ಭಾರತದ ಮಣ್ಣಿನಲ್ಲಿ ಪಾಕ್ ದಿನ ಆಚರಿಸಿದ ದೇಶದ್ರೋಹಿ ಅಂದ್ರಾಬಿ

ಶ್ರೀನಗರ: ಜಮ್ಮು ಕಾಶ್ಮೀರ ಪ್ರತ್ಯೇಕವಾದಿಗಳ ಧರ್ಪ ಮುಂದುವರಿದಿದ್ದು, ದೇಶದ ಅನ್ನ, ನೀರು, ಗಾಳಿ ತಿಂದೂ ದೇಶದ್ರೋಹಿ ಕಾರ್ಯದಲ್ಲಿ ಪ್ರತ್ಯೇಕವಾದಿಗಳು ತೊಡಗಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ತಡ ಇಕ್ಕಟ್ಟಿಗೆ ಸಿಲುಕಿರುವ ಪ್ರತ್ಯೇಕವಾದಿಗಳು ಗೌಪ್ಯವಾಗಿ ತಮ್ಮ ದೇಶವಿರೋಧಿ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಪ್ರತ್ಯೇಕವಾದಿ ಅಸಿಯಾ ಅಂದ್ರಾಬಿ ಭಾರತದ ನೆಲದಲ್ಲಿ ಪಾಕಿಸ್ತಾನದ ದಿನವನ್ನು ಆಚರಿಸಿರುವ ವಿಡಿಯೋ ದೊರಕಿದೆ.
ಸದಾ ದೇಶವಿರೋಧಿ ಕಾರ್ಯಚಟುವಟಿಕೆಗಳ ಮೂಲಕ ಹೊಡೆತ ತಿನ್ನುತ್ತ, ಕಾಶ್ಮೀರದ ನೆಮ್ಮದಿಗೆ ಭಂಗ ತರುತ್ತಿರುವ ಪ್ರತ್ಯೇಕವಾದಿಗಳು ತಮ್ಮ ಚಾಳಿಯನ್ನು ಮುಂದುವರಿಸಿದ್ದಾರೆ. ಆಸಿಯಾ ಅಂದ್ರಾಬಿಯ ಭಯೋತ್ಪಾದಕ ಸಂಘಟನೆ ದುಕ್ರತೇನ್ ಈ ಮಿಲತ್ ನೇತೃತ್ವದಲ್ಲಿ ಪಾಕಿಸ್ತಾನದ ದಿನವನ್ನು ಆಚರಿಸಿರುವ ವಿಡಿಯೋ ಬಿಡುಗಡೆಯಾಗಿದೆ. ವಿಡಿಯೋದಲ್ಲಿ ಭಾರತದ ನೆಲದ ದೇಶದ್ರೋಹಿ ಆಸಿಯಾ ಇಂದ್ರಾಬಿ ಸೇರಿ ಹಲವರು ಭಾರತ ವಿರೋಧಿ ಘೋಷಣೆ ಕೂಗಿದಲ್ಲದೇ, ಪಾಪಿ ಪಾಕಿಸ್ತಾನಕ್ಕೆ ಜೈ ಕಾರ ಹಾಕಿರುವುದು ಬಹಿರಂಗವಾಗಿದೆ.
ಭಾರತದ ಸರ್ಕಾರದಿಂದ ರಕ್ಷಣೆ ಪಡೆಯುತ್ತಿರುವ ಅಂದ್ರಾಬಿಗೆ ಗೃಹ ಬಂಧನ ವಿಧಿಸಿದ್ದರಿಂದ ಅವಳ ಬೆಂಬಲಿಗರು ಸೇರಿ ಇತರರು ಪಾಕಿಸ್ತಾನದ ದಿನವನ್ನು ಆಚರಿಸಿದಲ್ಲದೇ, ಪಾಕ್ ಪರ ಘೋಷಣೆಗಳು ಕೂಗಿದ್ದಾರೆ. ಅಲ್ಲದೇ ಪಾಕಿಸ್ತಾನದ ಧ್ವಜಗಳನ್ನು ಭಾರತದ ನೆಲದಲ್ಲಿ ಹಾರಿಸಿದ್ದಾರೆ.
Leave A Reply