ಮುಸ್ಲಿಂ ಗೂಂಡಾಗಳ ಅಟ್ಟಹಾಸಕ್ಕೆ ವ್ಯಕ್ತಿ ನಿಧನ, ಸಂಸ್ಕೃತಿ, ಸಂಸ್ಕಾರ ಎಂದರೆ ಇದೇನಾ?
ದೆಹಲಿ: ಅತ್ಯಾಚಾರ ಪ್ರಕರಣಗಳಿಗೆ ಸುದ್ದಿಯಾಗುತ್ತಿದ್ದ ದೆಹಲಿ ಈಗ ಲವ್ ಜಿಹಾದ್, ಮುಸ್ಲಿಂ ಗೂಂಡಾಗಳ ಅಟ್ಟಹಾಸಕ್ಕೂ ಸುದ್ದಿಯಾಗುತ್ತಿದ್ದು, ಪೂರ್ವ ದೆಹಲಿಯಲ್ಲಿ ಮುಸ್ಲಿಂ ಗೂಂಡಾಗಳಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.
ಪೂರ್ವ ದೆಹಲಿಯ ಮಂಡಾವಲಿ ಎಂಬಲ್ಲಿ ಸಣ್ಣ ಪ್ಲಾಸ್ಟಿಕ್ ವ್ಯಾಪಾರಿಯಾಗಿರುವ ರಾಜ್ ಬೀರ್ ರಾಥೋಡ್ ಮೂರು ಮಕ್ಕಳ ತಂದೆಯಾಗಿದ್ದು, ಈಗ ಕುಟುಂಬವೇ ಅನಾಥವಾದಂತಾಗಿದೆ. ಇಷ್ಟಾದರೂ ಪ್ರಕರಣವನ್ನು ಯಾವುದೇ ಮಾಧ್ಯಮಗಳು ಸುದ್ದಿ ಮಾಡದೆ ಮಗುಮ್ಮಾಗಿರುವುದು ಸಹ ಇಬ್ಬಂದಿತನಕ್ಕೆ ನಿದರ್ಶನವಾಗಿದೆ.
ಶನಿವಾರ ಸಂಜೆ ಪ್ಲಾಸ್ಟಿಕ್ ವ್ಯವಹಾರ ಮುಗಿಸಿ ಮನೆಗೆ ಬಂದಿದ್ದ ರಾಥೋಡ್ ರಾತ್ರಿ 10 ಗಂಟೆ ಸುಮಾರಿಗೆ ಗೋಲ್ ಗಪ್ಪ ತಿನ್ನಲು ಹೊರಗಡೆ ಹೋಗಿದ್ದ. ಆಗ ಇಬ್ಬರು ಮುಸ್ಲಿಮರು ಸುಮ್ಮನೆ ಗಲಾಟೆ ಮಾಡಿದ್ದಾರೆ. ಅಷ್ಟೇ ಅಲ್ಲ, ಆ ಗೂಂಡಾಗಳು ತಮ್ಮ ಗೆಳೆಯರನ್ನೂ ಕರೆಸಿ ರಾಥೋಡ್ ಮೇಲೆ ಹಲ್ಲೆ ಮಾಡಿದ್ದಾರೆ.
ಗಲಾಟೆ ಜೋರಾಗುತ್ತಲೇ ಸಾರ್ವಜನಿಕರು ಮಧ್ಯ ಪ್ರವೇಶಿಸಿ ಗಲಾಟೆ ಬಿಡಿಸಿದ್ದಾರೆ. ಹಲ್ಲೆಗೊಳಗಾದ ರಾಥೋಡ್ ಮನೆಗೆ ತೆರಳಿ ಮಲಗಿದ್ದು, ಬೆಳಗ್ಗೆ ತಡವಾದರೂ ಎದ್ದಿಲ್ಲ. ಇದರಿಂದ ವಿಚಲಿತರಾದ ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿದರಾದರೂ, ಹಲ್ಲೆ ವೇಳೆ ತೀವ್ರ ನೋವು ತಿಂದಿದ್ದ ಆತ ಮೃತಪಟ್ಟಿದ್ದಾನೆ ಎಂದು ರಾಥೋಡ್ ಸಹೋದರ ಮಾಹಿತಿ ನೀಡಿದ್ದಾರೆ.
ಇಮ್ತಿಯಾಜ್ ಎಂಬಾತನೇ ಮೊದಲು ರಾಥೋಡ್ ಜತೆ ಕಾಲುಕೆರೆದು ಜಗಳಕ್ಕೆ ನಿಂತಿದ್ದು, ಬಳಿಕ ಆತನ ಗೆಳೆಯರು ಸಹ ಹಲ್ಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Leave A Reply