ದಕ್ಷಿಣ ಏಷ್ಯಾದ ಶಾಂತಿಗೆ ಭಾರತದ ಪಾತ್ರ ಪ್ರಮುಖ ಎಂದು ನಡು ಬಗ್ಗಿಸಿ ನಿಂತ ಪಾಕ್
ದೆಹಲಿ: ಸದಾ ಭಾರತದ ವಿರುದ್ಧ ಬೆಂಕಿ ಉಗುಳುತ್ತಿದ್ದ ಪಾಕಿಸ್ತಾನ ಇದೀಗ ಭಾರತದ ಎದುರು ನಡು ಬಗ್ಗಿಸಿ, ಕೈ ಚಾಚಿ ನಿಂತಿದೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ ಹಾಗು ಸ್ಥಿರತೆ ನೆಲಸಲು ಭಾರತದಿಂದ ಮಾತ್ರ ಸಾಧ್ಯ ಎಂದು ಪಾಕ್ ಸಚಿವ ಅಹ್ಸಾನ್ ಇಕ್ಬಾಲ್ ಹೇಳಿಕೆ ನೀಡಿದ್ದಾರೆ.
ಚೀನಾ ಪಾಕ್ ಜಂಟಿ ನಡೆಸುತ್ತಿರುವ ಆರ್ಥಿಕ ಕಾರೀಡಾರನ ಭಾಗವಾದ ಸಿಪೆಕ್ ಶುದ್ಧ ಆರ್ಥಿಕ ಯೋಜನೆಯಾಗಿದೆ. ಅದರಿಂದ ಇಡೀ ಪ್ರದೇಶಕ್ಕೆ ಆರ್ಥಿಕ ಲಾಭ ದೊರೆಯಲಿದೆ. ಅನವಶ್ಯಕವಾಗಿ ಟೀಕೆ ಮಾಡುವ ಬದಲು ಯೋಜನೆಯಿಂದ ಲಾಭ ಪಡೆಯಲು ಪಾಕ್ ಮುಂದೆ ಬರಬೇಕಿದೆ. ಸಾರಿಗೆ ಕಾರಿಡಾರ್‌ಗಳ ಮೂಲಕ ದೇಶಗಳನ್ನು ಬೆಸೆದು ಆರ್ಥಿಕ ಸಮಗ್ರತೆ ತಂದು ವ್ಯಾಪಾರ ವೃದ್ಧಿ ಹಾಗೂ ಪ್ರಾದೇಶಿಕ ಸಂಪರ್ಕ ಬೆಸೆಯಲು ಅನುಕೂಲವಾಗಲಿದೆ ಎಂದು ಸಚಿವ ಸಬೂಬು ಹೇಳಿದ್ದಾರೆ. ಈ ಯೋಜನೆಗೆ ಭಾರತ ವಿರೋಧ ವ್ಯಕ್ತಪಡಿಸಿತ್ತು.
ಪಾಕ್ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಿವಾದಿತ ಕಾರಿಡಾರ್ ನಲ್ಲಿ ಭಾರತದ ಕಾಶ್ಮೀರದ ಭೂಪ್ರದೇಶದಲ್ಲಿ ಹಾದು ಹೋಗುತ್ತಿದ್ದು, ಅದಕ್ಕೆ ಭಾರತದ ಸಹಕಾರ ಅಗತ್ಯ ಎಂಬ ಅರಿವು ಪಾಕಿಸ್ತಾನಕ್ಕೆ ಉಂಟಾಗಿದ್ದು, ಇದೀಗ ಭಾರತದ ಎದುರು ನಡು ಬಗ್ಗಿಸಿ ನಿಂತಿದೆ. ಭಾರತ ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ, ಯೋಜನೆ ಪೂರ್ಣಗೊಳಿಸಲು ಪಾಕ್ ಗೆ ಸಂಕಷ್ಟ ಎದುರಾಗಿದೆ.
ಚೀನಾ ಅಧ್ಯಕ್ಷ ಶೀ ಝಿನ್‌ಪಿಂಗ್‌ರ ಮಹತ್ವಾಕಾಂಕ್ಷೆಯ ಒನ್ ಬೆಲ್ಟ್ ಒನ್ ರೋಡ್ ಯೋಜನೆಯ ಭಾಗವಾದ ಸಿಪೆಕ್‌ನಲ್ಲಿ ಇನ್ನಷ್ಟು ದೇಶಗಳ ಪಾಲ್ಗೊಳ್ಳುವಿಕೆಗೆ ಕೋರಿ ಇಸ್ಲಾಮಾಬಾದ್ ಹಾಗು ಬೀಜಿಂಗ್ ಮಾಡುತ್ತಿರುವ ಪ್ರಯತ್ನಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರಕದಿರುವುದರಿಂದ ಪಾಕಿಸ್ತಾನ ಮತ್ತು ಚೀನಾ ಇದೀಗ ಭಾರತದ ಸಹಾಯ ಕೇಳಲು ಮುಂದಾಗಿವೆ.
ಚಾಬಬಾಹರ್ ಬಂದರಿನಿಂದ ಅಫ್ಘಾನಿಸ್ತಾನ ಹಾಗೂ ಮಧ್ಯ ಏಷ್ಯಾಗೆ ಸಂಪರ್ಕಿಸಲು ಭಾರತಕ್ಕೆ ಅನುಕೂಲವಾಗಲಿದೆ. ಭೌಗೋಳಿಕವಾಗಿ ಪಾಕ್ ನಿಂದ ಅಫ್ಘಾನಿಸ್ತಾನ ಹಾಗು ಕೇಂದ್ರ ಏಷ್ಯಾದೊಂದಿಗೆ ಸಂಪರ್ಕಿಸಬೇಕಿತ್ತು. ಆದರೆ ಪಾಕ್‌ನೊಂದಿಗೆ ನಿರಂತರವಾಗಿ ಸಂಬಂಧಗಳು ಹದಗೆಡುತ್ತಿರುವ ಕಾರಣ ಈ ಆಯ್ಕೆ ಫಲ ನೀಡಿರಲಿಲ್ಲ. ಇದೀಗ ಪಾಕ್ ಗೆ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರತದ ಎದುರು ಕೈ ಚಾಚುತ್ತಿದೆ. ಭಾರತದ ಸಹಕಾರವಿಲ್ಲದೇ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಪೂರ್ಣವಾಗುವುದಿಲ್ಲ ಎಂದು ಪಾಕಿಸ್ತಾನ ಘೀಳಿಡುತ್ತಿದೆ.
Leave A Reply