ಶ್ರೀರಾಮಮಂದಿರ ನಿರ್ಮಾಣ ಇಚ್ಛೆಯಲ್ಲ, ಸಂಕಲ್ಪ: ಮೋಹನ್ ಭಾಗವತ್ ಜೀ
ಛತರಪುರ:ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಕೇವಲ ಹಿಂದೂಗಳ ಇಚ್ಛೆಯಲ್ಲ ಅದು ನಮ್ಮೆಲ್ಲರ ಸಂಕಲ್ಪ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಜೀ ಹೇಳಿದರು.
ದೇಶದಲ್ಲಿ ರಾಮಮಂದಿರ ನಿರ್ಮಾಣ ಕುರಿತು ತೀವ್ರ ಚರ್ಚೆಯಲ್ಲಿರುವಾಗಲೇ ಮೋಹನ್ ಭಾಗವತ್ ಜೀ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅತ್ತ ಮಾತುಕತೆಗೆ ಕೆಲವು ಮುಸ್ಲಿಂ ಸಂಘಟನೆಗಳು ಒಪ್ಪಿಗೆ ನೀಡುತ್ತಿದ್ದರೇ, ಇತ್ತ ಕೇಂದ್ರ ಸರ್ಕಾರವೂ ರಾಮ ಮಂದಿರ ನಿರ್ಮಾಣದತ್ತ ತೀವ್ರ ಒಲವು ತೋರಿಸುತ್ತಿದೆ. ನ್ಯಾಯಾಲಯದಲ್ಲೂ ರಾಮಮಂದಿರ ವಿವಾದದ ತನಿಖೆಗೆ ವೇಗ ಪಡೆದುಕೊಂಡಿದೆ. ಇದೆಲ್ಲದರ ಮಧ್ಯೆ ಬಿಜೆಪಿಯ ಹೈಕಮಾಂಡ್ ಮತ್ತು ಕೊಟ್ಯಂತರ ಹಿಂದೂಗಳ ಅಸ್ಥಿತ್ವದ ಬಿಂದುವಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಮಮಂದಿರ ವಿಷಯದಲ್ಲಿ ತೀವ್ರ ಕಾಳಜಿ ವಹಿಸಿದ್ದು, ಗಮನ ಸೆಳೆಯುತ್ತಿದೆ.
ಮಧ್ಯಪ್ರದೇಶದ ಛತರಪುರ ಬಳಿ ಮಹಾರಾಜ ಛತ್ರಸಾಲ ಅವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಮಾಡಲು ನಾವೆಲ್ಲರು ಸಂಕಲ್ಪ ತೊಡಬೇಕು. ಶ್ರೀರಾಮನ ಮಂದಿರ ನಿರ್ಮಾಣ ಮಾಡಬೇಕು ಎನ್ನುವ ಎಲ್ಲರೂ ಶ್ರೀರಾಮನ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭವಿಷ್ಯದಲ್ಲಿ ರಾಮಮಂದಿರ ನಿರ್ಮಾಣದ ವಾತಾವರಣ ಸೃಷ್ಟಿಯಾಗುತ್ತಿದೆ. ಆದ್ದರಿಂದ ಎಲ್ಲರೂ ರಾಮನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
Leave A Reply