• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

9 ಯೋಧರ ಸಾವಿಗೆ ಕಾರಣರಾದ 7 ಕೆಂಪು ಉಗ್ರರ ಹೆಡೆಮುರಿ ಕಟ್ಟಿದ ಸೇನೆ

TNN Correspondent Posted On March 25, 2018
0


0
Shares
  • Share On Facebook
  • Tweet It

ಸುಕ್ಮಾ: ಇತ್ತೀಚೆಗೆ ನಕ್ಸಲರ ದಾಳಿಯಲ್ಲಿ ಒಂಬತ್ತು ಸಿಆರ್ ಫಿಎಫ್  ಯೋಧರು ಹುತಾತ್ಮರಾಗಲು ಕಾರಣರಾದ 7 ಕೆಂಪು ಉಗ್ರರನ್ನು ಸೈನಿಕರು ಭಾನುವಾರ ನಸುಕಿನ ಜಾವ ಬಂಧಿಸಿದ್ದಾರೆ. ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯ ಕಿಸ್ತಾರಾಮ್ ಅರಣ್ಯ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಸಿಆರ್ ಪಿಎಫ್ ತಂಡ ಏಳು ಕೆಂಪು ಉಗ್ರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

ಜಿಲ್ಲಾ ಪೊಲೀಸರು, ಜಿಲ್ಲಾ ಮೀಸಲು ಪಡೆ, ಸಿಆರ್ ಪಿಎಫ್, ಕೋಬ್ರಾ ತಂಡ ಸೇರಿ ನಾನಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸುಕ್ಮಾ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ ಮೀನಾ ತಿಳಿಸಿದ್ದಾರೆ.

ಅರಣ್ಯದಲ್ಲಿ ಅಲ್ಟ್ರಾ ಸೌಂಡ್ ಮೂಲಕ ಮಾಹಿತಿ ತಿಳಿದ ತಕ್ಷಣ ಎಲ್ಲ ಪಡೆಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ. ಶನಿವಾರ ರಾತ್ರಿ ಎಲ್ಲ ಪಡೆಗಳು ಕಿಸ್ತಾರಾಮ್ ಪ್ರದೇಶದವನ್ನು ಸುತ್ತುವರಿದಿದ್ದವು, ಭಾನುವಾರ ನಸುಕಿನ ಜಾವ ಏಕಕಾಲಕ್ಕೆ ದಾಳಿ ನಡೆಸಿ, ಏಳು ಜನರನ್ನು ಬಂಧಿಸಲಾಗಿದೆ ಎಂದು ಅಭಿಷೇಕ ಮೀನಾ ತಿಳಿಸಿದ್ದಾರೆ.

ಮಾರ್ಚ್ 13ರಂದು ಸಿಆರ್ ಫಿಎಫ್ ಯೋಧರ ಶಿಬಿರದ ಮೇಲೆ ನಕ್ಸಲರು ನೆಲ ಬಾಂಬ್ ಸ್ಫೋಟಿಸಿದ್ದರಿಂದ ಒಂಬತ್ತು ಯೋಧರು ಹುತಾತ್ಮರಾಗಿದ್ದಲ್ಲದೇ, ಎಂಟು ಜನರಿಗೆ ಗಂಭೀರ ಗಾಯಗಳಾಗಿದ್ದವು. ಈ ದಾಳಿಯಲ್ಲಿ ಭಾಗಿಯಾಗಿರುವ ಕೊಮ್ರಾಮ್ ಸಾಡೆ, ಮದ್ಕಮ್ ಜೋಗಾ, ಮದ್ಕಮ್ ಹಿಡ್ಮಾ, ಮಡ್ಕಮ್ ಗಂಗಾ, ವಂಜಾಮ್ ಆಯತ್, ವಂಜಮ್ ಸಿಂಗಾ ಮತ್ತು ಮಾದ್ವಿ ಸುಕ್ಕಾ ಎಂಬುವರನ್ನು ಬಂಧಿಸಲಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.

0
Shares
  • Share On Facebook
  • Tweet It




Trending Now
ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
Tulunadu News April 27, 2026
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search