ಆಂಧ್ರಪ್ರದೇಶದಲ್ಲೊಂದು ಸ್ವಾಭಿಮಾನಿ ಹಿಂದೂಗಳ ಗ್ರಾಮ
ಹೈದರಾಬಾದ್: ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕೇಸಲಿಂಗಯ್ಯಪಳ್ಳಿ ಗ್ರಾಮದಲ್ಲಿ ಹಿಂದೂಗಳನ್ನು ಹೊರತುಪಡಿಸಿ ಬೇರೆ ಧರ್ಮದವರಿಗೆ ಪ್ರವೇಶವಿಲ್ಲ, ಬೇರೆ ಧರ್ಮದವರು ಇಲ್ಲಿ ಪ್ರಚಾರ ಸೇರಿ ಮತ್ತೀತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ನಿಷೀಧ.
ಕಳೆದ ವರ್ಷದ ಶ್ರೀರಾಮ ನವಮಿಯಂದು ಈ ಗ್ರಾಮ ಸಂಪೂರ್ಣ ಹಿಂದೂ ಗ್ರಾಮ ಎಂದು ಘೋಷಿಸಿಕೊಂಡಿದ್ದು, ಗ್ರಾಮದ ಪ್ರವೇಶ ದ್ವಾರದಲ್ಲೇ ಕೇಸರಿ ಬಣ್ಣದಲ್ಲಿ ದೊಡ್ಡ ಸೂಚನಾ ಫಲಕ ಹಾಕಲಾಗಿದೆ. ಸೂಚನಾ ಫಲಕದಲ್ಲಿ ಸ್ಪಷ್ಟವಾಗಿ ಈ ಗ್ರಾಮಕ್ಕೆ ಅನ್ಯ ಧರ್ಮದವರಿಗೆ ಪ್ರವೇಶವಿಲ್ಲ ಎಂಬ ಸೂಚನೆಯನ್ನು ನೀಡಲಾಗಿದೆ. ಬೇರೆ ಧರ್ಮದವರು ಅಪ್ಪಿ ತಪ್ಪಿ ನಿಯಮಗಳನ್ನು ಮೀರಿ ಗ್ರಾಮದಲ್ಲಿ ಪ್ರವೇಶಿಸಿದರೇ ಶಿಕ್ಷೆ ನೀಡಲಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಅಲ್ಲದೇ ಸೂಚನಾ ಫಲಕದಲ್ಲಿ ಮತಾಂತರದ ಕುರಿತು ಎಚ್ಚರಿಕೆ ನೀಡಿದ್ದು, ಒಬ್ಬ ವ್ಯಕ್ತಿ ಮತಾಂತರವಾದರೇ, ತನ್ನ ತಾಯಿಯನ್ನು ಬದಲಾಯಿಸಿದಂತೆ ಎಂಬ ಸಂದೇಶವನ್ನು ಸಾರಿದೆ. 1,500 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಕಾಪು ಸಮುದಾಯ ಮತ್ತು ಇತರೆ ಹಿಂದುಗಳಿದ ಜಾತಿಗಳಿದ್ದರೂ, ಎಲ್ಲರೂ ಹಿಂದೂಗಳು ಎಂಬ ಭಾವದೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಇಡೀ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮದ ಕುಟುಂಬಗಳಿಲ್ಲದಿರುವುದು ವಿಶೇಷ.
ಕಳೆದ ವರ್ಷದ ಕೆಲವು ಕ್ರಿಶ್ಚಯನ್ ಮಷಿನರಿಗಳು ನಮ್ಮ ಗ್ರಾಮಕ್ಕೆ ಬಂದು ಕ್ರಿಸ್ತನನ್ನು ಪ್ರಾರ್ಥಿಸಿದರೇ ರೋಗಗಳು ಗುಣಮುಖವಾಗುತ್ತವೆ ಎಂದು ಬೊಗಳೇ ಬಿಟ್ಟು ಮತಾಂತರಕ್ಕೆ ಪ್ರಯತ್ನಿಸುತ್ತಿದ್ದರು. ಆಗ ಗ್ರಾಮದ ಎಲ್ಲರೂ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಅವರನ್ನು ಗ್ರಾಮದಿಂದ ಹೊರ ದಬ್ಬಿದ್ದೇವು. ಅಲ್ಲದೇ ಕಳೆದ ವರ್ಷ ಶ್ರೀರಾಮನವಮಿ ದಿನ ಗ್ರಾಮವನ್ನು ಹಿಂದೂಗಳ ಗ್ರಾಮ ಎಂದು ಘೋಷಿಸಿದ್ದೇವೆ ಎನ್ನುತ್ತಾರೆ ಗ್ರಾಮದ ಬಿ.ರಾಮಣ್ಣ.
ಗ್ರಾಮದ ಕೆಲವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದರು. ಅವರನ್ನು ಬ್ರಹ್ಮಗಿರಿ ಮಠದ ಸ್ವಾಮಿ ಅಚಲಾನಂದರ ಬಳಿ ಕರೆದುಕೊಂಡು ಹೋಗಿ, ಜ್ಞಾನೋದಯ ಮಾಡಿ ಹಿಂದೂ ಧರ್ಮಕ್ಕೆ ಮರಳಿ ಕರೆದುಕೊಂಡು ಬರಲಾಗಿದೆ ಎಂದು ಗ್ರಾಮಸ್ಥ ರಾಮಣ್ಣ ತಿಳಿಸಿದ್ದಾರೆ.
ಗ್ರಾಮವನ್ನು ಪ್ರವೇಶಿಸಿಸುವ ಅನ್ಯಧರ್ಮದವರಿಗೆ ಮಹಿಳೆಯರಿಂದ ಪೊರಕೆ ಸೇವೆ ಮಾಡುತ್ತೇವೆ. ಅಲ್ಲದೇ ಜೈ ಶ್ರೀರಾಮ ಘೋಷಣೆ ಕೂಗುತ್ತೇವೆ. ಅದಕ್ಕೂ ಮೀರಿ ನಾವು ನಮ್ಮ ಧರ್ಮದ ಶ್ರೇಷ್ಠತೆ ಬಗ್ಗೆ ಚರ್ಚಿಸಲು ಸಿದ್ಧ ಎನ್ನುತ್ತಾರೆ ಗ್ರಾಮಸ್ಥರು.
Leave A Reply