್ಲಿ ಸ್ವಚ್ಚತೆಯನ್ನು ಕೈಗೊಂಡರೆ ಕೆಲವರು ತಿಂಗಳಿಗೆ ಒಮ್ಮೆ ಸ್ವಚ್ಚತಾ ಕಾರ್ಯದಲ್ಲಿ ಗುರುತಿಸಿಕೊಂಡರು. ಇನ್ನು ಕೆಲವರು ಹದಿನೈದು ದಿನಕ್ಕೊಮ್ಮೆ, ಮತ್ತೆ ಕೆಲವರು ವಾರಕ್ಕೆ ಒಮ್ಮೆ ಸ್ವಚ್ಚತೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡರು. ಕೆಲವು ಸಂಘಟನೆಗಳು ಸ್ವಚ್ಚತೆಯನ್ನೇ ಗುರಿಯನ್ನಾಗಿಸಿಕೊಂಡವು. ಇನ್ನೊಂದು ಕಡೆ ಮಂಗಳೂರು ಮಹಾನಗರ ಪಾಲಿಕೆ ತಿಂಗಳಿಗೆ ಸುಮಾರು ಒಂದೂ ಕಾಲು ಕೋಟಿ ಖರ್ಚು ಮಾಡಿ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿಗೆ ಮಂಗಳೂರಿನ ಸ್ವಚ್ಚತೆಯ ಗುತ್ತಿಗೆ ಕೊಟ್ಟಿದೆ. ಇಷ್ಟು ವಿಷಯಗಳನ್ನು ಯಾಕೆ ಹೇಳಬೇಕಾಯಿತು ಎಂದರೆ ಕೆಲವು ಸಂಘಟನೆಗಳು ಏನೂ ಸ್ವಾರ್ಥವಿಲ್ಲದೆ ಮಂಗಳೂರಿನ ಸ್ವಚ್ಚತೆಗೆ ಕಂಕಣಬದ್ಧವಾಗಿವೆ. ಸರಕಾರ ನಮ್ಮ ತೆರಿಗೆಯ ಹಣ ಕೋಟಿಗಟ್ಟಲೆ ಖರ್ಚು ಮಾಡಿ ಸ್ವಚ್ಚತೆಗೆ ಹಾಕುತ್ತಿದೆ. ಇದೆಲ್ಲ ಯಾಕೆ? ಮಂಗಳೂರು ಸುಂದರವಾಗಿ ಕಾಣಬೇಕು ಎನ್ನುವುದಕ್ಕೆ ತಾನೇ? ಎಷ್ಟೋ ಮಂದಿ ಇಲ್ಲಿಯ ತನಕ ಒಂದೇ ಒಂದು ಸ್ವಚ್ಚತೆಯ ಕಾರ್ಯಕ್ರಮದಲ್ಲಿ ಭಾಗವಹಿಸದಿದ್ದರೂ ಅವರಿಗೂ ಮಂಗಳೂರು ಸುಂದರವಾಗಿ ಕಾಣಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಆದರೆ ರಾಜಕೀಯ ಸೇರಿ ಶಾಸಕನಾಗುವ ಆಸೆಯಲ್ಲಿ ಕೆಲವರು ಅದರಲ್ಲಿಯೂ ಮುಖ್ಯವಾಗಿ ಇಬ್ಬರು-ಮೂವರು ತಮ್ಮ ಫೋಟೋ ಹಾಕಿ ಅದೇನೋ ಬರೆದು ಮಂಗಳೂರಿನ ಗೋಡೆಗಳಿಂದ ಹಿಡಿದು, ಲೈಟು ಕಂಬಗಳನ್ನು ಸೇರಿಸಿ ಎಲ್ಲ ಕಡೆ ಪೋಸ್ಟರ್ ಹಚ್ಚುತ್ತಿದ್ದಾರೆ. 

