ಉಗ್ರನಾಗಲು ನಿರಾಕರಿಸಿದ ಯುವಕನ್ನನ್ನು ಬಡಿದು ಕೊಂದ ಕೊಳಕರು
ಶ್ರೀನಗರ: ಕೇಂದ್ರ ಸರ್ಕಾರದ ಕಟು ನಿರ್ಧಾರಗಳಿಂದ ಕಾಶ್ಮೀರದಲ್ಲಿ ಕಂಗಾಲಾಗಿರುವ ಭಯೋತ್ಪಾದಕರು ಯುವಕರನ್ನು ಸೆಳೆಯುವಲ್ಲಿ ಸಂಪೂರ್ಣ ವಿಫಲವಾಗಿವೆ. ಆದ್ದರಿಂದ ಅಡ್ಡ ಮಾರ್ಗ ಹಿಡಿದಿರುವ ಭಯೋತ್ಪಾದಕ ಸಂಘಟನೆಗಳು ಕಾಶ್ಮೀರದ ಮುಗ್ದ ಯುವಕರನ್ನು ಬೆದರಿಸಿ, ಹೆದರಿಸಿ ಉಗ್ರ ಸಂಘಟನೆಗೆ ಸೇರಿಸಿಕೊಳ್ಳುವ ಅಡ್ಡ ಮಾರ್ಗ ಹಿಡಿದಿವೆ. ಮಾರ್ಚ್ 8 ರಂದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಪ್ರದೇಶದಲ್ಲಿ ಯುವಕನೊಬ್ಬನ್ನನ್ನು ಭಯೋತ್ಪಾದಕ ಸಂಘಟನೆಗೆ ಸೇರಲು ನಿರಾಕರಿಸಿದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದೀಗ ಆ ಯುವಕ ಚಿಕಿತ್ಸೆ ಸಫಲವಾಗದೇ ಮೃತಪಟ್ಟಿದ್ದಾನೆ.
20 ವರ್ಷದ ಒಮೈಸ್ ರಷೀದ್ ಭಟ್ ಭಯೋತ್ಪಾದಕರ ಮಾರಣಾಂತಿಕ ದಾಳಿಗೆ ಬಲಿಯಾದ ಯುವಕ. ಯುವಕ ಭಯೋತ್ಪಾದಕನಾಗಲು ನಿರಾಕರಿಸಿದ್ದರಿಂದ ಮಾರಣಾಂತಿಕ ದಾಳಿಯನ್ನು ಮಾರ್ಚ್ 8ರಂದು ಮಾಡಲಾಗಿತ್ತು. ದಾಳಿಗೆ ಒಳಗಾದ ಯುವಕನನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಸಫಲವಾಗದೇ ಮೃತಪಟ್ಟಿದ್ದಾನೆ.
ಕ್ವಾಂ ಪ್ರದೇಶದಲ್ಲಿ ಯುವಕನ ಮೇಲೆ ಮಾರಣಾಂತಿಕ ದಾಳಿ ನಡೆಸಿ, ಸಜೀವ ಶವವವಾಗಿದ್ದ ಯುವಕನನ್ನು ಬೀದಿ ಬದಿಯಲ್ಲಿ ಬಿಸಾಡಿ ಹೋಗಿದ್ದರು. ಆತನ ಕೊಲೆ ಮಾಡುವುದೇ ದಾಳಿ ಮಾಡಿದವರು ಉದ್ದೇಶವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Leave A Reply