ಬಯಲಾಯ್ತು ಕಾಂಗ್ರೆಸ್ ಕರಾಳ ಮುಖ, ಕಾಂಗ್ರೆಸ್ ನನ್ನ ಗ್ರಾಹಕ ಎಂದ ಕೆಂಬ್ರಿಜ್ ಅನಾಲಿಟಿಕಾ
ದೆಹಲಿ: ಸದಾ ತನ್ನ ಪಕ್ಷಕ್ಕಾಗಿ ಹೀನ ರಾಜಕೀಯ ಮಾಡುವ ಕಾಂಗ್ರೆಸ್ ನ ಮತ್ತೊಂದು ಕರಾಳ ಮುಖ ಅನಾವರಣವಾಗಿದ್ದು, ಚುನಾವಣೆಗಾಗಿ ಕಾಂಗ್ರೆಸ್ ದೇಶದ ಜನರಿಗೆ ಮೋಸ ಮಾಡಿದ್ದು, ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ ದೇಶದ ಜನರ ಮಾಹಿತಿ ಕಳ್ಳತನ ಮಾಡಿ, ಚುನಾವಣೆಗಾಗಿ ಸಹಕಾರ ನೀಡಿ ಎಂದು ಗುತ್ತಿಗೆ ನೀಡಿರುವ ವಿಷಯ ಬಹಿರಂಗಗೊಂಡಿದೆ. ಈ ವಿಷಯವನ್ನು ಇದೀಗ ಕೇಂಬ್ರಿಡ್ಜ್ ನ ಅನಾಲಿಟಿಕಾ ಸಂಸ್ಥೆಯ ಮಾಹಿತಿ ವಿಶ್ಲೇಷಕ ಕ್ರಿಸ್ಟೋಫರ್ ವೈಲಿ ಸ್ಫೋಟಕ ಮಾಹಿತಿ ಹೊರ ಹಾಕಿದ್ದು, ಕಾಂಗ್ರೆಸ್ ನನ್ನ ಗ್ರಾಹಕ ಎಂದು ಸ್ಪಷ್ಟಪಡಿಸಿದ್ದಾರೆ.
ಅನಾಲಿಟಿಕಾ ಸಂಸ್ಥೆ ಮೂಲಕ ಫೇಸ್ ಬುಕ್ ಮೂಲಕ ಲಕ್ಷಾಂತರ ಬಳಕೆದಾರರ ಮಾಹಿತಿಯನ್ನು ಕದ್ದು, ವ್ಯಕ್ತಿಯೊಬ್ಬ ತನ್ನ ಪಕ್ಷದ ಪರ ಬಳಕೆದಾರರನ್ನು ಪ್ರೇರೇಪಣೆ ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅನಾಲಿಟಿಕಾ ಸಂಸ್ಥೆಯ ವಿಶ್ಲೇಷಕ ಕ್ರಿಸ್ಟೋಫರ್ ವೈಲೀ. ಕಾಂಗ್ರೆಸ್ ನಮ್ಮ ಸಂಸ್ಥೆಯ ಗ್ರಾಹಕ ಪಕ್ಷ ಎಂಬುದನ್ನು ಬಹಿರಂಗಪಡಿಸಿಸಿದ್ದಾರೆ.
ಬ್ರಿಟನ್ ಸಂಸತ್ ಡಿಜಿಟಲ್, ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಸಮಿತಿ ಎದುರು ಮಂಗಳವಾರ ಮಾಹಿತಿ ನೀಡಿರುವ ಅವರು, ”ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಯೋಜನೆಗಳಲ್ಲಿ ನಾವು ಕಾಂಗ್ರೆಸ್ ಪರ ಕೆಲಸ ಮಾಡಿದ್ದೇವೆ. ಭಾರತದಲ್ಲಿ ಕಾಂಗ್ರೆಸ್ ನಮಗೆ (ಕೆಂಬ್ರಿಜ್ ಅನಾಲಿಟಿಕಾ) ಗ್ರಾಹಕ ‘ ಎಂದು ತಿಳಿಸಿದ್ದಾರೆ. ವೈಲೀ ಅವರ ಈ ಹೇಳಿಕೆ ಕುರಿತು ಸದ್ಯ ಕಾಂಗ್ರೆಸ್ ಪ್ರತಿಕ್ರಿಯಿಸಿಲ್ಲ. ಆದರೆ ಬಿಜೆಪಿ ಮಾತ್ರ ಕಾಂಗ್ರೆಸ್ ಕ್ಷಮೆ ಕೋರುವಂತೆ ಒತ್ತಾಯಿಸಿದೆ. ಈ ವಿಷಯವನ್ನು ನಿರಾಕರಿಸಿದ್ದ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನ ಅಸಲಿ ಮುಖ ಅನಾವರಣವಾಗಿದೆ.
Leave A Reply