ಶಾಕಿಂಗ್ ನ್ಯೂಸ್: ಪಾಕ್ ನಲ್ಲಿ ಗನ್ ತೋರಿಸಿ 500 ಹಿಂದೂಗಳ ಮತಾಂತರ
ಇಸ್ಲಾಮಾಬಾದ್: ಇಸ್ಲಾಂ ರಾಷ್ಟ್ರದ ಹೆಸರಲ್ಲಿ ಸ್ಥಾಪಿತವಾದ ಪಾಕಿಸ್ತಾದಲ್ಲಿ ಹಿಂದೂಗಳ ಸ್ಥಿತಿ ಹೀಆಯವಾಗಿದ್ದು, ನಿರಂತರವಾಗಿ ಹಿಂದೂಗಳ ಮೇಲೆ ಹಲ್ಲೆ, ದೌರ್ಜನ್ಯ, ಹಿಂಸೆ, ಹಿಂದೂ ಯುವತಿಯರ ಮೇಲೆ ಮತಾಂತರ ನಿರಂತರವಾಗಿ ನಡೆಯುತ್ತಿವೆ ಎಂಬುದಕ್ಕೆ ಮತ್ತೊಂದು ಸಾಕ್ಷಿಯೊಂದು ದೊರಕಿದೆ. ಪಾಕಿಸ್ತಾನದಲ್ಲಿ 500 ಹಿಂದೂಗಳನ್ನುಬಲವಂತವಾಗಿ ಮಾಡಿರುವ ದೌರ್ಜನ್ಯದ ಘಟನೆ ನಡೆದಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮಾ.25ರಂದು 500 ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ವಿಡಿಯೋ ಒಂದು ಹೊರ ಬಂದಿದ್ದು, ಭಾರತದ ರಾಷ್ಟ್ರೀಯ ವಾಹಿನಿ ಈ ಸ್ಫೋಟಕ ಸುದ್ದಿ ಹೊರ ಬಿದ್ದಿದೆ.
ಮತಾಂತರಕ್ಕೆ ಒಳಗಾದ ಬಹುತೇಕರು ನಿರಾಶ್ರಿತರಾಗಿ ಭಾರತಕ್ಕೆ ಬಂದಿದ್ದರು. ಅಲ್ಲದೇ ಭಾರತದಲ್ಲಿ ಧೀರ್ಘಾವದಿ ವೀಸಾ ದೊರೆಯದೇ ಪಾಕಿಸ್ತಾನಕ್ಕೆ ಮರಳಿದ್ದರು. ಪಾಕ್ ಗೆ ಮರಳಿರುವ ಎಲ್ಲರನ್ನು ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಸಮ್ಮುಖದಲ್ಲೇ ಮತಾಂತರ ಮಾಡಲಾಗಿದೆ. ಮುಷರ್ರಫ್ ನೇತೃತ್ವದ ಪಾಕಿಸ್ತಾನದ ಮುಸ್ಲಿಂ ಲೀಗ ಹಿಂದೂಗಳನ್ನು ಹೆದರಿಸಿ, ಗನ್ ತೋರಿಸಿ 500 ಹಿಂದೂಗಳನ್ನು ಇಸ್ಲಾಂ ಧರ್ಮವನ್ನು ಒಪ್ಪುವಂತೆ ಮಾಡಿದೆ.
ಮುಷರ್ರಫ್ ನೇತೃತ್ವದಲ್ಲಿ ಮತಾಂತರ ನಡೆದಿರುವುದು ಪಾಕಿಸ್ತಾನದಲ್ಲಿ ಹಿಂದೂಗಳ ಸ್ಥಿತಿ ಯಾವ ಮಟ್ಟಕ್ಕಿದೆ ಮತ್ತು ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸಾಕ್ಷಿಯಾಗಿ ನಿಂತಿದೆ. ಶೀಘ್ರದಲ್ಲಿ ಪಾಕಿಸ್ತಾನದಲ್ಲಿ ಚುನಾವಣೆ ನಡೆಯಲಿದ್ದು, ಈ ಕಾರಣಕ್ಕಾಗಿ ಮುಷರ್ರಫ್ ತನ್ನ ಹಳೇ ಚಾಳಿ ಮುಂದುವರಿಸಿದ್ದು, ಚುನಾವಣೆಗಾಗಿ ಮುಸ್ಲಿಮರ ಮತ ಸೆಳೆಯಲು ಹಿಂದೂಗಳ ಮೇಲೆ ಧ್ವೇಷ ಸಾಧಿಸುತ್ತಿದ್ದಾನೆ ಎನ್ನಲಾಗಿದೆ.
Leave A Reply