ಉತ್ತರ ಪ್ರದೇಶದಲ್ಲಿ ರೌಡಿಗಳು ಮಾತ್ರವಲ್ಲ, ಉಗ್ರರ ನಿಗ್ರಹಕ್ಕೂ ಮುಂದಾಗಿದ್ದಾರೆ ಯೋಗಿ ಆದಿತ್ಯನಾಥ! ಈ ಸುದ್ದಿ ಓದಿ.
ಲಖನೌ: ಉತ್ತರ ಪ್ರದೇಶದಲ್ಲಿ ಕಳೆದ ವರ್ಷ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಆ ರಾಜ್ಯದ ಚಹರೆಯೇ ಬದಲಾಗುತ್ತಿದ್ದು, ಕಾನೂನು ಸುವ್ಯವಸ್ಥೆಯನ್ನಂತು ಸಂಪೂರ್ಣವಾಗಿ ತಹಬಂದಿಗೆ ತಂದಿದ್ದಾರೆ. ಪೊಲೀಸರಿಗೆ ಸ್ವಾತಂತ್ರ್ಯ ನೀಡಿದ್ದು, ಇದುವರೆಗೆ ಸಾವಿರಾರು ಎನ್ ಕೌಂಟರ್ ಮಾಡಲಾಗಿದೆ. 40ಕ್ಕೂ ಅಧಿಕ ರೌಡಿಗಳನ್ನು ಹತ್ಯೆ ಮಾಡಲಾಗಿದೆ.
ಇದರಿಂದಾಗಿ ರೌಡಿಗಳು ನಮಗೆ ಬೇಲ್ ನೀಡುವುದೇ ಬೇಡ, ನಾವು ಜೈಲಿನಲ್ಲಿಯೇ ಇರುತ್ತೇವೆ ಎನ್ನುವಷ್ಟರಮಟ್ಟರಿಗೆ ಯೋಗಿ ಆದಿತ್ಯನಾಥರು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ.
ಹಾಗಂತ, ರಾಜ್ಯ ಸರ್ಕಾರ ಬರೀ ರೌಡಿಗಳನ್ನು ಮಾತ್ರ ಮಟ್ಟಹಾಕುತ್ತಿಲ್ಲ, ಬದಲಿಗೆ ಉಗ್ರರ ನಿಗ್ರಹಕ್ಕೂ ಮುಂದಾಗಿದೆ. ಇದಕ್ಕೆ ಸಾಕ್ಷಿಯಾಗಿ ಲಷ್ಕರೆ ತಯ್ಯಬಾ ಉಗ್ರ ಸಂಘಟನೆಯ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಭಾನುವಾರ ಬರೋಬ್ಬರಿ ಹತ್ತು ಜನರನ್ನು ಭಯೋತ್ಪಾದಕರ ನಿಗ್ರಹ ದಳ ಬಂಧಿಸಿದೆ.
ಲಷ್ಕರೆ ತಯ್ಯಬಾ ಉಗ್ರ ಸಂಘಟನೆಯಿಂದ ಹಣ ಪಡೆದು, ಉಗ್ರ ಚಟುವಟಿಕೆಯಲ್ಲಿ ತೊಡಗಿದ ಆರೋಪದಲ್ಲಿ ಲಖನೌ, ಪ್ರತಾಪ್ ಗಡ, ಮಧ್ಯಪ್ರದೇಶದ ರಿವಾನ್ ಸೇರಿ ಹಲವೆಡೆ ಹತ್ತು ಶಂಕಿತರನ್ನು ಬಂಧಿಸಲಾಗಿದೆ. ಇವರೆಲ್ಲರೂ ಪಾಕಿಸ್ತಾನಿ ಉಗ್ರ ಸಂಘಟನೆಯಿಂದ ಹಣ ಪಡೆದಿದ್ದಾರೆ ಎಂಬ ಶಂಕೆಯಿದೆ ಎಂದು ಭಯೋತ್ಪಾದಕರ ನಿಗ್ರ ದಳದ ಪೊಲೀಸ್ ಮಹಾ ನಿರ್ದೇಶಕ ಆಸಿಮ್ ಅರುಣ್ ಮಾಹಿತಿ ನೀಡಿದ್ದಾರೆ.
ಬಂಧಿತರನ್ನು ನಸೀಮ್ ಅಹ್ಮದ್, ನಹೀಮ್ ಅರ್ಷಾದ್, ಸಂಜಯ್ ಸರೋಜ್, ನೀರಜ್ ಮಿಶ್ರಾ, ಸುಹಿಲ್ ಮಿಸಿಹ್, ಉಮಾ ಪ್ರತಾಪ್ ಸಿಂಗ್, ಮುಕೇಶ್ ಪ್ರಸಾದ್, ಮುಷರ್ರಫ್ ಅನ್ಸಾರಿ, ಅಂಕುರ್ ರೈ ಹಾಗೂ ದಯಾನಂದ್ ಯಾದವ್ ಎಂದು ಗುರುತಿಸಲಾಗಿದೆ.
Leave A Reply