ಮದನ್ ಯಾಕ್ರೀ ಇದೆಲ್ಲ…

ಇದನ್ನು ಮೊದಲು ಪ್ರಾರಂಭಿಸಿದವರು ಮದನ್. ಮದನ್ ಪೊಲೀಸ್ ಇಲಾಖೆಯಲ್ಲಿ ಇದ್ದವರು. ಸಹಜವಾಗಿ ಒಂದಿಷ್ಟು ವಿದ್ಯೆ, ಜ್ಞಾನ ಇರಬಹುದು. ಮಂಗಳೂರು ಸುಂದರವಾಗಿ ಕಾಣಬೇಕು ಎನ್ನುವ ಆಸೆ ಇರಬಹುದು. ಆದರೆ ಮಂಗಳೂರಿನಲ್ಲಿ ಚುನಾವಣೆಗೆ ನಿಲ್ಲಬೇಕೆಂದು ಅವರಿಗೆ ಅನಿಸಿದ ಬಳಿಕ ಅವರಿಗೆ ಮಂಗಳೂರಿನ ಸೌಂದರ್ಯಕ್ಕಿಂತ ತನ್ನ ಶ್ರೇಯೋಭಿವೃದ್ಧಿಯೇ ಮುಖ್ಯವಾಗಿವೆ. ಎಲ್ಲಿಯ ತನಕ ಎಂದರೆ ಶುಭ್ರವಾಗಿದ್ದ ನಮ್ಮ ಊರಿನ ಗೋಡೆಗಳಲ್ಲಿ ಪೋಸ್ಟರ್ ಅಂಟಿಸಿ ಅದನ್ನು ಹಾಳು ಮಾಡಿದ ಶ್ರೇಯಸ್ಸು ಮೊದಲು ಸಲ್ಲಬೇಕಾದ್ದು ಅವರಿಗೆ. 

