ಮಕ್ಕಳನ್ನು ದಾರಿ ತಪ್ಪಿಸಲು ಅಖಿಲೇಶ್ ಯಾದವರಿಗಿಂತ ಬೇರೆ ಉದಾಹರಣೆ ಬೇಕಿಲ್ಲ!
ಲಖನೌ: ಒಬ್ಬ ನಾಯಕನಾದವನು ಹೇಗಿರಬೇಕು. ತಾನು ಸರಿದಾರಿಯಲ್ಲಿ ನಡೆದು, ಸಮಾಜವನ್ನೂ ಸರಿದಾರಿಯಲ್ಲಿ ನಡೆಯುವ ಹಾಗೆ ಮಾಡಬೇಕು. ಮಾದರಿಯಾಗಿ ಜೀವನ ಸಾಗಿಸಬೇಕು. ಎಲ್ಲರೂ ಅವನಿಂದ ಬೊಗಸೆಯಷ್ಟಾದರೂ ಸ್ಫೂರ್ತಿ ಪಡೆಯುವಂತಿರಬೇಕು.
ಇದೇ ಕಾರಣಕ್ಕಾಗಿ ತಾವೂ ಸರಿಯಾಗಿರುವ, ಸಮಾಜವನ್ನೂ ಸರಿಯಾಗಿ ಮುನ್ನಡೆಸುವ ರೀತಿಯಲ್ಲಿ ಉತ್ತರ ಪ್ರದೇಶಲ್ಲಿ ಯೋಗಿ ಆದಿತ್ಯನಾಥರು ರೌಡಿಗಳನ್ನು ಮಟ್ಟಹಾಕುವ ಜತೆಗೆ, ಮುಂದಿನ ಸಮಾಜ ಉತ್ತಮ ನಾಗರಿಕರನ್ನು ಕಾಣುವ ದೃಷ್ಟಿಯಿಂದ ರಾಜ್ಯದಲ್ಲಿ ನಡೆಯುವ ಎಲ್ಲ ಪರೀಕ್ಷೆಗಳನ್ನು ಸುಭದ್ರವಾಗಿ, ನಕಲು ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ. ಸಿಸಿಟಿವಿ ಕಣ್ಗಾವಲಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಾಗಿದೆ.
ಆದರೆ ಯೋಗಿ ಆದಿತ್ಯನಾಥರಂತಹ ನಾಯಕರಿರುವ ಈ ರಾಜ್ಯದಲ್ಲಿ ಅಖಿಲೇಶ್ ಯಾದವ್ ಅವರಂತಹವರೂ ಇದ್ದಾರಲ್ಲ ಎಂಬ ಬೇಸರ ಕಾಡುವಂತಾಗಿದೆ. ಹೌದು, ಸುಖಾಸುಮ್ಮನೆ ಹೇಳುತ್ತಿಲ್ಲ, ರಾಜ್ಯದಲ್ಲಿ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಸರ್ಕಾರ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಅಖಿಲೇಶ್ ಯಾದವ್, “ವಿದ್ಯಾರ್ಥಿಗಳು ಸಣ್ಣ ಪುಟ್ಟ ಅಂಶಗಳನ್ನು ನಕಲು ಮಾಡಿದರೆ, ಅದು ನಕಲು ಎನಿಸುವುದಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಬಹುತೇಕ ಎಲ್ಲ ವಿದ್ಯಾರ್ಥಿಗಳೂ ಪರೀಕ್ಷೆಯಲ್ಲಿ ಸ್ವಲ್ಪವಾದರೂ ನಕಲು ಮಾಡುತ್ತಾರೆ. ಎಲ್ಲೋ ಸುಮಾರು ಶೇ.10ರಷ್ಟು ವಿದ್ಯಾರ್ಥಿಗಳು ಚೀಟಿ ಮಾಡದಿರಬಹುದು. ಆದರೆ ಉಳಿದವರ ಬಗ್ಗೆ ಏನು ಹೇಳುತ್ತೀರಿ? ಆದರೆ ಅದನ್ನು ನಕಲು ಎಂದು ಪರಿಗಣಸಲಾಗಲ್ಲ ಎಂದಿದ್ದಾರೆ.
ಅಲ್ಲ, ಯಾವುದೋ 10 ಜನರಿರುವ ಗುಂಪಿನಲ್ಲಿ 8 ಜನ ಮದ್ಯ ಸೇವನೆ ಮಾಡುತ್ತಾರೆ ಎಂದು, ಉಳಿದವರೂ ಮಾಡಲಿ ಎನ್ನುವಂತೆ ಅಖಿಲೇಶ್ ಯಾದವ್ ಹೇಳಿದ್ದಾರೆ. ವಿದ್ಯಾರ್ಥಿಗಳು ನಕಲು ಮಾಡದೆ ಉತ್ತೀರ್ಣರಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಯೋಗಿ ಆದಿತ್ಯನಾಥರು ಶಕ್ತಿ ತುಂಬುತ್ತಿದ್ದರೆ, ಮಾಜಿ ಸಿಎಂ ಅಖಿಲೇಶ್ ಯಾದವ್ ಮಕ್ಕಳ ದಾರಿತಪ್ಪಿಸುವ ಹೇಳಿಕೆ ನೀಡಿದ್ದಾರೆ.
Leave A Reply