ಶೀಘ್ರದಲ್ಲಿ ಸೈನ್ಯದ ಕೈ ಸೇರಲಿವೆ 5,366 ಕೋಟಿ ಮೌಲ್ಯದ ಆಯುದ್ಧಗಳು
ದೆಹಲಿ: ಚೀನಾ, ಪಾಕಿಸ್ತಾನ, ಬಾಂಗ್ಲಾ ಹೀಗೆ ಸುತ್ತಲು ಶತ್ರುಗಳ ರಾಷ್ಟ್ರಗಳ ನಿರಂತರ ಕಿರಿಕಿರಿ, ದಾಳಿಯ ಭೀತಿಯಲ್ಲೇ ದಿನ ದೂಡುತ್ತಿರುವುದು ಭಾರತ. ಶಕ್ತಿಯುತ ಸೈನ್ಯವನ್ನು ಹೊಂದಿದ್ದರು ಶತ್ರುಗಳು ನಿರಂತರವಾಗಿ ಭಾರತದ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ದಾಳಿಗೆ ಪ್ರತ್ಯುತ್ತರ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ತೀರ್ಮಾನಿಸಿದ್ದು, ಶೀಘ್ರದಲ್ಲಿ ಸೈನ್ಯಕ್ಕೆ 5,366 ಕೋಟಿ ರೂಪಾಯಿ ಮೌಲ್ಯದ ಆಯುದ್ಧಗಳನ್ನು ನೀಡಲು ನಿರ್ಧರಿಸಿದೆ.
ವಿಶೇಷವಾಗಿ ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ ತ್ವರಿತ ಗತಿಯಲ್ಲಿ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ರೈಫಲ್ಸ್, ಲೈಟ್ ಮಷಿನ್ ಗನ್, ಬ್ಯಾಟಲ್ ಕಾರ್ಬಿನ್ಸ್ ಸೇರಿ ನಾನಾ ವಿದದ ಆಯುದ್ಧಗಳನ್ನು ಸೈನ್ಯಕ್ಕೆ ನೀಡುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅಸ್ತು ಎನ್ನಲ್ಲಿದೆ ಎಂದು ಸೈನ್ಯದ ಮೂಲಗಳು ತಿಳಿಸಿವೆ.
ರಕ್ಷಣಾ ಇಲಾಖೆ 72,400 ಅಸಾಲ್ಟ್ ರೈಫಲ್ಸ್, 93,895 ಸಿಕ್ಯೂಬಿ ಕಾರ್ಬಿನ್ಸ್ ಮತ್ತು 16,479 ಲೈಟ್ ಮಷಿನ್ ಗನ್ಸ್ ಒದಗಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಇವುಗಳ ಒಟ್ಟು ಮೊತ್ತ 5,366 ಕೋಟಿ ರೂಪಾಯಿ ಆಗಲಿದೆ. ರಕ್ಷಣಾ ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿಶೇಷ ಆಸಕ್ತಿ ಈ ನಿಟ್ಟಿನಲ್ಲಿ ಕೈಗೊಂಡಿದ್ದು, ಎಲ್ಲ ಆಯುದ್ಧಗಳು ಶೀಘ್ರದಲ್ಲಿ ಸೈನ್ಯದ ಕೈಸೇರಲಿವೆ.
Leave A Reply