ಜನ ಈಗ ಕೇಳುತ್ತಿರುವುದು ಏನೆಂದರೆ ಆದಿತ್ಯವಾರಗಳ ಬೆಳಿಗ್ಗಿನ ಜಾವ ಮದನ್ ನೀಲಿ ಟಿ-ಶರ್ಟ್ ಹಾಕಿಕೊಂಡು ಮಂಗಳೂರಿನ ಸಂಘಟನೆಯೊಂದರ ಅಡಿಯಲ್ಲಿ ಪೊರಕೆ ಹಿಡಿದು ಫೋಸ್ ಕೊಡುತ್ತಿದ್ದದ್ದು ಪಬ್ಲಿಸಿಟಿಗಾ? ಆ ಸಂಘಟನೆಯಲ್ಲಿ ಇವತ್ತಿಗೂ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಅನೇಕ ಯುವಕರಿಗೆ ಇರುವ ಬೇಸರವೆಂದರೆ ನಮ್ಮ ಸಂಘಟನೆಯ ಹೆಸರನ್ನು ಮದನ್ ದುರುಪಯೋಗಪಡಿಸಿಕೊಂಡ ಎನ್ನುವುದು. ಒಂದಿಬ್ಬರು ಅದನ್ನು ತಮ್ಮ ಆತ್ಮೀಯರಲ್ಲಿ ಹೇಳಿಕೊಂಡಿದ್ದಾರೆ. ಒಬ್ಬರು ಅದನ್ನು ಫೋಟೋ ಸಹಿತ ತಮ್ಮ ಸಾಮಾಜಿಕ ತಾಣಗಳಲ್ಲಿ ಹಾಕಿದ್ದಾರೆ. ಹಾಗಾದರೆ ಮದನ್ ಅವರನ್ನು ಆ ಸಂಘಟನೆಯವರು ತಮ್ಮ ಒಳಗೆ ಬಿಟ್ಟುಕೊಟ್ಟಿದ್ದೇ ತಪ್ಪಾಯಿತಾ? ಇನ್ನು ಯಾರಾದರೂ ನಮ್ಮ ಸಂಘಟನೆಯಲ್ಲಿ ಬಂದು ಪೊರಕೆ ಹಿಡಿದು ಫೋಟೋ ತೆಗೆದರೆ ನಾವು ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಅಲ್ಲಿನವರು ಹೇಳುತ್ತಿದ್ದಾರೆಂದರೆ ಮದನ್ ತನ್ನನ್ನು ಬೆಳೆಸಿದ ಸಂಘಟನೆಗೆ ಎಂತಹ ದ್ರೋಹ ಮಾಡಿರಬಹುದು ಎಂದು ನೀವೆ ಯೋಚಿಸಿ. ತನಗೆ ಹೆಸರು, ಇಮೇಜ್ ಕೊಟ್ಟ ಸಂಘಟನೆಯ ಉದ್ದೇಶವನ್ನೇ ಅಪಹಾಸ್ಯ ಮಾಡುವ ರೀತಿಯಲ್ಲಿ ಮದನ್ ಮಂಗಳೂರು ನಗರದ ಸೌಂದರ್ಯಕ್ಕೆ ಕಪ್ಪುಚುಕ್ಕೆ ಇಡುವವರಂತೆ ವರ್ತಿಸುತ್ತಿದ್ದಾರೆ. ಉಂಡ ಮನೆಯಲ್ಲಿಯೇ ಗಲೀಜು ಮಾಡುವುದಂದರೆ ಇದು. ಗೋಡೆಗಳು ಚೆಂದ ಕಾಣಬೇಕು ಎಂದು ಹಗಲಿರುಳು ಶ್ರಮಿಸುವವರ ನಡುವೆ ಇಂತಹ ಗಿಮಿಕ್ಸ್ ವೀರರು ಸೇರಿಕೊಂಡರೆ ಸಂಘಟನೆಗೆ ಕೆಟ್ಟ ಹೆಸರು. ಅದರೊಂದಿಗೆ ಮದನ್ ನಂತವರು ಮಾತನಾಡಿದರೆ ಸ್ವಾಮಿ ವಿವೇಕಾನಂದರ ಹೆಸರು ಹೇಳಿ ಅವರೇ ಆದರ್ಶ ಎನ್ನುತ್ತಾರೆ. ಹಾಗಾದರೆ ಸ್ವಾಮಿ ವಿವೇಕಾನಂದರು “ನಿಮ್ಮ ಸ್ವಾರ್ಥಕ್ಕಾಗಿ ಊರಿನ ಸೌಂದರ್ಯ ಹಾಳಾದರೂ ಪರವಾಗಿಲ್ಲ” ಎಂದಿದ್ದರಾ? ಮದನ್ ಇವತ್ತಿಗೂ ಸಾಮಾಜಿಕ ತಾಣಗಳಲ್ಲಿ ಆಗಾಗ ಸ್ವಚ್ಚತೆ, ಊರಿನ ಸೌಂದರ್ಯಕ್ಕಾಗಿ ಒಟ್ಟಾಗಲು ಕರೆ ಕೊಡುತ್ತಿರುತ್ತಾರೆ. ಅದೇ ಯುವಕರನ್ನು ಬಳಸಿ ತಮ್ಮ ಪೋಸ್ಟರ್ ಅನ್ನು ಗೋಡೆಗಳಲ್ಲಿ ಅಂಟಿಸಿ ವಿಕೃತ ಖುಷಿ ಪಡುತ್ತಾರೆ. ಅವರಿಗೆ ಮಂಗಳೂರಿನ ಗೋಡೆಗಳು ತಮ್ಮ ಸ್ವಾರ್ಥ ಸಾಧನೆ ಮಾಡಲು ಇರುವಂತಹ ವ್ಯವಸ್ಥೆ ಅನಿಸಬಹುದು. ಆದರೆ ಮಂಗಳೂರಿನ ಜನ ಇದನ್ನು ಸಹಿಸುವುದಿಲ್ಲ. ಒಂದು ವೇಳೆ ಇವರಿಗೆ ತಮ್ಮ ತೆವಲನ್ನು ತೀರಿಸಬೇಕಾದರೆ ಅವರ ಮಡಿಕೇರಿಯಲ್ಲಿಯೇ ಹೋಗಿ ಮಾಡಲಿ.
ಚುನಾವಣೆಗಳು ಗೋಡೆಗಳು ಹಾಳು ಮಾಡುವುದಕ್ಕಾ…

ಮದನ್ ಮಂಗಳೂರು ನಗರ ದಕ್ಷಿಣದಲ್ಲಿ ಚುನಾವಣೆಗೆ ನಿಲ್ಲುವುದಕ್ಕೆ ಪ್ರಜಾಪ್ರಭುತ್ವದಲ್ಲಿ ಆಕ್ಷೇಪ ಇಲ್ಲ. ಅವರು ಗೆಲ್ಲುತ್ತಾರೋ, ಠೇವಣಿ ಕೂಡ ಉಳಿಯುವುದಿಲ್ಲವೋ ಅದು ಅವರ ಹಿಂಬಾಲಕರ ಟೆನ್ಷನ್. ಆದರೆ ಮಂಗಳೂರಿನ ಗೋಡೆಗಳು, ಲೈಟ್ ಕಂಬಗಳು ಮದನ್ ಅವರದ್ದಾಗಲೀ, ಅವರ ಬಾಲಗೋಂಚಿಗಳದ್ದಾಗಲಿ ಸ್ವತ್ತಲ್ಲ. ಅದು ನಮ್ಮ ಸಾರ್ವಜನಿಕರ ಆಸ್ತಿ. ಇನ್ನು ಮೊಯ್ದೀನ್ ಬಾವ ಅವರು ಹೇಳುವ ಹಾಗೆ “ನನಗೆ ಗೊತ್ತೆ ಇರಲಿಲ್ಲ, ನನ್ನ ಅಭಿಮಾನಿಗಳೊ, ವಿರೋಧಿಗಳೋ ಮಾಡಿದ್ದಾರೆ” ಎನ್ನುವ ಡೈಲಾಗ್ ಅನ್ನು ಮದನ್ ಅವರು ಉದುರಿಸುವುದು ಬೇಡಾ. ಯಾಕೆಂದರೆ ಅದನ್ನು ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಇದು ಬುದ್ಧಿವಂತರ ಜಿಲ್ಲೆ. 

