ಕೇಂದ್ರ ಸಚಿವ ಗಡ್ಕರಿ ವಿರುದ್ಧ ಹುರುಳಿಲ್ಲದೇ ಆರೋಪ ಮಾಡಿ, ಕ್ಷಮೆ ಯಾಚಿಸಿದ ಕೇಜ್ರಿವಾಲ್
ದೆಹಲಿ: ತಮ್ಮ ಎಡಬಿಡಂಗಿ ನಿರ್ಧಾರಗಳ ಮೂಲಕ ಸದಾ ನಗೆಪಾಟಲಿಗೀಡಾಗುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ಮುಖಭಂಗಕ್ಕೆ ಒಳಗಾಗಿದ್ದಾರೆ. ಕೇಂದ್ರ ಸಾರಿಗೆ ಮತ್ತು ಬಂದರು ಸಚಿವ ನಿತಿನ್ ಗಡ್ಕರಿ ಅವರು ಭಾರತದ ಬಹುದೊಡ್ಡ ಭ್ರಷ್ಟ ರಾಜಕಾರಣಿ’ ಎಂದು ನಾಲಿಗೆ ಹರಿ ಬಿಟ್ಟಿದ್ದ ಅರವಿಂದ ಕೇಜ್ರಿವಾಲ್ ಇದೀಗ ತಪ್ಪಾಯ್ತು ಕ್ಷಮಿಸಿ ಎಂದು ಗೋಳಿಡುತ್ತಿದ್ದಾರೆ.
ಸಮರ್ಪಕವಾಗಿ ಪರಿಶೀಲಿಸದೆ ಕೇಂದ್ರ ಸಾರಿಗೆ ಸಚಿವ ಮತ್ತು ಬಂದರು ಸಚಿವ ನಿತಿನ್ ಗಡ್ಕರಿ ಅವರ ವಿರುದ್ಧ ಆರೋಪ ಮಾಡಿದ್ದಕ್ಕೆ ವಿಷಾಧ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.
ನಿಮ್ಮ ಮೇಲೆ ನನಗೆ ವೈಯಕ್ತಿಕ ದ್ವೇಷವಿಲ್ಲ. ಆರೋಪ ಮಾಡಿದಕ್ಕೆ ವಿಷಾಧವಿದೆ. ಹಿಂದಿನ ಘಟನೆ ಮರೆತು ನ್ಯಾಯಾಲಯದ ಎಲ್ಲ ಪ್ರಕ್ರಿಯೆಗಳನ್ನು ಮುಗಿಸೋಣ’ ಎಂದು ಕೇಂದ್ರ ಸಚಿವ ಗಡ್ಕರಿಗೆ ಕೇಜ್ರಿವಾಲ್ ಪತ್ರ ಬರೆದಿದ್ದಾರೆ. ಗಡ್ಕರಿ ಅವರು ಕೇಜ್ರಿವಾಲ್ ವಿರುದ್ಧ ದಾಖಲಿಸಿರುವ ಮಾನಹಾನಿ ಪ್ರಕರಣವನ್ನು ಇಬ್ಬರು ಜತೆಗೂಡಿ ಹಿಂತೆಗೆದುಕೊಳ್ಳುವ ಬಗ್ಗೆ ದೆಹಲಿಯ ಪಟಿಯಾಲ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
Leave A Reply