ಸುಪರ್ಸಾನಿಕ್ ಬ್ರಹ್ಮೋಸ್ ಮಿಸೈಲ್ ಪರೀಕ್ಷಾರ್ಥ ಯಶಸ್ವಿ ಉಡಾವಣೆ
ದೆಹಲಿ: ಭಾರತದ ಪ್ರಥಮ ಬಾರಿಗೆ ಯಶಸ್ವಿಯಾಗಿ ಸುಪರ್ಸೋನಿಕ್ ಬ್ರಹ್ಮೋಸ್ ಪರೀಕ್ಷಾರ್ಥ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಪ್ರೋಖ್ರಾನ್ ಪ್ರದೇಶದಲ್ಲಿ ಈ ಪ್ರಯೋಗಾರ್ಥ ಉಡಾವಣೆ ನಡೆದಿದ್ದು, ಯಶಸ್ವಿಯಾಗಿದೆ. ಭಾರತದ ರಕ್ಷಣಾ ಬಲಗಳಿಗೆ ತಾಕತ್ತು ನೀಡುವ ಬ್ರಹ್ಮೋಸ್ ಯಶಸ್ವಿ ಪರೀಕ್ಷಾರ್ಥ ಉಡಾವಣೆ ವಿಶ್ವದ ಗಮನ ಸೆಳೆದಿದೆ.
ಗುರುವಾರ ಬೆಳಗ್ಗೆ 8.42 ಗಂಟೆಗೆ ಈ ಪ್ರಯೋಗ ನಡೆದಿದೆ. ಶತ್ರುಗಳನ್ನು ಸದೆಬಡೆಯುವಲ್ಲಿ ವಿಶೇಷ ತಾಕತ್ತು ಹೊಂದಿರುವ ಬ್ರಹ್ಮೋಸ್ ಮಿಸೈಲ್ ಸೈನ್ಯಕ್ಕೆ ಹೊಸ ಬಲ ನೀಡಲಿದೆ. ಭಾರತ ಮತ್ತು ರಷ್ಯಾದ ಸಹಯೋಗದಲ್ಲಿ ಈ ಮಿಸೈಲ್ ಉಡಾವಣೆ ಕಾರ್ಯ ನಡೆದಿದ್ದು, ಎರಡು ರಾಷ್ಟ್ರಗಳ ನದಿಗಳಾದ ಬ್ರಹ್ಮಪುತ್ರ ಮತ್ತು ರಷ್ಯಾದ ಮಾಸ್ಕೋವಾ ನದಿಯ ಹೆಸರುಗಳನ್ನು ಜೋಡಿಸಿ ಬ್ರಹ್ಮೋಸ್ ಎಂದು ನಾಮಕರಣ ಮಾಡಲಾಗಿದೆ. ಪ್ರಸ್ತುತ ಭಾರತದಲ್ಲಿರುವ ಎಲ್ಲ ಮಿಸೈಲ್ ಗಳಿಂದ ಬ್ರಹ್ಮೋಸ್ ಸುಪರ್ಸಾನಿಕ್ ಮಿಸೈಲ್ ತೀವ್ರ ವೇಗವನ್ನು ಹೊಂದಿದ್ದು, 400 ಕಿ.ಮೀ. ವ್ಯಾಪ್ತಿಯಲ್ಲಿ ದಾಳಿ ನಡೆಸುವ ತಾಕತ್ತು ಹೊಂದಿದೆ.
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ತಂತ್ರಜ್ಞಾನ, ವಿಶೇಷವಾಗಿ ಸೈನ್ಯಕ್ಕೆ ಬಳಕೆಯಾಗುತ್ತಿರುವ ತಂತ್ರಜ್ಞಾನಕ್ಕೆ ಒತ್ತು ನೀಡುತ್ತಿರುವುದರ ಫಲ ಈ ಬ್ರಹ್ಮೋಸ್ ಮಿಸೈಲ್ ಎನ್ನಬಹುದು. ಈ ಮಿಸೈಲ್ ಸ್ವಮಾರ್ಗದರ್ಶಕ ನಿಯಂತ್ರಣ ವ್ಯವಸ್ಥೆ ಹೊಂದಿರುವುದು ವಿಶೇಷ.
Leave A Reply