ಇದೇ ಮಾತುಗಳು ಎಡಪಕ್ಷಗಳ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ಅವರಿಗೂ ಅನ್ವಯಿಸುತ್ತವೆ. ನಿಮ್ಮ ಸುಂದರ ಮುಖವನ್ನು ಪತ್ರಿಕೆಗಳಲ್ಲಿ, ಟಿವಿ, ಫ್ಲೆಕ್ಸ್ ಗಳಲ್ಲಿ ನೋಡಿದ್ದೇವೆ. ಈಗ ಪೋಸ್ಟರ್ ಅಂಟಿಸುವ ಮೂಲಕ ಗೋಡೆಗಳಲ್ಲಿ ತೋರಿಸಲು ಹೋಗಬೇಡಿ. ಮದನ್ ಆದರೆ ಬೇರೆ ಊರಿನವರು. ಇಲ್ಲಿ ಚುನಾವಣೆಯಲ್ಲಿ ಸೋತ ಕೂಡಲೇ ಮಡಿಕೇರಿಗೆ ಹೋದರೂ ಹೋಗಬಹುದು. ಆದರೆ ನೀವು ಇಲ್ಲಿನವರು. ನೀವು ಗೆದ್ದರೆ ಅದು ಚರಿತ್ರೆ ಆಗುತ್ತದೆ. ಸೋತರೆ ನಮ್ಮ ಗೋಡೆಗಳು ಇತಿಹಾಸ ಅಳಿಯುವ ತನಕ ನಿಮ್ಮ ಫೋಟೋಗಳನ್ನು ಹೊದ್ದುಕೊಂಡೆ ನಿಲ್ಲಬೇಕಾಗುತ್ತದೆ. ಇನ್ನು ಧರ್ಮೆಂದ್ರ ಎನ್ನುವವರು ಕೂಡ ಇದೇ ರೀತಿ ಪೋಸ್ಟರ್ ಗಳನ್ನು ಗೋಡೆಗೆ, ಅಲ್ಲಿ ಇಲ್ಲಿ ಅಂಟಿಸುತ್ತಿರುವುದನ್ನು ಕೇಳಿದ್ದೇನೆ. ಎಲ್ಲರಿಗೂ ನಾನು ಕೇಳುವುದು ಇಷ್ಟೇ. ನಮ್ಮ ಗೋಡೆಗಳು ನಿಮ್ಮ ವೈಯಕ್ತಿಕ ಉದ್ದೇಶಕ್ಕೆ ಇರುವುದಲ್ಲ. ಅಲ್ಲಿ ಸಿನೆಮಾ ಪೋಸ್ಟರ್ ಗಳನ್ನು ಅಂಟಿಸಲು ಬಿಡದೇ ನಾವು ಸೌಂದರ್ಯ ಕಾಪಾಡಿ ಬಂದಿದ್ದೇವೆ. ಇವತ್ತು ಬಂದು ನಾಳೆ ಹೋಗುವ ಚುನಾವಣೆಗೆ ಅವು ನಿಮ್ಮಿಂದ ಹಾಳಾಗುವುದನ್ನು ನಾವು ಸಹಿಸುವುದಿಲ್ಲ! 

0
Shares
  • Share On Facebook
  • Tweet It




Trending Now
20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
Tulunadu News July 5, 2025
20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
Tulunadu News July 5, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
  • Popular Posts

    • 1
      20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 2
      20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • 3
      ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • 4
      ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • 5
      ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು

  • Privacy Policy
  • Contact
© Tulunadu Infomedia.

Press enter/return to begin your search