ಉಗ್ರರರಿಗೆ ಅವರ ಭಾಷೆಯಲ್ಲೇ ಉತ್ತರ: ಕೇಂದ್ರ ಸಚಿವ ಜೀತೇಂದ್ರ ಸಿಂಹ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದಕರು ಸೇರಿ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರನ್ನು ಯಶಸ್ವಿಯಾಗಿ ಹತ್ತಿಕ್ಕಿದ್ದು, ಇಡೀ ವಿಶ್ವಕ್ಕೆ ತಿಳಿದಿದೆ. ಅಲ್ಲದೇ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರಗಳು ಭಯೋತ್ಪಾದಕರನ್ನು ಹುಟ್ಟಡಗಿಸಿವೆ. ಅದಕ್ಕೆ ಮೋದಿ ಹಿಂದಿರುವ ಶಕ್ತಿಗಳ ನಿರ್ಧಾರಗಳು, ದೂರದೃಷ್ಟಿಯ, ಕಠೋರ ಮತ್ತು ಸ್ಪಷ್ಟ ಸೂಚನೆಗಳೇ ಕಾರಣ ಎಂಬುದಕ್ಕೆ ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜೀತೇಂದ್ರ ಸಿಂಹ ಅವರ ಭಯೋತ್ಪಾದಕರ ಕುರಿತ ಈ ಹೇಳಿಕೆಯೇ ಸಾಕ್ಷಿ.
‘ಭಯೋತ್ಪಾದಕರಿಗೆ ಅವರ ಮಾದರಿಯಲ್ಲೇ ಉತ್ತರ ನೀಡಬೇಕಾಗುತ್ತದೆ. ಉಗ್ರರೊಂದಿಗೆ ಮೃದುವಾಗಿ ವರ್ತಿಸುವಂತಿಲ್ಲ. ಏಟಿಗೆ ಎದುರೇಟು ನೀಡಿದಾಗ ಮಾತ್ರ ಭಯೋತ್ಪಾದಕರನ್ನು ನಿಯಂತ್ರಿಸಲು ಸಾಧ್ಯ’ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಜೀತೇಂದ್ರ ಸಿಂಹ ಹೇಳಿರುವ ಈ ಮಾತುಗಳೇ ಕೇಂದ್ರ ಸರ್ಕಾರ ಭಯೋತ್ಪಾದಕ ವಿರುದ್ಧ ಯಾವ ರೀತಿ ಪ್ರತಿಕ್ರಿಯಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದೆ.
ಕಾಶ್ಮೀರದ ಬಹುತೇಕ ಯುವಕರು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಭಾರತದ ಐಕತ್ಯೆಯ ಮಂತ್ರದೊಂದಿಗೆ ವಿಕಾಸದ ಪತದತ್ತ ದೇಶವನ್ನು ಮುನ್ನಡೆಸಿಕೊಂಡು ಹೋಗಬೇಕು. ಈ ಯೋಚನಾ ಲಹರಿ ದೇಶಕ್ಕೆ ಹೊಂದಿಕೊಂಡಂತಿದೆ. ಅಲ್ಲದೇ ಕಾಶ್ಮೀರದಲ್ಲಿ ಭಯೋತ್ಪಾದಕ ಮೋಹದ ಪಾಶಕ್ಕೆ ಬೀಳುತ್ತಿರುವವರನ್ನು ಮುಖ್ಯಧಾರೆಗೆ ತರುವ ಪ್ರಯತ್ನವು ನಡೆದಿದೆ ಎಂದು ಸಿಂಹ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
Leave A Reply