ಆನೇಕಲ್ ನಲ್ಲಿ ಬಿಜೆಪಿ ಮುಖಂಡನ ಹತ್ಯೆಗೆ ಯತ್ನ, ಎತ್ತ ಸಾಗುತ್ತಿದೆ ಕರ್ನಾಟಕ
ಆನೇಕಲ್ : ರಾಜಕೀಯ ದ್ವೇಷಕ್ಕೆ ಕೊಲೆ, ಹತ್ಯೆಗಳಾಗುವುದು ಶಾಂತಿಧೂತರ ರಾಜ್ಯ ಕರ್ನಾಟಕದಲ್ಲಿ ನಡೆಯುವುದೇ ಇಲ್ಲ ಎಂಬಂಥ ಸ್ಥಿತಿ ಇತ್ತು. ಆದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೇರಿದ ನಂತರ ರಾಜಕೀಯ ದ್ವೇಷಕ್ಕೆ ಕೊಲೆ, ಸುಲಿಗೆ, ಹತ್ಯೆ, ಬೆದರಿಸುವ ಕಾರ್ಯಗಳು ಹೆಚ್ಚಳವಾಗಿದೆ. ಬಿಜೆಪಿ ಮತ್ತು ಹಿಂದೂಪರ ಕಾರ್ಯಕರ್ತರ ಹತ್ಯೆಗಳು ಕಳೆದ ಐದು ವರ್ಷದಲ್ಲಿ ಅತಿ ಹೆಚ್ಚು ನಡೆದಿವೆ. ಇದೀಗ ಮತ್ತೊಂದು ಘಟನೆ ಆನೇಕಲ್ ನಲ್ಲಿ ನಡೆದಿದೆ.
ಆನೇಕಲ್ ತಾಲೂಕಿನಲ್ಲಿ ಬಿಜೆಪಿ ಮುಖಂಡನ ಹತ್ಯೆಗೆ ದುಷ್ಕರ್ಮಿಗಳು ಯತ್ನಿಸಿದ್ದಾರೆ. ಆನೇಕಲ್ ತಾಲೂಕಿನ ಚಂದಾಪುರ ಕೆರೆ ಏರಿ ಮೇಲೆ ಬಿಜೆಪಿ ಮುಖಂಡನ ಮೇಲೆ ಹತ್ಯೆಗೆ ಯತ್ನ ನಡೆಸಲಾಗಿದೆ. ಬಿಜೆಪಿ ಮುಖಂಡ ಮಂಜುನಾಥ ರೆಡ್ಡಿ ಹಲ್ಲೆಗೆ ಒಳಗಾದವರು. ದುಷ್ಕರ್ಮಿಗಳು ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ. ಮಂಜುನಾಥ ರೆಡ್ಡಿ ಕಳೆದ ರಾತ್ರಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿದೆ. ಅದೃಷ್ಟವಶಾತ್ ಮಂಜುನಾಥ ರೆಡ್ಡಿ ಅವರಿಗೆ ಯಾವುದೇ ಹಾನಿಯಾಗಿಲ್ಲ.
ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆದಿರುವ ಕುರಿತು ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್’ಪಿ ಭೀಮಾಶಂಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯರ್ತನನ್ನು ಬ್ಯಾನರ್ ಕಟ್ಟುವ ವೇಳೆಯಲ್ಲೇ ಹಲ್ಲೆ ಮಾಡಲಾಗಿತ್ತು. ಇದೀಗ ಅಂತಹುದ್ದೇ ಘಟನೆ ಮರುಕಳಿಸಿದೆ. ಬಿಜೆಪಿ ಕಾರ್ಯಕರ್ತರು ಆತಂಕದಲ್ಲಿ ತಿರುಗಾಡುವಂತ ಸ್ಥಿತಿ ನಿರ್ಮಾಣವಾಗಿದೆ.
Leave A Reply